ಸಾರಾಂಶ
ರೋಟರಿ ಕ್ಲಬ್‌ನ ಸಂಡೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಸಂಡೂರು
ಪಟ್ಟಣದ ಪದ್ಮಾವತಿ ಶ್ರೀನಿವಾಸ ಫಂಕ್ಷನ್ ಹಾಲ್‌ನಲ್ಲಿ ೨೦೨೫-೨೬ನೇ ಸಾಲಿಗೆ ರೋಟರಿ ಕ್ಲಬ್ ಸಂಡೂರು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಿತು. ಅಧ್ಯಕ್ಷರಾಗಿ ಪ್ರಕಾಶ್ ಕುಮಾರ್ ಜೈನ್ ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಜೈನ್ ಪದಗ್ರಹಣ ಮಾಡಿದರು.ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದ ರೋಟರಿ ಡಿಸ್ಟಿಕ್ ಗವರ್ನರ್ ಡಿಜಿಎನ್‌ಡಿ ತ್ರಿವಿಕ್ರಮ್ ಜೋಶಿ ಮಾತನಾಡಿ, ರೋಟರಿ ಸಂಸ್ಥೆ ಪ್ರಪಂಚದಾದ್ಯಂತ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸಂಸ್ಥೆಯು ಪೋಲಿಯೋ ನಿರ್ಮೂಲನೆಗೆ ಶ್ರಮಿಸಿದೆ. ದೇಶದಲ್ಲಿ ೨೦೧೧ರಿಂದ ಒಂದು ಸಹ ಪೋಲಿಯೋ ಪ್ರಕರಣ ದಾಖಲಾಗಿಲ್ಲ. ಪ್ರಪಂಚದಲ್ಲಿ ಮೂರು ದೇಶಗಳನ್ನು ಹೊರತು ಪಡಿಸಿ, ಉಳಿದ ರಾಷ್ಟ್ರಗಳಲ್ಲಿ ಪೋಲಿಯೋವನ್ನು ನಿರ್ಮೂಲನೆ ಮಾಡಲಾಗಿದೆ. ರೋಟರಿ ಸಂಸ್ಥೆಯಿಂದ ಸಂಡೂರಿನಲ್ಲಿಯೂ ಶಾಲೆ, ರಕ್ತ ಪರೀಕ್ಷೆ, ಎಕ್ಸ್ರೆ ಹಾಗೂ ಡಯಾಲಿಸಿಸ್ ಕೇಂದ್ರ ತೆರೆಯಲಾಗಿದೆ ಎಂದರು.
ಎರಡು ವರ್ಷದಲ್ಲಿ ರೋಟರಿ ಸಂಸ್ಥೆಯಿಂದ ದೇಶದಲ್ಲಿ ೧೦ ಲಕ್ಷ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ನೀಡಲು, ಸರ್ವೈಕಲ್ ಕ್ಯಾನ್ಸರ್ ನಿವಾರಣೆಗಾಗಿ ಇಮ್ಯುನೈಜೇಷನ್ ಮಾಡುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯನ್ನು ನವಂಬರ್‌ನಲ್ಲಿ ಪ್ರಧಾನ ಮಂತ್ರಿ ಉದ್ಘಾಟಿಸಲಿದ್ದಾರೆ. ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳು ಕ್ಲಬ್‌ನ ಸದಸ್ಯತ್ವ ಹೆಚ್ಚು ಮಾಡಿ, ಯುವಕರು ಹಾಗೂ ಮಹಿಳೆಯರನ್ನು ಸೇರಿಸಿಕೊಂಡರೆ, ಸಮಾಜ ಸೇವಾ ಕಾರ್ಯಗಳಿಗೆ ಹೆಚ್ಚಿನ ವೇಗ ದೊರೆಯಲಿದೆ. ಎಲ್ಲರೂ ರೋಟರಿ ಬೆಳವಣಿಗೆಯ ಜೊತೆಗೆ ಜನೋಪಯೋಗಿ ಕಾರ್ಯಗಳಲ್ಲಿಯೂ ನಾವು ತೊಡಗೋಣ ಎಂದರು.ರೋಟರಿ ಕ್ಲಬ್ ಗೌರವ ಸದಸ್ಯತ್ವ ಸ್ವೀಕರಿಸಿ ಮಾತನಾಡಿದ ಶಾಸಕಿ ಈ. ಅನ್ನಪೂರ್ಣ ತುಕಾರಾಂ, ನಿಸ್ವಾರ್ಥ ಸಮಾಜ ಸೇವೆಗೆ ರೋಟರಿ ಸಂಸ್ಥೆ ಹೆಸರಾಗಿದೆ. ರೋಟರಿ ಆಡಳಿತ ಪಾರದರ್ಶಕವಾಗಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡಲು ಸಂಸ್ಥೆ ಶ್ರಮಿಸುತ್ತಿದೆ. ಸಂಡೂರನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಹಸಿರು ಸಂಡೂರನ್ನಾಗಿ ಮಾಡುವ ಗುರಿಯನ್ನು ಹಾಕಿಕೊಂಡಿದ್ದೇವೆ. ರೋಟರಿ ಸಂಸ್ಥೆಯ ಸಮಾಜ ಸೇವಾ ಕಾರ್ಯಗಳು ಎಲ್ಲರಿಗೂ ಆದರ್ಶವಾಗಿವೆ. ರೋಟರಿ ಸಂಸ್ಥೆಯ ಜೊತೆಗೆ ತಾವು ಮತ್ತು ತಮ್ಮ ಪತಿ ಈ. ತುಕಾರಾಂ ಇರುತ್ತೇವೆ ಎಂದು ತಿಳಿಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಕುಮಾರ್ ಜೈನ್ ತಮ್ಮ ಒಂದು ವರ್ಷದ ಅಧಿಕಾರವಧಿಯಲ್ಲಿ ಕೈಗೊಳ್ಳಲಿರುವ ಯೋಜನೆಗಳ ಕುರಿತು ವಿವರಿಸಿದರು. ಮುಖ್ಯ ಅತಿಥಿಗಳಾಗಿದ್ದ ರೋಟರಿ ವಿಜಯನಗರ ಜೋನ್‌ನ ಅಸಿಸ್ಟಂಟ್ ಗವರ್ನರ್ ರಾಜೇಶ್ ಕೋರಿ ಶೆಟ್ಟರ್, ರೋಟರಿ ಕ್ಲಬ್ ವತಿಯಿಂದ ಸನ್ಮಾನಿತರಾದ ಡಾ. ರಾಮಶೆಟ್ಟಿ, ಚಾರ್ಟರ್ಡ್ ಅಕೌಂಟೆಂಟ್ ಕೆ. ರಾಜಶೇಖರ್ ರೋಟರಿ ಸಂಸ್ಥೆಯ ಜನಪರ ಕಾರ್ಯಗಳ ಕುರಿತು ವಿವರಿಸಿದರು.ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಟಿ.ಜಿ. ಸುರೇಶ್‌ಗೌಡ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ವಿಸ್ಮಿತಾ ಹಾಗೂ ಸಂಜನಾ ಪ್ರಾರ್ಥಿಸಿದರು. ಜೆ.ಎಂ. ಬಸವರಾಜ ಕಾರ್ಯಕ್ರಮ ನಿರೂಪಿಸಿದರು. ಆಶಾಲತಾ ಸೋಮಪ್ಪ ವಂದಿಸಿದರು. ಸಭೆಯಲ್ಲಿ ವಿಶ್ವಶಾಂತಿಗಾಗಿ ಪ್ರಾರ್ಥಿಸಲಾಯಿತು.
