ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ತಾಲೂಕು ಸವಿತಾ ಸಮಾಜದ ವತಿಯಿಂದ ಸವಿತಾ ಮಹರ್ಷಿ ಜಯಂತಿ ಹಿನ್ನಲೆಯಲ್ಲಿ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಅಪ್ಪಂಗಳ ರಾಕರ್ಸ್ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.ಮಡಿಕೇರಿ ತಾಲೂಕಿನ ಸಮಾಜಬಾಂಧವರಿಗೆ ಆಯೋಜಿಸಿದ್ದ ಸೂಪರ್ ನೈನ್ ಆಟಗಾರರ ಪಂದ್ಯಾಟದಲ್ಲಿ 4 ತಂಡಗಳು ಪಾಲ್ಗೊಂಡಿತ್ತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದ ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಎಂಸಿಬಿ(ಮಡಿಕೇರಿ ಕಜ್ಹೀನ್ ಬದರ್ಸ್) ತಂಡ ನಿಗದಿತ 4 ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು 58 ರನ್ ಕಲೆಹಾಕಿತು. ಗುರಿಬೆನ್ನಟ್ಟಿದ ಅಪ್ಪಂಗಳ ರಾಕರ್ಸ್ ತಂಡ 3.2. ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು ಚಾಂಪಿಯನ್ ಪಟ್ಟ ಅಲಂಕರಿಸಿತು. ಎಂಸಿಬಿ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು.
ಇದಕ್ಕೂ ಮುನ್ನ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತ ಎಂಎಂಎಸ್(ಮಡಿಕೇರಿ ಸವಿತಾ ಸಮಾಜ) ತಂಡ ನಿಗದಿತ 4 ಓವರ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 37ರನ್ ಕಲೆ ಹಾಕಿತು. ಅಲ್ಪ ಮೊತ್ತದ ಗುರಿಬೆನ್ನಟ್ಟಿದ ಅಪ್ಪಂಗಳ ರಾಕರ್ಸ್ ತಂಡ 2.1 ಓವರ್‌ನಲ್ಲಿ 1 ವಿಕೆಟ್ ಕಳೆದುಕೊಂಡು ಫೈನಲ್ ಪ್ರವೇಶ ಪಡೆಯಿತು.ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಮಡಿಕೇರಿ ಸವಿತಾ ಸಮಾಜ ಮಹಿಳಾ ಘಟಕ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಚೆಟ್ಟಿಮಾನಿ ಸವಿತಾ ಸಮಾಜ ಮಹಿಳಾ ಘಟಕ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು.
ವೈಯಕ್ತಿಕ ಪ್ರಶಸ್ತಿ ವಿವರ: ಬೆಸ್ಟ್ ಬ್ಯಾಟ್ಸ್ಮನ್ ಮತ್ತು ಅತೀ ಸಿಕ್ಸ್ ಬಾರಿಸಿದ ಆಟಗಾರ ಪ್ರಶಸ್ತಿಯನ್ನು ಸುಜನ್ ಕುಶಾಲಪ್ಪ, ಬೆಸ್ಟ್ ಬೌಲರ್ ಪವನ್, ಎಮರ್ಜಿಂಗ್ ಪ್ಲೇಯರ್ ಪ್ರಶಸ್ತಿ ತನೀಶ್ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ರಮ್ಯ ಪಡೆದುಕೊಂಡರೆ, ಅತೀ ಹೆಚ್ಚು ರನ್ ಬಾರಿಸಿದ ಆಟಗಾರ್ತಿಯಾಗಿ ಅಕ್ಷತಾ ಪಡೆದುಕೊಂಡರು.ವಿವಿಧ ಸ್ಪರ್ಧೆಗಳ ವಿವರ: ಚಿಕ್ಕ ಮಕ್ಕಳಿಗೆ ನಡೆದ ಬಕೇಟ್‌ಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಲಾಸ್ಯ ಪ್ರಥಮ ಸ್ಥಾನ ಪಡೆದರೆ, ಕುಲದೀಪ್ ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ಒಂಟಿ ಕಾಲು ಓಟದ ಸ್ಪರ್ಧೆದಲ್ಲಿ ದ್ರುವಿ(ಪ್ರ), ಸ್ಪೂರ್ತಿ(ದ್ವಿ), ಬಾಲಕರ ವಿಭಾಗದಲ್ಲಿ ತಾನೀಶ್(ಪ್ರ), ಪ್ರೀತಂ ದ್ವಿತೀಯ ಸ್ಥಾನ ಪಡೆದರು. ವಯಸ್ಕರಿಗೆ ನಡೆದ ವೇಗದ ನಡಿಗೆ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಸುಂದರಮ್ಮ(ಪ್ರ), ಸರೋಜಾ(ದ್ವಿ), ಪುರುಷರ ವಿಭಾಗದಲ್ಲಿ ಮೊಣ್ಣಪ್ಪ(ಪ್ರ), ವಿಜಯ ಭಂಡಾರಿ ದ್ವಿತೀಯ ಸ್ಥಾನ ಪಡೆದರು.
ಮಹಿಳೆಯರಿಗೆ ನಡೆದ ನಿಂಬೆ ಚಮಚ ಓಟದ ಸ್ಪರ್ಧೆಯಲ್ಲಿ ನೀಮಾ ಪ್ರವೀಣ್(ಪ್ರ), ನಮಿತಾ ಕಿರಣ್(ದ್ವಿ), ಪೆನಾಲ್ಟಿ ಶೂಟ್‌ನಲ್ಲಿ ದೇವಿ ಪ್ರಸಾದ್(ಪ್ರ), ಕುಮಾರ(ದ್ವಿ), ಮಹಿಳೆಯರ ವಿಭಾಗದಲ್ಲಿ ಭೂಮಿಕ(ಪ್ರ), ಧನ್ಯ ಮಧು(ದ್ವಿ), ಏರ್ ಗನ್ ಶೂಟಿಂಗ್ ಸ್ಪರ್ಧೆಯಲ್ಲಿ ಮಧು ಚೆಟ್ಟಿಮಾಣಿ(ಪ್ರ), ಪ್ರಸನ್ನ ಚೇರಂಬಾಣೆ(ದ್ವಿ), ಯೋಗೇಶ್ ಅಂಡ್ ನಿಖಿಲ್ ತೃತೀಯ ಸ್ಥಾನ ಪಡೆದುಕೊಂಡರು.ಸಮಾರೋಪ ಸಮಾರಂಭದ ಮಡಿಕೇರಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಎಂ.ಟಿ.ಮಧು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷ ಕೆ.ಎಸ್.ದೊರೇಸ್, ಕಾರ್ಯದರ್ಶಿ ಅವಿನಾಶ್ ಬೊಟ್ಲಪ್ಪ, ನಗರಾಧ್ಯಕ್ಷ ಸಂದೇಶ್, ಉಪಾಧ್ಯಕ್ಷ ಮಂಜು ಕಿರಣ್, ಲತಾ ಭಂಡಾರಿ, ಕ್ರೀಡಾ ಅಧ್ಯಕ್ಷ ಮಧು ಚಟ್ಟಿಮಾನಿ, ತೀರ್ಪುಗಾರರಾದ ವಿನಯ್ ಇತರರು ಭಾಗವಹಿಸಿದ್ದರು.