ಸಾರಾಂಶ
-ರೋಟರಿ ಸಮುದಾಯ ದಳದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
-----ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ರೋಟರಿ ಸಂಸ್ಥೆಯು ಸಮಾಜಮುಖಿ ಚಿಂತನೆಯಲ್ಲಿ ಸದಾ ತೊಡಗಿಕೊಂಡಿದೆ ಎಂದು ರೋಟರಿ ಕ್ಲಬ್ ಮಾಜಿ ಅಸಿಸ್ಟೆಂಟ್ ಗವರ್ನರ್ ಕೆ.ಟಿ.ವೆಂಕಟೇಶ್ ಹೇಳಿದರು.ಸಮೀಪದ ಆದರ್ಶ ನಗರದಲ್ಲಿ ರೋಟರಿ ಕ್ಲಬ್ ಆಯೋಜಿಸಿದ್ದ ರೋಟರಿ ಸಮುದಾಯದಳದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ರೋಟರಿ ಸಂಸ್ಥೆಯ ಅಂಗ ಸಂಸ್ಥೆಯಾದ ಸಮುದಾಯ ದಳವು ಸಮಾಜದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸದಾ ಜನರೊಂದಿಗೆ ಬೆರೆಯುವ ಕೆಲಸಗಳನ್ನು ನಿರ್ವಹಿಸುತ್ತಿದೆ. ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಜನರು ಸಂಸ್ಥೆಯನ್ನು ಗುರುತಿಸುತ್ತಾರೆ ಎಂದರು.ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್ ಮಾತನಾಡಿ, ರೋಟರಿ ಸಂಸ್ಥೆಯು ಸಾಮಾಜಿಕ ಕಾರ್ಯಗಳೊಂದಿಗೆ ಜನರ ಜೀವ ಉಳಿಸುವ ಪ್ರಮುಖ ಕಾರ್ಯವಾದ ರಕ್ತದಾನದಂತಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿದೆ. ಸಮುದಾಯ ದಳವು ಸಹ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ರೋಟರಿ ಸಮುದಾಯ ದಳದ ನೂತನ ಅಧ್ಯಕ್ಷ ಕಾರ್ತಿಕ್ ಕಾರ್ ಗದ್ದೆ ನಿರ್ಗಮಿತ ಅಧ್ಯಕ್ಷ ಸಂದೇಶ್ ಅವರಿಂದ ಅಧಿಕಾರ ಸ್ವೀಕರಿಸಿದರು.ರೋಟರಿ ಕಾರ್ಯದರ್ಶಿ ಬಿ.ಎಸ್.ಸಾಗರ್, ಸಮುದಾಯ ದಳದ ಕಾರ್ಯದರ್ಶಿ ಎಂ.ಎನ್.ಜಗದೀಶ್, ಲಕ್ಷ್ಮೀಶ್, ಚಿತ್ರನಟ ಕಾಫಿ ಗಿರೀಶ್, ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಶ್ರೀಹರ್ಷ, ಎಚ್.ಕೆ.ವೆಂಕಟೇಶ್‌ಭಟ್, ಸತೀಶ್ ಅರಳೀಕೊಪ್ಪ, ಕೆ.ಎ.ವಿವೇಕ್, ತಿಮ್ಮಯ್ಯ, ಸುರೇಶ್, ಎಂ.ಆರ್.ರವಿ ಇದ್ದರು.
-----೨೩ಬಿಹೆಚ್‌ಆರ್ ೪: ಬಾಳೆಹೊನ್ನೂರು ಸಮೀಪದ ಆದರ್ಶ ನಗರದ ರೋಟರಿ ಸಮುದಾಯ ದಳದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ರೋಟರಿ ಕ್ಲಬ್ ಮಾಜಿ ಅಸಿಸ್ಟೆಂಟ್ ಗವರ್ನರ್ ಕೆ.ಟಿ.ವೆಂಕಟೇಶ್ ಉದ್ಘಾಟಿಸಿದರು. ಸಿ.ಪಿ.ರಮೇಶ್, ಸಂದೇಶ್, ಸಾಗರ್, ಶ್ರೀಹರ್ಷ ಇದ್ದರು.