ವಕ್ಪ್ ರದ್ದುಗೊಳಿಸುವಂತೆ ರಸ್ತೆ ರೋಖೋ ಚಳವಳಿ

| Published : Nov 14 2024, 12:53 AM IST

ವಕ್ಪ್ ರದ್ದುಗೊಳಿಸುವಂತೆ ರಸ್ತೆ ರೋಖೋ ಚಳವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಸುಮ್ಮನೆ ಕುಳಿತರೆ ನಾಳೆ ನಮ್ಮ ಮನೆ ಹಾಗೂ ಪಕ್ಕದ ಮನೆಯ ಜಾಗವನ್ನು ಸಹ ತಮ್ಮದು ಎಂದು ವಕ್ಫ್ ಬೋರ್ಡ್ ಹೇಳಿಕೊಳ್ಳಲು ಮುಂದಾಗುತ್ತದೆ. ಸರ್ಕಾರವು ತಕ್ಷಣವೇ ಸಚಿವ ಜಮೀರ್ ಆಹ್ಮದ ಅವರನ್ನು ಸಂಪುಟದಿಂದ ಕೈಬಿಡಬೇಕು ಹಾಗೂ ರೈತರ, ಮಠ, ಮಂದಿರ ಹಾಗೂ ಸಾರ್ವಜನಿಕರ ಪಹಣಿಗಳಲ್ಲಿ ವಕ್ಫ್ ಎಂದು ಹೇಳುವ ವಕ್ಫ್ ಬೊರ್ಡ್ ಕಿತ್ತಿ ಹಾಕಬೇಕು

ಗಜೇಂದ್ರಗಡ: ರಾಜ್ಯದ ರೈತರ ಜಮೀನು, ಮಠ, ಮಂದಿರ ಹಾಗೂ ಹಿಂದೂ ರುದ್ರಭೂಮಿಯನ್ನು ವಕ್ಫ್ ಆಸ್ತಿ ಎಂದು ನಮೂದಿಸಿದನ್ನು ವಿರೋಧಿಸಿ ಬುಧವಾರ ವಿಶ್ವ ಹಿಂದೂ ಪರಿಷದ್-ಭಜರಂಗದಳದಿಂದ ಪಟ್ಟಣದ ವಿವಿಧ ವೃತ್ತ ಹಾಗೂ ರಸ್ತೆಗಳಲ್ಲಿ ರಸ್ತಾ ರೋಖೋ ಚಳವಳಿ ನಡೆಯಿತು.

