ಇಂದು ದಾವಣಗೆರೆಗೆ ಎದ್ದೇಳು ಕನ್ನಡಿಗ ಸದಸ್ಯತ್ವ ಅಭಿಯಾನ

| Published : Oct 09 2025, 02:00 AM IST

ಇಂದು ದಾವಣಗೆರೆಗೆ ಎದ್ದೇಳು ಕನ್ನಡಿಗ ಸದಸ್ಯತ್ವ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ "ಎದ್ದೇಳು ಕನ್ನಡಿಗ, ಕೆ.ಆರ್.ಎಸ್. ಪಕ್ಷ ಸೇರು ಬಾ " ಸದಸ್ಯತ್ವ ಅಭಿಯಾನ- ಸ್ವಚ್ಛ ಜನಪರ ಆಡಳಿತಕ್ಕಾಗಿ, ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ಹೋರಾಟದ ಮೂಲಕ ಬೃಹತ್ ಸದಸ್ಯತ್ವ ಅಭಿಯಾನ ದಾವಣಗೆರೆಯಲ್ಲಿ ನಡೆಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ಬಸವರಾಜಯ್ಯ ಹೇಳಿದ್ದಾರೆ.

- ಭ್ರಷ್ಟಾಚಾರಮುಕ್ತ ಕರ್ನಾಟಕ ನಿರ್ಮಿಸುವ ಉದ್ದೇಶ: ಜಿಲ್ಲಾಧ್ಯಕ್ಷ ಬಸವರಾಜಯ್ಯ ಮಾಹಿತಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ "ಎದ್ದೇಳು ಕನ್ನಡಿಗ, ಕೆ.ಆರ್.ಎಸ್. ಪಕ್ಷ ಸೇರು ಬಾ " ಸದಸ್ಯತ್ವ ಅಭಿಯಾನ- ಸ್ವಚ್ಛ ಜನಪರ ಆಡಳಿತಕ್ಕಾಗಿ, ಭ್ರಷ್ಟಾಚಾರ ಮುಕ್ತ ಕರ್ನಾಟಕಕ್ಕಾಗಿ ಹೋರಾಟದ ಮೂಲಕ ಬೃಹತ್ ಸದಸ್ಯತ್ವ ಅಭಿಯಾನ ದಾವಣಗೆರೆಯಲ್ಲಿ ನಡೆಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ಬಸವರಾಜಯ್ಯ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ತನ್ನ ಮಹತ್ವಾಕಾಂಕ್ಷೆಯ ''''''''ಎದ್ದೇಳು ಕನ್ನಡಿಗ. ಕೆಆರ್‌ಎಸ್ ಪಕ್ಷ ಸೇರು ಬಾ " ಘೋಷವಾಕ್ಯದಡಿ ಬೃಹತ್ ಸದಸ್ಯತ್ವ ಅಭಿಯಾನದ ಮೂಲಕ ದಾವಣಗೆರೆ ಜಿಲ್ಲೆಗೆ ಅ.9ರಂದು ಆಗಮಿಸುತ್ತಿದೆ ಎಂದರು.

ಅ.9ರಂದು ಬೆಳಗ್ಗೆ 10.30ಕ್ಕೆ ಪಕ್ಷದ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಚಾಲನೆ ನೀಡಲಿದ್ದಾರೆ. ಕಾಲ್ನಡಿಗೆ ಜಾಥಾವು ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ. ಅನಂತರ ಪಾಲಿಕೆ ಎದುರು ಬಹಿರಂಗ ಸಭೆ ನಡೆಯಲಿದೆ ಎಂದು ಹೇಳಿದರು.

ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ಮತ್ತಷ್ಟು ಗಟ್ಟಿ ಮಾಡಲು ಮತ್ತು ಪ್ರಾದೇಶಿಕ ಪಕ್ಷದ ಸಂಘಟನೆ ಬಲಪಡಿಸಲು ನಾಗರಿಕರ ನೇರ ಸಹಭಾಗಿತ್ವ ಹೆಚ್ಚಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶ. ಇದು ನಿಮ್ಮ ಪಕ್ಷ. ನಿಮ್ಮದೇ ಪಕ್ಷ, ನಿಮ್ಮದೇ ಸಹಭಾಗಿತ್ವ, ನಿಮ್ಮದೇ ಆಡಳಿತ " ಎಂಬ ಸಂದೇಶ ಕೆ.ಆರ್.ಎಸ್. ಪಕ್ಷವು ಈ ಅಭಿಯಾನದ ಮೂಲಕ ಜನತೆಗೆ ತಲುಪಿಸಲು ಬಯಸಿದೆ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟನಾಯ್ಕ ಮಾತನಾಡಿ, ಅಭಿಯಾನವು ರಾಜ್ಯಮಟ್ಟದಲ್ಲಿ ಅ.6ರಂದು ಬೆಂಗಳೂರಿನಿಂದ ಆರಂಭಗೊಂಡಿದೆ. ಪ್ರಥಮ ಹಂತದಲ್ಲಿ ರಾಜ್ಯಾದ್ಯಂತ 3 ತಂಡಗಳ ಮುಖಂಡರ ನೇತೃತ್ವದಲ್ಲಿ ಅಭಿಯಾನವು ಅ.16ರವರೆಗೆ ನಡೆಯಲಿದೆ. ಈ ಅಭಿಯಾನ ಶಿವಮೊಗ್ಗದ ಜಿಲ್ಲೆಯಿಂದ ಅ.9ರಂದು ದಾವಣಗೆರೆಗೆ ಆಗಮಿಸಲಿದೆ. ಮುಂದುವರಿದ ಅಭಿಯಾನ ಜಿಲ್ಲಾಮಟ್ಟದ ಕಾರ್ಯಕ್ರಮದ ನಂತರ, ಈ ತಿಂಗಳಾಂತ್ಯದವರೆಗೂ ಜಿಲ್ಲಾ ತಂಡದ ನೇತೃತ್ವದಲ್ಲಿ ತಾಲೂಕು, ಹೋಬಳಿ ಮತ್ತು ಹಳ್ಳಿಮಟ್ಟದಲ್ಲಿ ಸದಸ್ಯತ್ವ ಅಭಿಯಾನ ಮುಂದುವರಿಯಲಿದೆ ಎಂದರು.

ಪಕ್ಷಪಾತರಹಿತ, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಜಿಲ್ಲೆಯ ಎಲ್ಲ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಈ ಪ್ರಾದೇಶಿಕ ಶಕ್ತಿ ನಿರ್ಮಾಣದಲ್ಲಿ ಕೈ ಜೋಡಿಸಬೇಕೆಂದು ಕೆ.ಆರ್.ಎಸ್. ಪಕ್ಷ ಪರವಾಗಿ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಪ್ರಕಾಶ್ ನಾಯಕ್, ಎನ್.ಎಸ್.ಅಭಿಷೇಕ್, ಶಶಿಕುಮಾರ್, ಬಿ.ಎಸ್.ನಾಗರಾಜ್, ಕೆ.ದೀಪಕ್ ಇತರರು ಇದ್ದರು.

- - -

-8ಕೆಡಿವಿಜಿ34:

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎದ್ದೇಳು ಕನ್ನಡಿಗ ಅಭಿಯಾನ ದಾವಣಗೆರೆಗೆ ಆಗಮಿಸುವ ಕುರಿತು ಪುಟ್ಟನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.