ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ಬಹುತೇಕ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ಅವಶ್ಯ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರುಣಕುಮಾರಿಯವರು ಮಾತನಾಡಿ ಕಾನೂನಿನ ಚೌಕಟ್ಟಿನಲ್ಲಿ ರಸ್ತೆ ನಿಯಮದ ಉಲ್ಲಂಘನೆಗೆ ಇರುವ ಶಿಕ್ಷೆ ಹಾಗೂ ದಂಡಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕಿನಲ್ಲಿ ಕಾನೂನು ಸೇವಾ ಸಮಿತಿಯು ರಚನೆಯಾಗಿದ್ದು, ಈ ಸಮಿತಿಯ ಮೂಲಕ ಕೆಲವು ನಿಬಂಧನೆಗಳಿಗೊಳಪಟ್ಟಂತೆ ಸಾರ್ವಜನಿಕರು ಉಚಿತ ಕಾನೂನು ಸೇವೆ ಪಡೆದುಕೊಳ್ಳಬಹುದಾಗಿದೆ ಎಂದರು. ಮೋಟಾರು ವಾಹನ ನಿರೀಕ್ಷಕರಾದ ಆಶಾ ಎನ್. ಆರ್‌. ಅವರು ಮಾತನಾಡಿ ರಸ್ತೆ ಸಾರಿಗೆಯ ನಿಯಮಗಳು, ಎಚ್ಚರಿಕೆಯ ಚಿಹ್ನೆಗಳು, ಪ್ರತಿಯೊಬ್ಬ ವಾಹನ ಚಾಲಕರು ವಹಿಸಬೇಕಾದ ಎಚ್ಚರಿಕೆಗಳು, ಹೊಂದಿರಬೇಕಾದ ದಾಖಲೆಗಳ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

೩೭ನೇ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಜ್ಞಾನಸಾಗರ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಹಾಸನದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಜೆ. ಪಿ. ಪ್ರಕಾಶ್‌ರವರು ಮಾತನಾಡಿ ರಸ್ತೆ ನಿಯಮಗಳು ಸಾರ್ವಜನಿಕರ ಹಿತದೃಷ್ಟಿಯಿಂದ ರೂಪಿತವಾಗಿರುವ ನಿಯಮಗಳಾಗಿವೆ, ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ಬಹುತೇಕ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳು ಅವಶ್ಯ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರುಣಕುಮಾರಿಯವರು ಮಾತನಾಡಿ ಕಾನೂನಿನ ಚೌಕಟ್ಟಿನಲ್ಲಿ ರಸ್ತೆ ನಿಯಮದ ಉಲ್ಲಂಘನೆಗೆ ಇರುವ ಶಿಕ್ಷೆ ಹಾಗೂ ದಂಡಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕಿನಲ್ಲಿ ಕಾನೂನು ಸೇವಾ ಸಮಿತಿಯು ರಚನೆಯಾಗಿದ್ದು, ಈ ಸಮಿತಿಯ ಮೂಲಕ ಕೆಲವು ನಿಬಂಧನೆಗಳಿಗೊಳಪಟ್ಟಂತೆ ಸಾರ್ವಜನಿಕರು ಉಚಿತ ಕಾನೂನು ಸೇವೆ ಪಡೆದುಕೊಳ್ಳಬಹುದಾಗಿದೆ ಎಂದರು. ಮೋಟಾರು ವಾಹನ ನಿರೀಕ್ಷಕರಾದ ಆಶಾ ಎನ್. ಆರ್‌. ಅವರು ಮಾತನಾಡಿ ರಸ್ತೆ ಸಾರಿಗೆಯ ನಿಯಮಗಳು, ಎಚ್ಚರಿಕೆಯ ಚಿಹ್ನೆಗಳು, ಪ್ರತಿಯೊಬ್ಬ ವಾಹನ ಚಾಲಕರು ವಹಿಸಬೇಕಾದ ಎಚ್ಚರಿಕೆಗಳು, ಹೊಂದಿರಬೇಕಾದ ದಾಖಲೆಗಳ ಮಾಹಿತಿ ನೀಡಿದರು.

ನಾಗೇಶ್ ಎಜುಕೇಶನ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಕೆ. ನಾಗೇಶ್ ಮಾತನಾಡಿ, ರಸ್ತೆ ಅಪಘಾತವಾದಾಗ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಅಪಘಾತಕ್ಕೊಳಗಾದ ವ್ಯಕ್ತಿಗಳನ್ನು ಸಾವಿನಿಂದ ತಪ್ಪಿಸಬಹುದು ಎಂಬ ಸಲಹೆಗಳನ್ನು, ಸೂಚನೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಕುಮಾರ್‌, ಸರ್ಕಲ್ ಇನ್ಸ್ಪೆಕ್ಟರ್‌ ರಘುಪತಿ, ಚನ್ನರಾಯಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಇಂದ್ರ, ಸೂಪರ್ ವೈಸರ್ ಮಮತ, ನಾಗೇಶ್ ಎಜುಕೇಶನ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಭಾರತಿ ನಾಗೇಶ್, ಡೀನ್ ಡಾ. ಸುಜಾ ಪಿ. ಎಸ್, ಆಡಳಿತಾಧಿಕಾರಿ ಪಿಲಿಫ್, ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.