ಕಾಂಗ್ರೆಸ್ ಸರ್ಕಾರವು ರೈತರ ಜಮೀನು, ಮಠ, ಮಂದಿರ ಸೇರಿದಂತೆ ಸಾರ್ವಜನಿಕ ಆಸ್ತಿಗಳನ್ನು ವಕ್ಫ್ ಎಂದು ಪಹಣಿಯಲ್ಲಿ ನಮೂದಿಸಿ ಎಲ್ಲವು ತಮ್ಮದು ಎನ್ನುವ ದಾಟಿಯಲ್ಲಿ ಸಚಿವ ಜಮೀರ್ ಅಹ್ಮದ ವರ್ತಿಸುತ್ತಿದ್ದಾರೆ.ವಕ್ಫ್‌ ಕಂಬಂದ ಬಾಹು ತಾಲೂಕಿನ ನರೇಗಲ್, ರಾಜೂರ ಸೇರಿ ವಿವಿಧ ಗ್ರಾಮಗಳ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿರುವುದು ರೈತರ, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ ಎಂದ ಪ್ರತಿಭಟನಾಕಾರರು, ಸುಮ್ಮನೆ ಕುಳಿತರೆ ನಾಳೆ ನಮ್ಮ ಮನೆ ಹಾಗೂ ಪಕ್ಕದ ಮನೆಯ ಜಾಗವನ್ನು ಸಹ ತಮ್ಮದು ಎಂದು ವಕ್ಫ್ ಬೋರ್ಡ್ ಹೇಳಿಕೊಳ್ಳಲು ಮುಂದಾಗುತ್ತದೆ. ಸರ್ಕಾರವು ತಕ್ಷಣವೇ ಸಚಿವ ಜಮೀರ್ ಆಹ್ಮದ ಅವರನ್ನು ಸಂಪುಟದಿಂದ ಕೈಬಿಡಬೇಕು ಹಾಗೂ ರೈತರ, ಮಠ, ಮಂದಿರ ಹಾಗೂ ಸಾರ್ವಜನಿಕರ ಪಹಣಿಗಳಲ್ಲಿ ವಕ್ಫ್ ಎಂದು ಹೇಳುವ ವಕ್ಫ್ ಬೊರ್ಡ್ ಕಿತ್ತಿ ಹಾಕಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ಪಟ್ಟಣದ ಜಗದಂಬಾದೇವಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಕೊಳ್ಳಿಯವರ ಕತ್ರಿ, ಭಜರಂಗ ವೃತ್ತ, ಬಸವೇಶ್ವರ ವೃತ್ತ, ದುರ್ಗಾ ವೃತ್ತ ಸೇರಿ ಜೋಡು ರಸ್ತೆ ಮೂಲಕ ಕಾಲಕಾಲೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಭೆಯಾಗಿ ಮಾರ್ಪಟ್ಟಿತ್ತು. ಮೆರವಣಿಗೆಯುದ್ದಕ್ಕೂ ವಕ್ಫ್ ಹಠಾವೋ ದೇಶ ಬಚಾವೋ, ವಕ್ಫ್ ಕಾಯ್ದೆ ದೇಶಕ್ಕೆ ಗಂಡಾಂತರ ಸೇರಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದ ಹತ್ತಿರ ವಿಶ್ವ ಹಿಂದೂ ಪರಿಷದ್-ಭಜರಂಗದಳದ ಕೆಲ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಂಚಿ ರಸ್ತೆ ರೋಖೋ ನಡೆಸಿದರು.

ಘಟನೆ ಮಾಹಿತಿ ಪಡೆದ ಪೊಲೀಸರು ರಸ್ತೆಯಲ್ಲಿ ಬೆಂಕಿ ಹಚ್ಚಿದ ಟೈರ್‌ಗಳನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಯಥಾಸ್ಥಿತಿಗೊಳಿಸಿದ ಬಳಿಕ ಸಂಘಟನೆ ಕಾರ್ಯಕರ್ತರು ಬೈಕ್‌ಗಳಲ್ಲಿ ಪಟ್ಟಣದ ವಿವಿಧ ವೃತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಾಂಗ್ರೆಸ್ ಸರ್ಕಾರ ಹಾಗೂ ವಕ್ಫ್ ವಿರುದ್ಧ ಘೋಷಣೆ ಕೂಗಿದರು.

ವಿಶ್ವ ಹಿಂದೂ ಪರಿಷದ್-ಭಜರಂಗದಳ ಜಿಲ್ಲಾ ಕಾರ್ಯದರ್ಶಿ ಸಂಜೀವಕುಮಾರ ಜೋಷಿ, ಜಿಲ್ಲಾ ಉಪಾಧ್ಯಕ್ಷೆ ರಾಣಿ ಚೆಂದಾವರಿ, ಪುರಸಭೆ ಮಾಜಿ ಸದಸ್ಯ ಮಂಜುನಾಥ ಬಡಿಗೇರ, ಗ್ರಾಪಂ ಸದಸ್ಯ ಬಾಳಾಜಿರಾವ್ ಬೋಸಲೆ, ಬಿ.ಎಂ. ಸಜ್ಜನರ, ಪರಶುರಾಮ ಭಾವಿಕಟ್ಟಿ, ವಿನಾಯಕ ಜರತಾರಿ, ಸಂತೋಷ ವಸ್ತ್ರದ, ಪ್ರಸಾದ ಬಡಿಗೇರ, ಅನುರಾಗ ಚಿನಿವಾಲರ, ಅಶೋಕ ಜಕ್ಕಲಿ, ಉಮೇಶ ಚನ್ನುಪಾಟೀಲ, ಶ್ರೀನಿವಾಸ ಸವದಿ ಸೇರಿ ಇತರರು ಭಾಗವಹಿಸಿದ್ದರು.