ಸಾರಾಂಶ
ದುಡಿದಿಲ್ಲ, ಕೈ ಕೆಸರಾಗಿಲ್ಲ. ನೋವು ಅನುಭವಿಸಿಲ್ಲ. ರೈತರ ಕಷ್ಟ ಗೊತ್ತಿಲ್ಲದ ಸರ್ಕಾರಗಳೇ, ಒಂದು ಎಕರೆ ಕೃಷಿ ಮಾಡಿ, ಕಷ್ಟ ಏನೆಂದು ಅರಿತುಕೊಂಡು ದೆಹಲಿ ಚಲೋ ಹೊರಟಿರುವ ಅನ್ನದಾತರ ಕಣ್ಣೀರಿನ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಲ್ಪಿಸಿ.
ಕನ್ನಡಪ್ರಭ ವಾರ್ತೆ ಶ್ರೀನಿವಾಸಪುರ
ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಹಾಗೂ ಬರದಿಂದ ತತ್ತರಿಸಿರುವ ಗ್ರಾಮೀಣ ಪ್ರದೇಶದ ರೈತ, ಕೂಲಿಕಾರ್ಮಿಕರ ರಕ್ಷಣೆಗೆ ನರೇಗಾದಲ್ಲಿ ೩೬೫ ದಿನ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ ರೈತ ಸಂಘದಿಂದ ಗ್ರಾಮೀಣ ಹೆದ್ದಾರಿ ರೋಜಾರ್‍ನಹಳ್ಳಿ ಕ್ರಾಸ್ ಬಳಿ ತರಕಾರಿ ಸಮೇತ ರಸ್ತೆ ತಡೆದು ಸರ್ಕಾರವನ್ನು ಒತ್ತಾಯಿಸಿದರು.ದುಡಿದಿಲ್ಲ, ಕೈ ಕೆಸರಾಗಿಲ್ಲ. ನೋವು ಅನುಭವಿಸಿಲ್ಲ. ರೈತರ ಕಷ್ಟ ಗೊತ್ತಿಲ್ಲದ ಸರ್ಕಾರಗಳೇ, ಒಂದು ಎಕರೆ ಕೃಷಿ ಮಾಡಿ, ಕಷ್ಟ ಏನೆಂದು ಅರಿತುಕೊಂಡು ದೆಹಲಿ ಚಲೋ ಹೊರಟಿರುವ ಅನ್ನದಾತರ ಕಣ್ಣೀರಿನ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಲ್ಪಿಸಿ ಎಂದು ಕೇಂದ್ರ ಸರ್ಕಾರಕ್ಕೆ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಒತ್ತಾಯಿಸಿದರು.
ರೈತರು ಏನೂ ಪಾಪ ಮಾಡಿದ್ದಾರೋ ಗೊತ್ತಿಲ್ಲ, ಪ್ರತಿಯೊಂದು ಸಮಸ್ಯೆಗೂ ಪರಿಹಾರಕ್ಕಾಗಿ ಬೀದಿಗೆ ಬಂದು ಹೋರಾಟ ಮಾಡಬೇಕಾಗಿದೆ. ತನ್ನ ಪ್ರಾಣ ತ್ಯಾಗ ಮಾಡುವ ಅನ್ನದಾತನ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.ತಾಲೂಕಾಧ್ಯಕ್ಷ ತೆರ್‍ನಹಳ್ಳಿ ಆಂಜಿನಪ್ಪ, ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ದ್ಯಾವಂಡಹಳ್ಳಿ ರಾಜೇಂದ್ರಣ್ಣ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟಿ ಶಿವು, ರಾಮಕೃಷ್ಣಪ್ಪ, ಗಣೇಶ್, ಹನುಮಣ್ಣ, ಸುಪ್ರೀಂ ಚಲ, ತಿಮ್ಮಣ್ಣ, ಶೇಖ್ ಷಫೀ ಉಲ್ಲಾ, ಸಹದೇವಣ್ಣ, ವೆಂಕಟೇಶ್ ಇದ್ದರು.