ಮಕ್ಕಳ ಪ್ರತಿಭೆ ಹೊರ ತೆಗೆಯಲು ಶಿಕ್ಷಕರು ಮತ್ತು ಪೋಷಕರ ಪಾತ್ರ ಮುಖ್ಯ: ಆಶಯ್‌ ಮಧು

| Published : Feb 21 2024, 02:00 AM IST

ಮಕ್ಕಳ ಪ್ರತಿಭೆ ಹೊರ ತೆಗೆಯಲು ಶಿಕ್ಷಕರು ಮತ್ತು ಪೋಷಕರ ಪಾತ್ರ ಮುಖ್ಯ: ಆಶಯ್‌ ಮಧು
Share this Article
  • FB
  • TW
  • Linkdin
  • Email

ಸಾರಾಂಶ

ಚಾಂಷುಗರ್ ಪ್ರೌಢಶಾಲೆ ಪುಣ್ಯಶ್ರೀಗೆ ಪ್ರಥಮ 5 ಸಾವಿರ ರು., ಯಲಿಯೂರು ಶ್ರೀಆಂಜನೇಯ ಪ್ರೌಢಶಾಲೆ ತನುಷ್‌ಗೌಡಗೆ ದ್ವಿತೀಯ 3 ಸಾವಿರ ರು., ಭಾರತೀ ಪ್ರೌಢಶಾಲೆ ಬಿ.ದಿವ್ಯಗೆ ತೃತೀಯ 2 ಸಾವಿರ ರು. ನಗದು ಹಾಗೂ ಎಲ್ಲರಿಗೂ ಪಾರಿತೋಷಕ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಭಾರತೀನಗರಮಕ್ಕಳಲ್ಲಿರುವ ಪ್ರತಿಭೆ ಹೊರತೆಗೆಯುವಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಮುಖ್ಯ ಎಂದು ಭಾರತೀ ಎಜುಕೇಷನ್ ಟ್ರಸ್ಟ್‌ನ ಸಿಇಒ ಆಶಯ್‌ ಮಧು ತಿಳಿಸಿದರು.

ಭಾರತೀ ಕುವೆಂಪು ಸಭಾಂಗಣದಲ್ಲಿ ಪ್ರೌಢ ಶಾಲೆ ವತಿಯಿಂದ ಆಯೋಜಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ದಿ.ಎಚ್.ಕೆಂಡೇಗೌಡರ ಸ್ಮರಣಾರ್ಥ ನಡೆದ ಜಿಲ್ಲಾ ಮಟ್ಟದ 46 ನೇ ವರ್ಷದ ಅಂತರ ಪ್ರೌಢಶಾಲಾ ಕನ್ನಡ ಚರ್ಚಾಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಮಕ್ಕಳಿಗೆ ಆಸ್ತಿ ಮಾಡುವ ಬದಲು ಪೋಷಕರು ಮಕ್ಕಳನ್ನೇ ಶಿಕ್ಷಣ ನೀಡುವ ಮೂಲಕ ಆಸ್ತಿಯನ್ನಾಗಿ ಮಾಡಬೇಕು ಎಂದರು.

ಈ ವೇಳೆ ಚಾಂಷುಗರ್ ಪ್ರೌಢಶಾಲೆ ಪುಣ್ಯಶ್ರೀಗೆ ಪ್ರಥಮ 5 ಸಾವಿರ ರು., ಯಲಿಯೂರು ಶ್ರೀಆಂಜನೇಯ ಪ್ರೌಢಶಾಲೆ ತನುಷ್‌ಗೌಡಗೆ ದ್ವಿತೀಯ 3 ಸಾವಿರ ರು., ಭಾರತೀ ಪ್ರೌಢಶಾಲೆ ಬಿ.ದಿವ್ಯಗೆ ತೃತೀಯ 2 ಸಾವಿರ ರು. ನಗದು ಹಾಗೂ ಎಲ್ಲರಿಗೂ ಪಾರಿತೋಷಕ ನೀಡಲಾಯಿತು.

