ಸಾರಾಂಶ
ಕೋರ್ಟ್ ಎದುರಿನ ಬಿಗ್ ಮಾರ್ಟ್ ಮೇಲಿರುವ ಫಿಟ್ 24 ಜಿಮ್‌ನಲ್ಲಿ ಕಳ್ಳತನ ನಡೆದಿದೆ. ಇದು ವಿವೇಕಾನಂದ ನಗರ ಬಡಾವಣೆ ವಾಸಿ ಸಂತೋಷ್ ಅವರಿಗೆ ಸೇರಿದ್ದಾಗಿದೆ.
ರಾಮನಗರ:
ಮೂವರು ದುಷ್ಕರ್ಮಿಗಳು ಜಿಮ್‌ನ ಬಾಗಿಲ ಬೀಗ ಮುರಿದು 1 ಲಕ್ಷ 49 ಸಾವಿರ ರುಪಾಯಿ ಕಳವು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.ನಗರದ ಕೋರ್ಟ್ ಎದುರಿನ ಬಿಗ್ ಮಾರ್ಟ್ ಮೇಲಿರುವ ಫಿಟ್ 24 ಜಿಮ್‌ನಲ್ಲಿ ಕಳ್ಳತನ ನಡೆದಿದೆ. ಇದು ವಿವೇಕಾನಂದ ನಗರ ಬಡಾವಣೆ ವಾಸಿ ಸಂತೋಷ್ ಅವರಿಗೆ ಸೇರಿದ್ದಾಗಿದೆ.
ಜು. 31ರಂದು ಎಂದಿನಂತೆ ಜಿಮ್ ತೆರೆದು ರಾತ್ರಿ ಮುಚ್ಚುವಾಗ ಜಿಮ್‌ನ ಕಲೆಕ್ಷನ್ ಹಣ 1,49,500 ರು.ಗಳನ್ನು ಜಿಮ್‌ನಲ್ಲಿರುವ ಲಾಕರ್‌ನಲ್ಲಿ ಇಟ್ಟು ಮನೆಗೆ ಹೋಗಿದ್ದರು. ಆಗಸ್ಟ್ 1 ರಂದು ಜಿಮ್ ತೆಗೆಯಲು ಬಂದಾಗ ಬೀಗ ಹೊಡೆದಿರುವುದು ಕಂಡು ಬಂದಿದೆ. ಒಳಗಡೆ ಹೋಗಿ ಲಾಕರ್ ನೋಡಿದಾಗ ಯಾವುದೋ ಆಯುಧದಿಂದ ಮೀಟಿ ಅದರಲ್ಲಿರುವ ನಗದನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.ಜಿಮ್‌ನಲ್ಲಿರುವ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ರಾತ್ರಿ 1.45ರ ಸಮಯದಲ್ಲಿ ಮೂವರು ಅಪರಿಚಿತರು ಜಿಮ್‌ನೊಳಗೆ ಪ್ರವೇಶ ಮಾಡಿ ಆಯುಧದಿಂದ ಮೀಟಿ ಲಾಕರ್‌ನಲ್ಲಿರುವ ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿರುವುದು ಸೆರೆಯಾಗಿದೆ.
ಅಲ್ಲದೆ, ಅದೇ ಕೊಠಡಿಯಲ್ಲಿರುವ ಕ್ರಿಸ್ಟನ್ ಚೈಲ್ಡ್ ಕೇರ್ ಆಸ್ಪತ್ರೆ ಹಾಗೂ ಪಕ್ಕದ ಕಟ್ಟಡದಲ್ಲಿರುವ ಬಾಟಾ ಶೋ ರೂಮ್‌ನಲ್ಲಿಯೂ ಕಳ್ಲತನಕ್ಕೆ ವಿಫಲ ಯತ್ನ ನಡೆದಿದೆ. ಈ ಸಂಬಂಧ ಸಂತೋಷ್ ಅವರು ರಾಮನಗರ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.