ಸಾರಾಂಶ
ಮಹಾಲಿಂಗಪುರ ಹಿಂದು ಸಂಘಟನೆಗಳ ಸದಸ್ಯರು ಪುರಸಭೆ ಸದಸ್ಯ ರವಿ ಜವಳಗಿ ನೇತೃತ್ವದಲ್ಲಿ ರುದ್ರಭೂಮಿ ಸ್ವಚ್ಛತಾ ಕಾರ್ಯ ನಡೆಸಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಪಟ್ಟಣದ ಹಿಂದು ರೂದ್ರಭೂಮಿಯ ಸ್ವಚ್ಛತೆಗೆ ಪುರಸಭೆಯ ಜೊತೆಗೆ ಇಲ್ಲಿ ಅಂತ್ಯಸಂಸ್ಕಾರ ನಡೆಸುವ ಸಕಲ ಹಿಂದು ಸಮಾಜ ಮತ್ತು ಸಾರ್ವಜನಿಕರ ಸಹಕಾರ ಬಹಳ ಅಗತ್ಯವಿದೆ ಎಂದು ಪುರಸಭೆ ಸದಸ್ಯ ರವಿ ಜವಳಗಿ ಹೇಳಿದರು.
ನಿರಂತರ ಎರಡು ದಿನಗಳ ಕಾಲ ಹಿಂದು ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಹಿಂದು ರುದ್ರಭೂಮಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದು ರುದ್ರಭೂಮಿಯಲ್ಲಿ ಸುತ್ತಮುತ್ತಲಿನ ಸಾರ್ವಜನಿಕರು ಬಯಲು ಶೌಚಕ್ಕಾಗಿ ಬಳಸುತ್ತಿರುವುದರಿಂದ ಇಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಅಂತ್ಯಸಂಸ್ಕಾರಕ್ಕೆ ಬಂದವರು ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವಂತಾಗಿದೆ. ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಸಹ ಸ್ಮಶಾನದಲ್ಲಿ ಬಯಲು ಶೌಚಕ್ಕೆ ಬರುವುದನ್ನು ನಿಲ್ಲಿಸಿ ಸಹಕಾರ ನೀಡಿದಾಗ ಮಾತ್ರ ನಿರಂತರವಾಗಿ ರುದ್ರಭೂಮಿ ಅಂದವಾಗಿ ಕಾಣಲು ಸಾಧ್ಯ ಎಂದರು.ಮುಂಜಾನೆ 6 ರಿಂದ 9 ಗಂಟೆಯವರೆಗೆ ಹಿಂದು ಸಂಘಟನೆಗಳ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ. ಮುಗಳಕೋಡ ಸ್ಮಶಾನಕ್ಕೆ ಭೇಟಿ ನೀಡಿ ಚರಂಡಿ ಸ್ವಚ್ಛತೆ ಮಾಡಿಸಿದರು. ಇನ್ನುಳಿದ ಸಿಬ್ಬಂದಿ ಹಿಂದು ಸಂಘಟನೆ ಸದಸ್ಯರೊಂದಿಗೆ ತಾವು ಕೂಡ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.
ಈ ಸಂದರ್ಭದಲ್ಲಿ ಹಿಂದು ಸಂಘಟನೆಗಳ ಸದಸ್ಯರಾದ ಅಭಿ ಲಮಾಣಿ, ಶಿವಾನಂದ ಕಲಮಡಿ, ಹಣಮಂತ ನಾವಿ, ಆನಂದ ಬಂಡಿಗಣಿ, ರಾಘು ಪವಾರ, ದಾನೇಶ ಡೊಂಬರ, ಸಂತೋಷ ಹಜಾರೆ, ಚನ್ನು ಆರೇಗಾರ, ಬಸವರಾಜ ಮುರಾರಿ, ಶಿವಾನಂದ ಹುಣಶ್ಯಾಳ, ಜಿ.ಎಸ್. ಗೊಂಬಿ, ಚಂದ್ರಶೇಖರ ಮೋರೆ, ರಾಘು ಶಿರೋಳ, ವಿಶಾಲ ಪತ್ತಾರ, ಮಹಾಲಿಂಗ ಅವಟಗಿ, ಅನೀಲ ಖವಾಸಿ, ರಾಘು ಗರಘಟಿಗಿ, ಅರ್ಜುನ ಪವಾರ್, ಮಂಜು ಭಾವಿಕಟ್ಟಿ, ಮಂಜು ಗೊಂಬಿ, ಶ್ರೀನಿಧಿ ಕುಲಕರ್ಣಿ ಸೇರಿದಂತೆ ಇತರರು ಭಾಗವಹಿಸಿದ್ದರು.