ಸಾರಾಂಶ
ಉಡುಪಿ ಮಿಶನ್ ಕಂಪೌಂಡ್ ನಿವಾಸಿ ಮಹಮ್ಮದ್ ಫೈಸಲ್ ಖಾನ್ (27), ಕುಂಜಿಬೆಟ್ಟು ಕರಂಬಳ್ಳಿ ನಿವಾಸಿ ಮಹಮ್ಮದ್ ಶರೀಫ್ (37), ಮಂಗಳೂರು ಕಾಟಿಪಳ್ಳ ನಿವಾಸಿ ಅಬ್ದುಲ್ ಶುಕೂರ್ (43) ಬಂಧಿತ ಆರೋಪಿಗಳು.
ಕನ್ನಡಪ್ರಭ ವಾರ್ತೆ ಉಡುಪಿರೌಡಿಶೀಟರ್ ಸೈಫುದ್ದೀನನ್ನು ಕೊಲೆ ಮಾಡಿದ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಮಿಶನ್ ಕಂಪೌಂಡ್ ನಿವಾಸಿ ಮಹಮ್ಮದ್ ಫೈಸಲ್ ಖಾನ್ (27), ಕುಂಜಿಬೆಟ್ಟು ಕರಂಬಳ್ಳಿ ನಿವಾಸಿ ಮಹಮ್ಮದ್ ಶರೀಫ್ (37), ಮಂಗಳೂರು ಕಾಟಿಪಳ್ಳ ನಿವಾಸಿ ಅಬ್ದುಲ್ ಶುಕೂರ್ (43) ಬಂಧಿತ ಆರೋಪಿಗಳು.ಈ ಆರೋಪಿಗಳು ರೌಡಿ ಶೈಫುದ್ದೀನ್‌ನ ಆಪ್ತರಾಗಿದ್ದು, ಆತ ಮಾಲಿಕನಾಗಿದ್ದ ಬಸ್‌ಗಳಲ್ಲಿ ದುಡಿಯುತ್ತಿದ್ದರು. ಮಾತ್ರವಲ್ಲ ಆತನ ಕೊಲೆ ಮತ್ತಿತರ ಕೃತ್ಯಗಳಲ್ಲಿ ಸಹ ಆರೋಪಿಗಳೂ ಆಗಿದ್ದಾರೆ.ಕೊಲೆ ನಡೆದು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಮತ್ತವರ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.ತಮ್ಮ ಮಾಲಿಕನನ್ನೇ ಆರೋಪಿಗಳು ಕೊಲೆ ಮಾಡಿದ್ದು, ನಿಖರ ಕಾರಣಗಳು ತಿಳಿದು ಬಂದಿಲ್ಲ. ಆದರೆ ಇದೊಂದು ಸುಪಾರಿ ಕೊಲೆಯಾಗಿಬಹುದು ಎಂದು ಶಂಕಿಸಲಾಗಿದೆ.