ರೋಟರಿ ಕ್ಲಬ್ ನೂತನ ಪದಾಧಿಕಾರಿಗಳು: ಪ್ರಕಾಶ್ ಕುಮಾರ್ ಜೈನ್ (ಅಧ್ಯಕ್ಷ), ರಾಜೇಶ್ ಕುಮಾರ್ ಜೈನ್ (ಕಾರ್ಯದರ್ಶಿ), ಎಚ್.ಎಂ. ಶಿವಮೂರ್ತಿ (ಉಪಾಧ್ಯಕ್ಷ), ಬಿ. ಸೋಮನಗೌಡ (ಜಂಟಿ ಕಾರ್ಯದರ್ಶಿ), ಕೆ. ನಾಗರಾಜ (ಖಜಾಂಚಿ), ಎಸ್.ಎ. ವಿನಾಯಕ್ (ಸಾರ್ಜಂಟ್ ಅಟ್ ಆರ್ಮ್ಸ್).ವಿವಿಧ ಘಟಕಗಳ ನಿರ್ದೇಶಕರು: ಬಿ.ಆರ್. ಮಸೂತಿ (ಕ್ಲಬ್ ಟ್ರೇನರ್), ಎಂ.ವಿ. ಹಿರೇಮಠ್ (ಕ್ಲಬ್ ಅಡ್ಮಿನಿಸ್ಟ್ರೇಷನ್), ಜೆ.ಎಂ. ಬಸವರಾಜ (ಗ್ರಾಂಟ್ಸ್ & ಸರ್ವಿಸ್ ಪ್ರಾಜೆಕ್ಟ್), ಕೆ. ಶಿವಪ್ಪ (ಪಬ್ಲಿಕ್ ಇಮೇಜ್), ಎಂ. ಮಾರುತಿರಾವ್ (ರೋಟರಿ ಫೌಂಡೇಶನ್), ಟಿ.ಜಿ. ಸುರೇಶ್‌ಗೌಡ (ಪೋಲಿಯೋ ಪ್ಲಸ್), ಬಿ. ಶಿವಕುಮಾರ್ (ಸೆವೆನ್ ಏರಿಯಾಸ್ ಆಫ್ ಫೋಕಸ್), ಜೆ.ಎಂ. ಅನ್ನದಾನಸ್ವಾಮಿ (ಲಿಟರಸಿ), ಸಿ ಗೌರಿನಾಥ್ (ಕಾನ್ಫರೆನ್ಸ್ & ಈವೆಂಟ್ ಪ್ರೋಮೋಷನ್), ಎಂ. ಆಶಾಲತಾ (ವುಮೆನ್ ಇನ್ ರೋಟರಿ), ರುದ್ರೇಶ್ ಶೆಟ್ಟಿ (ಆರ್‌ವೈಎಲ್‌ಎ & ಆರ್‌ಎಲ್‌ಐ), ಎಂ. ಶಶಿಧರ್ (ಲರ್ನಿಂಗ್ ಫೆಸಿಲಿಟೇಟರ್).
ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಕಮಿಟಿ ಅಧ್ಯಕ್ಷರಾಗಿ ಸಿ.ಕೆ. ವಿಶ್ವನಾಥ್, ಸದಸ್ಯರಾದ ಕೆ.ಎಂ. ಕೊಟ್ರಯ್ಯ, ಕ್ಲಬ್ ಅಡ್ವೆಸರಿ ಕಮಿಟಿ ಅಧ್ಯಕ್ಷರಾಗಿ ರೂಪಾ ಯು. ಲಾಡ್ ಹಾಗೂ ಸದಸ್ಯರಾಗಿ ಎಚ್. ಈರಣ್ಣ ಆಯ್ಕೆಯಾದರು.ಮುಖಂಡರಾದ ಮಾಂಗಿಲಾಲ್ ಜೈನ್, ಎ. ಸಿದ್ದಪ್ಪ, ಅಪ್ಪನಗೌಡರ್, ಡಿ. ಕೃಷ್ಣಪ್ಪ ಮುಂತಾದವರಿದ್ದರು.