ಶಹಾಪುರ : ಶಾರದಹಳ್ಳಿಯ ಮಾರುತೇಶ್ವರ ನಾಟ್ಯ ಕಲಾವಿದರ ಸಂಘದಿಂದ ದೊಡ್ಡ ಸಗರದಲ್ಲಿ ನಾಟಕೋತ್ಸವ : ಸಾಂಸ್ಕೃತಿಕ ಸಂಭ್ರಮ

| Published : Sep 03 2024, 01:48 AM IST / Updated: Sep 03 2024, 05:14 AM IST

ಶಹಾಪುರ : ಶಾರದಹಳ್ಳಿಯ ಮಾರುತೇಶ್ವರ ನಾಟ್ಯ ಕಲಾವಿದರ ಸಂಘದಿಂದ ದೊಡ್ಡ ಸಗರದಲ್ಲಿ ನಾಟಕೋತ್ಸವ : ಸಾಂಸ್ಕೃತಿಕ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಶಾರದಹಳ್ಳಿಯ ಮಾರುತೇಶ್ವರ ನಾಟ್ಯ ಕಲಾವಿದರ ಸಂಘದಿಂದ ದೊಡ್ಡ ಸಗರದಲ್ಲಿ ವಿಶೇಷ ನಾಟಕೋತ್ಸವವನ್ನು ಆಯೋಜಿಸಲಾಗಿತ್ತು. ಗ್ರಾಮ ಪಂಚಾಯತ್ ಅಧ್ಯಕ್ಷರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

 ಶಹಾಪುರ :  ಶಾರದಹಳ್ಳಿಯ ಮಾರುತೇಶ್ವರ ನಾಟ್ಯ ಕಲಾವಿದರ ಸಂಘದಿಂದ ತಾಲೂಕಿನ ದೊಡ್ಡ ಸಗರದ ಭಾಗ್ಯವಂತಿ ದೇವಸ್ಥಾನ ಆವರಣದಲ್ಲಿ ವಿಶೇಷ ನಾಟಕೋತ್ಸವ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಸಂತೋಷಗೌಡ ಸುಬೇದಾರ್, ನಾಟಕ ಕಲೆ ಬಹು ಪುರಾತನವಾದದ್ದು, ಇದು ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಸಂದೇಶ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಆಧುನಿಕತೆಯ ಸವಲತ್ತುಗಳು ಬರುವ ಮುಂಚೆ ದೇಶದಲ್ಲಿ ಸಾಮಾಜಿಕ ಮನರಂಜನೆಯ ತಾಣವಾಗಿತ್ತು. ಇಂದಿಗೂ ನಾಟಕ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡು ಜನಮಾನಸದಲ್ಲಿ ಉಳಿದಿದೆ ಎಂದರು.

ಗ್ರಾ.ಪಂ. ಮಾಜಿ ಸದಸ್ಯರಾದ ಚಂದಣ್ಣ, ನಿಂಗಣ್ಣಗೌಡ ಮಾಲಿ ಪಾಟೀಲ್, ಮಾಜಿ ಅಧ್ಯಕ್ಷ ತಿರುಪತಿ ಹತ್ತಿಕಟಿಗಿ, ಎಪಿಎಂಸಿ ಸದಸ್ಯ ಲಕ್ಷ್ಮಣ ಊರಕಾಯಿ, ಸಗರ ಗ್ರಾ.ಪಂ. ಮಾಜಿ ಅಧ್ಯಕ್ಷ ಮಾನಪ್ಪ ವಠಾರ, ಮಾಜಿ ಉಪಾಧ್ಯಕ್ಷ ಶಂಭುಲಿಂಗಪ್ಪ ಮ್ಯಾಗೇರಿ, ಮುಖಂಡ ಭೀಮಣ್ಣ ವಠಾರ ಇದ್ದರು. ಬಸವರಾಜ ಪೂಜಾರಿ ಜ್ಯೋತಿ ಬೆಳಗಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ದೊಡ್ಡ ನಾಗೇಶ ವಹಿಸಿದ್ದರು.

ನಾಟಕ ಪ್ರದರ್ಶನದಲ್ಲಿ ನಟ, ನಾಟಕ ನಿರ್ದೇಶಕ, ನಾಗೇಶ ಶಾರದಳ್ಳಿ, ರಂಗಭೂಮಿ ಕಲಾವಿದೆ ಜಯಮ್ಮ, ಹಾಸ್ಯ ಕಲಾವಿದೆ ಭಾಗ್ಯಶ್ರೀ ಶಾರದಳ್ಳಿ, ರತ್ನಮ್ಮ ಶಾರದಳ್ಳಿ, ಹಾಸ್ಯ ಕಲಾವಿದ ಹಾಗೂ ಸಹ ನಿರ್ದೇಶಕ ದಿಲೀಪ್ ಶಾರದಳ್ಳಿ, ಪ್ಯಾಡ್ ಮಾಸ್ಟರ್ ಬಸವರಡ್ಡಿ ಶಾರದಳ್ಳಿ ಸೇರಿದಂತೆ ಅನೇಕ ನಟರು ಭಾಗಿಯಾದ್ದರು.