ಶ್ರೀಚಾಂಷುಗರ್ ಪ್ರೌಢಶಾಲೆ ಹರಿಪ್ರಿಯಾ, ತಳಗವಾದಿ ಪ್ರೌಢಶಾಲೆಯ ಐಶ್ವರ್ಯ, ಕಲ್ಕುಣಿ ಮಲ್ಲಿಕಾರ್ಜುನ ಪ್ರೌಢಶಾಲೆ ನಂದಿನಿ, ಕೇಂಬ್ರಿಡ್ಜ್ ಆಂಗ್ಲಮಾಧ್ಯಮ ಶಾಲೆ ಅಭಿನಯ, ಡಿ.ಕೆ.ಗೌಡ ಪ್ರೌಢಶಾಲೆ ಹಂಸಿಣಿ, ಭಾರತೀ ಪ್ರೌಢಶಾಲೆಯ ಆರ್.ಮಂಗಳ, ಜನನಿ ವಿದ್ಯಾಸಂಸ್ಥೆ ನಮಿತ, ಅನಿಕೇತನ ಪ್ರೌಢಶಾಲೆ ಯಮುನಾ, ಕೇಂಬ್ರಿಡ್ಜ್ ಆಂಗ್ಲಮಾಧ್ಯಮ ಪ್ರೌಢಶಾಲೆ ಹೃತಿಕ, ಆರ್ಯಭಟ ಪ್ರೌಢಶಾಲೆ ಹೇಮಶ್ರೀ, ಸ್ಪೂರ್ತಿ, ಡಿ.ಕೆ.ಗೌಡ ಪ್ರೌಢಶಾಲೆ ಕವನ, ದಿವ್ಯಜ್ಯೋತಿ, ಪ್ರೌಢಶಾಲೆ ತನುಜ, ದಿವ್ಯಜ್ಯೋತಿ ಪ್ರೌಢಶಾಲೆ ಕೀರ್ತನ, ಪೂರ್ಣಪ್ರಜ್ಞಾ, ಪ್ರೌಢಶಾಲೆ ಮೇಘನ ಎಸ್.,ಶ್ರೀಕಂಠೇಶ್ವರ ಪ್ರೌಢಶಾಲೆ ಸೃಷ್ಠಿ, ಜಿ.ಎಸ್.ಸಿ. ತಳಗವಾದಿಯ ದೇವಿಕಾಗೆ ವೈಯುಕ್ತಿವಾಗಿ ಕ್ರಮವಾಗಿ 20 ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ತೀರ್ಪುಗಾರರಾಗಿ ಚನ್ನಪಟ್ಟಣ ಚನ್ನಾಂಬಿಕ ಪದವಿ ಮತ್ತು ಪ.ಪೂ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಿ.ಜಿ.ಶಕುಂತಲ, ಮಂಡ್ಯ ಸಾಹಿತಿ ರೋಷನ್ ಜೋಪ್ರ, ನಂಜನಗೂಡು ತಾಲೂಕಿನ ಸಿಂಧುವಳ್ಳಿ ಉ.ಸ.ಹಿ.ಪ್ರೌಢಶಾಲೆ ಶಿಕ್ಷಕ ಕೆ.ಎಸ್.ಪ್ರಕಾಶ್ ಭಾಗಹಿಸಿದ್ದರು.

ವೇದಿಕೆಯಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಮುಖ್ಯಶಿಕ್ಷಕ ಪಿ.ರಾಜೇಂದ್ರಅರಸು, ನಿವೃತ್ತ ಮುಖ್ಯಶಿಕ್ಷಕ ಎಂ.ಮಾಯಪ್ಪ, ಕೆಂಡೇಗೌಡರ ಪುತ್ರ ಪ್ರಕಾಶ್, ಎಂ.ಎಸ್.ಶಿವಣ್ಣ, ಶಿಕ್ಷಕರಾದ ನಾಗರಾಜು, ಜಗದೀಶ್, ದೇವರಾಜು, ಬಸವರಾಜು, ನಂದಿನಿ, ಶಿವಮಣಿ, ಶಿಲ್ಪ ಸೇರಿದಂತೆ ಹಲವರಿದ್ದರು.