ಆರ್.ಎಸ್.ಎಸ್. ಕಳೆದ 100 ವರ್ಷಗಳಿಂದ ಹಿಂದೂಗಳ ಒಗ್ಗಟ್ಟಿಗಾಗಿ, ಧರ್ಮ ರಕ್ಷಣೆಗಾಗಿ, ಗೋ ರಕ್ಷಣೆಗಾಗಿ, ಒಂದಾಗಲಿ ಎಂಬ ಹೋರಾಟದ ಪರಿಶ್ರಮ ಇನ್ನೂ ಸಿಕ್ಕಿಲ್ಲ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಶ್ರೀರಾಮ್ ಸೇನೆ ಸಂಸ್ಥಾಪಕ ಪ್ರಮೊದ ಮುತಾಲಿಕ್ ಕಳವಳ ವ್ಯಕ್ತಪಡಿಸಿದರು.
ರಟ್ಟೀಹಳ್ಳಿ: ಆರ್.ಎಸ್.ಎಸ್. ಕಳೆದ 100 ವರ್ಷಗಳಿಂದ ಹಿಂದೂಗಳ ಒಗ್ಗಟ್ಟಿಗಾಗಿ, ಧರ್ಮ ರಕ್ಷಣೆಗಾಗಿ, ಗೋ ರಕ್ಷಣೆಗಾಗಿ, ಒಂದಾಗಲಿ ಎಂಬ ಹೋರಾಟದ ಪರಿಶ್ರಮ ಇನ್ನೂ ಸಿಕ್ಕಿಲ್ಲ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಶ್ರೀರಾಮ್ ಸೇನೆ ಸಂಸ್ಥಾಪಕ ಪ್ರಮೊದ ಮುತಾಲಿಕ್ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀರಾಮ್ ಸೇನೆ ನೂತನ ತಾಲೂಕು ಘಟಕ ಉದ್ಘಾಟನೆ ಹಾಗೂ ಜವಾಬ್ದಾರಿಗಳ ಘೋಷಣೆ ಮಾಡಿ ಮಾತನಾಡಿದ ಅವರು, ಭಾರತವೆಂಬ ಪುಣ್ಯ ಭೂಮಿಯನ್ನು ಸರ್ವನಾಶ ಮಾಡಲು ಅನೇಕ ದೇಶಗಳು ಷಡ್ಯಂತ್ರ ಮಾಡುತ್ತಿದ್ದು, ಅದು ಅವರ ಭ್ರಮೆ. ವೇದ ಉಪನಿಷತ್ತುಗಳ ಭರತ ಭೂಮಿಯನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ ಎಂದರು.ಇತ್ತೀಚೆಗೆ ನೀಟ್ ಹೋರಾಟ ಒಂದು ಸಣ್ಣ ಜಿರಳೆ ಹೆಸರು ಇಟ್ಟುಕೊಂಡು ನೀಟ್ ಪರೀಕ್ಷೆ ನೆಪ ಮಾಡಿಕೊಂಡು ದೇಶ ವಿರೋಧಿ ಉಮರ ಖಾಲೀದ್ ಬೆಂಬಲಿಗರು, ತುಕುಡೆ ಗ್ಯಾಂಗ್‍ಗಳು ಭಾಗಿಯಾಗಿದ್ದು, ವಿದ್ಯಾರ್ಥಿಗಳ ಹೋರಾಟಕ್ಕೂ ಅವರಿಗೆ ಏನು ಸಂಬಂಧ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜಿರಳೆಗಳ ಹೋರಾಟಕ್ಕೆ ಪಾಕಿಸ್ತಾನ, ಬಾಂಗ್ಲಾ, ಕೆನಡಾ, ಟರ್ಕಿ, ಇರಾನ್ ಸೇರಿದಂತೆ ಇನ್ನೂ ಅನೇಕ ದೇಶಗಳು ಸಣ್ಣ ಜಿರಳೆ ಪಕ್ಷಕ್ಕೆ ಬೆಂಬಲ ಮಾಡುವ ಮೂಲಕ ದೇಶವನ್ನು ಅಭದ್ರಗೊಳಿಸುವ ಹುನ್ನಾರ ಜಗಜ್ಜಾಹೀರ ಆಗಿದೆ. ಇನ್ನಾದರೂ ಹಿಂದೂಗಳು ಒಗ್ಗಟ್ಟಾಗದಿದ್ದರೆ ನಮಗಿರುವ ಏಕೈಕ ಭಾರತವನ್ನು ಬಿಟ್ಟು ಪಲಾಯನ ಮಾಡುವಂತ ಪರಿಸ್ಥಿತಿ ಮುಂಬರುವ ದಿನಗಳಲ್ಲಿ ನಿರ್ಮಾಣವಾಗಲಿದೆ. ಆದ್ದರಿಂದ ಬಹು ಸಂಖ್ಯಾತ ಹಿಂದೂಗಳು ಒಗ್ಗಟ್ಟಾಗಿ ಜಾಗೃತರಾಗಬೇಕಿದೆ ಎಂದರು.ಪಟ್ಟಣದಲ್ಲಿ ಬಡ ಹಿಂದೂವಿನ ಕೊಲೆಯಾದರೂ ಹಿಂದೂ ಸಮಾಜ ತಲೆ ತಗ್ಗಿಸಿಕೊಂಡು ಓಡಾಡುತ್ತಿದೆ. ಯಾಕೆ ನಿಮ್ಮ ರಕ್ತ ಕುದಿಯಲ್ಲವೇ? ನಿಮ್ಮಲ್ಲಿ ಆಕ್ರೋಶ ವ್ಯಕ್ತಪಡಿಸುವ ಕನಿಷ್ಠ ಶಕ್ತಿಯು ಇಲ್ಲವೇ? ಮತಾಂಧ ಶಕ್ತಿಗಳಿಗೆ ಹೆದರಿ ಜೀವಕ್ಕೆ ಭಯ ಪಟ್ಟು ಬದುಕಿದರೆ ಮುಂಬರುವ ದಿನಗಳಲ್ಲಿ ಈಗ ಶಿವಾಜಿರಾವ್ ಕೊಲೆಯಾಗಿದ್ದಾನೆ. ಮುಂದೆ ನಮ್ಮ ಮನೆ ಬಾಗಿಲಿಗೂ ಬರಲಿದೆ. ಒಂದಿಲ್ಲೊಂದು ದೀನ ಬೀದಿ ಕಾಳಗ ಆಗುವುದಿದೆ ಎಂದು ಎಚ್ಚರಿಸಿದರು.
ಶ್ರೀರಾಮ್ ಸೇನೆ ಜಿಲ್ಲಾಧ್ಯಕ್ಷ ವಿನಾಯಕ ಇಚ್ಚಗಿ ಮಾತನಾಡಿದರು. ಶ್ರೀರಾಮ್ ಸೇನೆ ನೂತನ ಅಧ್ಯಕ್ಷ ರಾಮು ದೇವರಮನಿ, ರಾಮನಗೌಡ ದೊಡ್ಡಗೌಡ್ರ, ಗದಿಗೆಪ್ಪ ಕುರವತ್ತಿ, ಕಲ್ಮೇಶ ಹಿರೇಗೌಡ್ರ, ಸೋಮು ರಾಥೋಡ, ಏಕಬೋಟೆ, ರಮೇಶ ಮಾಕನೂರ, ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ಸದಸ್ಯರಾದ ಬಸವರಾಜ ಆಡಿನವರ, ರವಿ ಹದಡೇರ್, ಬಸವರಾಜ ಕಟ್ಟಿಮನಿ, ಶ್ರೀದೇವಿ ಬೈರಪ್ಪನವರ, ಲಕ್ಷ್ಮೀ ಚಿಕ್ಕಮೊರಬ, ಮಲ್ಲಮ್ಮ ಕಟ್ಟೆಕಾರ, ಸುನೀಲ್ ಸರಶೆಟ್ಟರ್, ಅರುಣ ಗುಬ್ಬಿ, ಮಂಜು ಅಂಗರಗಟ್ಟಿ, ಹಾಲನಗೌಡ ಪ್ಯಾಟಿಗೌಡ್ರ, ಕಿರಣ ಆಡಿನವರ, ಮಾನಸ ಮಳಗೊಂಡರ್, ಸರೋಜಾ ಹುರಕಡ್ಲಿ, ಪಾರ್ವತಿ ಸತ್ತಗಿ ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಇದ್ದರು.