ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ: ನಸೀರ್ ಅಹ್ಮದ್

| Published : Sep 06 2024, 01:01 AM IST / Updated: Sep 06 2024, 01:02 AM IST

ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ: ನಸೀರ್ ಅಹ್ಮದ್
Share this Article
  • FB
  • TW
  • Linkdin
  • Email

ಸಾರಾಂಶ

ವಿಧ್ಯಾರ್ಥಿಗಳೇ ದೇಶದ ಆಸ್ತಿಯಾಗಿದ್ದಾರೆ, ಗುರುಗಳ ಮಾರ್ಗದರ್ಶನದಲ್ಲಿ ಸಾಧಿಸಿ ನೀವೆಲ್ಲರೂ ಉತ್ತಮ ಹೆಸರು ಗಳಿಸಬೇಕು, ಆಗಲೇ ನಿಮ್ಮ ತಂದೆ- ತಾಯಿಯ ಜೊತೆಗೆ ವಿದ್ಯೆ ಕಲಿಸಿದ ಗುರುಗಳಿಗೂ ಗೌರವ ಸಿಗುತ್ತದೆ.

ಕನ್ನಡಪ್ರಭ ವಾರ್ತೆ ಕೋಲಾರ

ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಜ್ಞಾನ ಸಂಪತ್ತನ್ನು ಪಡೆದು ಉತ್ತಮ ನಾಗರಿಕರಾಗಬೇಕು ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅಭಿಪ್ರಾಯಪಟ್ಟರು.

ನಗರದ ಮಹಿಳಾ ಸಮಾಜ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಓದಲಿಕ್ಕೆ ಪೂರಕವಾದ ವಾತಾವರಣ ಇರಲಿಲ್ಲ. ಇಂದು ಕಣ್ಣು ಮುಂದೆ ತಂತ್ರಜ್ಞಾನವನ್ನು ನೋಡಬಹುದಾದ ಸಂದರ್ಭದಲ್ಲಿ ನಾವಿದ್ದೇವೆ, ಕಾಲೇಜುಗಳಲ್ಲಿ ಹೊಸ ಹೊಸ ಕೋರ್ಸ್ ಗಳ ಜೊತೆಗೆ ಸೌಲಭ್ಯಗಳನ್ನು ನೀಡುವ ಕೆಲಸ ನಡೆಯುತ್ತಿದೆ ಎಂದರು.

ಹಿಂದೆ ಕೋಲಾರ ಜಿಲ್ಲೆ ಎಂದರೆ ಸಿವಿಲ್ ಸರ್ವಿಸ್ ಹುದ್ದೆಗಳ ತವರು ಮನೆಯಾಗಿತ್ತು. ಎಲ್ಲಾ ಇಲಾಖೆಗಳಲ್ಲಿ ಜಿಲ್ಲೆಯ ಅಧಿಕಾರಿ ವರ್ಗ ಇತ್ತು. ಆ ಇತಿಹಾಸ ಮರುಕಳಿಸಬೇಕಾದರೆ ನೀವು ಶಿಸ್ತುನಿಂದ ಕಲಿಯಬೇಕು ಎಂದರು.

ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ವಿಧ್ಯಾರ್ಥಿಗಳೇ ದೇಶದ ಆಸ್ತಿಯಾಗಿದ್ದಾರೆ, ಗುರುಗಳ ಮಾರ್ಗದರ್ಶನದಲ್ಲಿ ಸಾಧಿಸಿ ನೀವೆಲ್ಲರೂ ಉತ್ತಮ ಹೆಸರು ಗಳಿಸಬೇಕು, ಆಗಲೇ ನಿಮ್ಮ ತಂದೆ- ತಾಯಿಯ ಜೊತೆಗೆ ವಿದ್ಯೆ ಕಲಿಸಿದ ಗುರುಗಳಿಗೂ ಗೌರವ ಸಿಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿದರು.

ಮಹಿಳಾ ಸಮಾಜ ಆಡಳಿತಾಧಿಕಾರಿ ಎಂ.ನವೀನಾ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸದಸ್ಯರಾದ ರಾಕೇಶ್, ಅಂಬರೀಷ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ. ಶಿವಕುಮಾರ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯರಾದ ಸೀಸಂದ್ರ ಗೋಪಾಲಗೌಡ, ಅರ್ಬಾಜ್ ಪಾಷ, ಜೈದೀಪ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಮುಖಂಡರಾದ ಗಂಗಣ್ಣ, ಕುರಿಗಳ ರಮೇಶ್ ಅಬ್ದುಲ್ ಖಯ್ಯೂಂ, ಮಹಿಳಾ ಸಮಾಜ ಕಾಲೇಜಿನ ಕಾರ್ಯದರ್ಶಿ ಎಂ.ನಂದನಾ, ಉಪಾಧ್ಯಕ್ಷೆ ಲಕ್ಷ್ಮೀ ಚಂದ್ರಪ್ಪ, ಖಜಾಂಚಿ ಪದ್ಮ, ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀನಿವಾಸ್ ಇದ್ದರು.