ರೋಪ್‌ ವೇ ಕಾಮಗಾರಿ ಶೀಘ್ರ ಆರಂಭಕ್ಕೆ ಸೂಚನೆ

| Published : Mar 27 2025, 01:06 AM IST

ಸಾರಾಂಶ

ವಿಶ್ವದ ಐತಿಹಾಸಿಕ ಏಕಶಿಲಾ ಬೆಟ್ಟಕ್ಕೆ ಮೊದಲ ಹಂತದ ರೋಪ್‌ ವೇ ಕಾಮಗಾರಿ ಅತಿ ಶೀಘ್ರ ಕೈಗೆತ್ತಿಕೊಳ್ಳುವಂತೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭವಾರ್ತೆ ಮಧುಗಿರಿ

ವಿಶ್ವದ ಐತಿಹಾಸಿಕ ಏಕಶಿಲಾ ಬೆಟ್ಟಕ್ಕೆ ಮೊದಲ ಹಂತದ ರೋಪ್‌ ವೇ ಕಾಮಗಾರಿ ಅತಿ ಶೀಘ್ರ ಕೈಗೆತ್ತಿಕೊಳ್ಳುವಂತೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ಪಟ್ಟಣದ ನ್ಯಾಯಾಲಯಗಳ ಸಂಕೀರ್ಣಗಳ ಸಮೀಪ ಗುರುತಿಸಿರುವ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್‌ ವೇ ಕಾಮಗಾರಿ ಕೈಗೆತ್ತಿಕೊಳ್ಳುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

ಬೆಟ್ಟಕ್ಕೆ ಕೇಬಲ್‌ ಕಾರ್‌ ಅಳವಡಿಸಲು ಕಳೆದ ಹತ್ತು ವರ್ಷಗಳ ಹಿಂದೆಯೇ 9 ಎಕರೆ ಜಾಗ ಗುರುತಿಸಿದ್ದು, ಈ ಮಹತ್ವದ ಕಾಮಗಾರಿಯನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸಬೇಕು. ಇತ್ತಿಚೆಗೆ ಬೆಳಗಾಂನಲ್ಲಿ ನಡೆದ ಅಧಿವೇಶನದಲ್ಲಿ ರೋಪ್‌ ವೇ ಕಾಮಗಾರಿಗಳಿಗಾಗಿ ಪ್ರತ್ಯೇಕ ಪ್ರಾಧಿಕಾರ ಸ್ಥಾಪಿಸಿದ್ದು, ಆ ಇಲಾಖೆಯ ಮಾನದಂಡದಂತೆ ರೋಪ್‌ ವೇ ಕಾಮಗಾರಿ ರಾಜ್ಯದಲ್ಲಿ ನಿರ್ವಹಣೆ ಮಾಡಲಾಗುವುದು ಎಂದರು.

ಪ್ರಥಮ ಹಂತದಲ್ಲಿ ರೋಪ್‌ ವೇ ಕಾಮಗಾರಿಯನ್ನು ಪ್ರಾರಂಭಿಸಿ ಈ ಕಾಮಗಾರಿಗೆ 50 ಕೋಟಿ ರು.ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗುವುದು . ಮೂರು ಹಂತಗಳಲ್ಲಿ ಕಾಮಗಾರಿ ನಡೆಯಲಿದ್ದು ರೋಪ್‌ ವೇ ನಿರ್ಮಾಣ, ಪ್ರವಾಸಿಗರಿಗೆ ಮೂಲ ಸೌಲಭ್ಯ , ಪುಡ್‌ ಪಾರ್ಕ್ ,ಅಮ್ಯೂಸ್‌ ಮೆಂಟ್‌ ಪಾರ್ಕ್‌ ಹಾಗೂ ಸ್ವಿಮ್ಮಿಂಗ್‌ ಪುಲ್‌ ನಿರ್ಮಿಸುವುದಾಗಿ ಸಚಿವ ರಾಜಣ್ಣ ತಿಳಿಸಿದರು.

ಕಾಮಗಾರಿ ಪ್ರಾರಂಭಕ್ಕೆ ಅಗತ್ಯವಿರುವ ವಿದ್ಯುತ್‌ , ರಸ್ತೆ, ಇತರೇ ಸೌಕರ್ಯಗಳನ್ನು ಒದಗಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಲಹೆ ನೀಡಿದರು.

ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌, ದೆಹಲಿ ರೈಟ್‌ ಕಂನಿಯ ಎನ್‌.ಕೆ.ಕೌಶಿಕ್‌, ವ್ಯವಸ್ಥಾಪಕ ಸಾಹೀಲ್ ಶರ್ಮ, ಎಂಜಿನಿಯರ್‌ ಮಣಿಮಲೈ, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್‌ ಶಿರಿನ್‌ ತಾಜ್‌, ಬೆಸ್ಕಾಂ ಇಇ ಜಗದೀಶ್‌,ನಾಗರಾಜರಾವ್‌, ಜಿಲ್ಲಾ ಪ್ರವಾಸೋಧ್ಯಮ ಸಮಾಲೋಚಕ ಮಹಮದ್ ಇಮ್ರಾನ್‌, ಮಧುಗಿರಿ ಪುರಸಭೆ ಮುಖ್ಯಾಧಿಕಾರಿ ಎಚ್‌.ಎಂ.ಸುರೇಶ್‌,ಅರಣ್ಯ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಎಂ.ಸುರೇಶ್‌,ಮುತ್ತುರಾಜ್‌,ಮುಖಂಡರುಗಳಾದ ಎಂ.ಕೆ.ನಂಜುಂಡರಾಜು ,ಎನ್‌.ಗಂಗಣ್ಣ, ಜಗದೀಶ್‌ ಕುಮಾರ್‌, ಗಂಗರಾಜು, ಕಿಶೋರ್‌,ಎಂ.ಎಸ್‌.ಶಂಕರನಾರಾಯಣ್‌ ,ಲಕ್ಷ್ಮೀನಾರಾಯಣ್‌ ಸೇರಿದಂತೆ ಇತರರಿದ್ದರು.