ಸಾರಾಂಶ
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಪ್ರಜಾಪ್ರಭುತ್ವದ ಮೂಲ ಆಶಯಗಳಾಗಿವೆ
ಯಲಬುರ್ಗಾ: ಜಗತ್ತಿನಲ್ಲೇ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಯುವಜನತೆಯ ಪಾತ್ರ ಬಹುಮುಖ್ಯವಾಗಿದೆ ಎಂದು ಯುವ ಮುಖಂಡ ಬಸವರಾಜ ಬೊಮ್ಮನಾಳ ಹೇಳಿದರು.
ತಾಲೂಕಿನ ಕುಡಗುಂಟಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಹೊಣೆಗಾರ ಸಮಾಜ ನಿರ್ಮಾಣಕ್ಕಾಗಿ ಯುವಜನ ಸಮಿತಿ ಹಾಗೂ ವಿಸ್ತಾರ ಸಂಸ್ಥೆ ಸಹಯೋಗದಲ್ಲಿ ಯುವಕರಿಗೆ ನಡೆದ ಸಾಮಾಜಿಕ ಸ್ವಾಸ್ಥ್ಯ ಹಾಗೂ ವ್ಯಸನಮುಕ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಪ್ರಜಾಪ್ರಭುತ್ವದ ಮೂಲ ಆಶಯಗಳಾಗಿವೆ. ಭಾರತವು ಹೆಚ್ಚು ಯುವಕರನ್ನು ಹೊಂದಿದ ದೇಶವಾಗಿದೆ. ಗ್ರಾಮದ ಪರಿಕಲ್ಪನೆ, ಪರಿಸರ ಕಾಳಜಿ ಹೀಗೆ ಸಾಮಾಜಮುಖಿ ಕಾರ್ಯಗಳಿಗ ವಿಸ್ತಾರ ಸಂಸ್ಥೆ ತನ್ನದೇಯಾದ ಕೊಡುಗೆ ನೀಡಿದೆ ಎಂದರು.
ಸಂಸ್ಥೆಯ ಸಂಯೋಜಕ ಬಸವರಾಜ ಬಳಿಗೇರ ಮಾತನಾಡಿ, ವಿಸ್ತಾರ ಸಂಸ್ಥೆ ಈಗಾಗಲೇ ಯಲಬುರ್ಗಾ- ಕುಕನೂರು ತಾಲೂಕಿನ 30ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಯುವಜನತೆ ಸಬಲೀಕರಣ, ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಯುವಕರ ಪಾತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಗಿದೆ. ಆದರೂ ಯುವಕರು ದಾರಿ ತಪ್ಪುತ್ತಿರುವುದು ವಿಷಾದನೀಯ ಎಂದು ಹೇಳಿದರು.ಗ್ರಾಪಂ ಸದಸ್ಯ ದೇವಪ್ಪ ಲಗಳೂರು ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮುಖಂಡ ಶರಣಪ್ಪ ಚಿಲವಾಡ್ಗಿ, ಶಿಕ್ಷಕಿ ಶಂಕ್ರಮ್ಮ ಸಂಗಟಿ, ಗ್ರಂಥಪಾಲಕಿ ಯಮುನಾ ನಡುಲಮನಿ, ಮಂಜುಳಾ ತಳವಾರ, ಸಂಸ್ಥೆಯ ಸoಯೋಜಕರಾದ ಧರ್ಮರಾಜ್ ಗೋನಾಳ, ಮಾಲಾ ಆರ್, ಇಮಾಮ್‌ಸಾಬ್ ಗುಳೇದಗುಡ್ಡ, ರಮೇಶ್ ಕುಡಗುಂಟಿ, ಮಂಜುಳಾ ಸಣ್ಣಕರಡದ ಸೇರಿದಂತೆ ಮತ್ತಿತರರು ಇದ್ದರು.