ಎಸ್‌.ಎ.ರವೀಂದ್ರನಾಥ್‌ ದಕ್ಷಿಣ ಕ್ಷೇತ್ರದಲ್ಲೇಕೆ ಸ್ಪರ್ಧಿಸಲಿಲ್ಲ?

| Published : Jun 24 2024, 01:37 AM IST

ಎಸ್‌.ಎ.ರವೀಂದ್ರನಾಥ್‌ ದಕ್ಷಿಣ ಕ್ಷೇತ್ರದಲ್ಲೇಕೆ ಸ್ಪರ್ಧಿಸಲಿಲ್ಲ?
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ನಾನು ಎನ್ನುವ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಬದಲಿಗೆ ದಕ್ಷಿಣ ಕ್ಷೇತ್ರದಲ್ಲಿ ಏಕೆ ಸ್ಪರ್ಧೆ ಮಾಡಲಿಲ್ಲ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಒತ್ತಾಯಿಸಿದ್ದಾರೆ.

- ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆಂದು ಎಲ್ಲೂ ಹೇಳಿಲ್ಲ: ಯಶವಂತ ರಾವ್‌ ಜಾಧವ್‌

- ಯಾವತ್ತೂ ಒಬ್ಬ ಸಾಮಾನ್ಯ ಕಾರ್ಯಕರ್ತ ನಾನು: ಯಶವಂತ ರಾವ್‌ ಜಾಧವ್‌ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ನಾನು ಎನ್ನುವ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಬದಲಿಗೆ ದಕ್ಷಿಣ ಕ್ಷೇತ್ರದಲ್ಲಿ ಏಕೆ ಸ್ಪರ್ಧೆ ಮಾಡಲಿಲ್ಲ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಒತ್ತಾಯಿಸಿದ್ದಾರೆ.

ಕೆಲವು ಮಹಾನ್ ನಾಯಕರು ಯಶವಂತ ರಾವ್ ಜಾಧವ್ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ನಾಲ್ಕು ಬಾರಿ ವಿಧಾನಸಭೆ ಟಿಕೆಟ್ ಕೊಟ್ಟರೂ ಯಾಕೆ ಗೆಲ್ಲಲಿಲ್ಲ ಮತ್ತು ಪಕ್ಷ ಅವರೇ ಕಟ್ಟಿ ಬೆಳೆಸಿದ್ದಾರೆ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆ ನೀಡಿದ ಮುಖಂಡರು, ರವೀಂದ್ರನಾಥ್ ದಾವಣಗೆರೆ ಉತ್ತರದ ಬದಲಿಗೆ ದಕ್ಷಿಣ ಕ್ಷೇತ್ರದಲ್ಲಿ ಯಾವ ಕಾರಣಕ್ಕೆ ಸ್ಪರ್ಧೆ ಮಾಡಲಿಲ್ಲ ಎಂಬುದಕ್ಕೆ ಉತ್ತರಿಸಲಿ ಎಂದು ತಾಕೀತು ಮಾಡಿದ್ದಾರೆ.

ನಾನು ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆಂದು ಎಲ್ಲೂ ಹೇಳಿಲ್ಲ. ನಾನು ಯಾವತ್ತೂ ಒಬ್ಬ ಸಾಮಾನ್ಯ ಕಾರ್ಯಕರ್ತ. ಅವರು ಹೇಳುವ ಹಾಗೆ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ಎಸ್.ಎ. ರವೀಂದ್ರನಾಥ ಒಬ್ಬರೇ ಅಂತ ಲಗಾನ್ ಟೀಂ ಹೇಳುತ್ತಾ ಬರುತ್ತಿದೆ. ಬಿಜೆಪಿ ಕಟ್ಟಿ ಬೆಳೆಸಿದ ಮಹಾನ್ ನಾಯಕನ ಮನೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಬರುತ್ತದೆ. ಆದರೂ, ದಕ್ಷಿಣ ಕ್ಷೇತ್ರ ಬಿಟ್ಟು, ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಏಕೆ ಸ್ಪರ್ಧೆ ಮಾಡುತ್ತಿದ್ದರು? ಅಷ್ಟು ಸುಲಭವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರ ಗೆಲ್ಲುವ ಕ್ಷೇತ್ರ ಆಗಿದ್ದರೆ ಅವರೇಕೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರು ಎಂದು ಪ್ರಶ್ನಿಸಿದ್ದಾರೆ.

2013ರ ವಿಧಾನಸಭಾ ಚುನಾವಣೆ ಘೋಷಣೆಯಾದ ಸಂದರ್ಭ ರವೀಂದ್ರನಾಥ್ ನಮ್ಮ ಮನೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಇದೆ. ನಾನು ಅಭ್ಯರ್ಥಿ ಆಗುತ್ತೇನೆ ಎಂದು ಕ್ಷೇತ್ರದ ಎಲ್ಲ ಬಿಜೆಪಿ ಕಾರ್ಯ ಕರ್ತರ ಸಭೆ ಅವರ ಮನೆಯಲ್ಲಿ ನಡೆಸಿದ್ದರು. ತಾವೇ ದಾವಣಗೆರೆ ದಕ್ಷಿಣ ಕ್ಷೇತ್ರ ಅಭ್ಯರ್ಥಿ ಘೋಷಣೆ ಮಾಡಿ ನಿಲ್ಲಿಸಿದ ಬಿ. ಲೋಕೇಶ್ ಅವರು ಏಕೆ ಮೂರನೇ ಸ್ಥಾನಕ್ಕೆ ಹೋದರು? ಈಗ ಯಾವ ಪಕ್ಷದಲ್ಲಿ ಬಿ.ಲೋಕೇಶ್ ಇದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ಅವರು ತಿಳಿಸಬೇಕು ಎಂದು ಯಶವಂತ ರಾವ್‌ ಜಾಧವ್‌ ಒತ್ತಾಯಿಸಿದ್ದಾರೆ.

- - -

ಬಾಕ್ಸ್‌ ಬಿಜೆಪಿಗೆ ಎಷ್ಟು ಓಟ್‌ಗಳ ಲೀಡ್‌ ಕೊಡಿಸಿದ್ದೀರಿ?ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಮಹಾನ್ ನಾಯಕನ ಊರಿನಲ್ಲಿ ಬಿಜೆಪಿಗೆ ಎಷ್ಟು ವೋಟುಗಳ ಲೀಡ್ ಕೊಡಿಸಿದ್ದಾರೆ? ಈ ಬಗ್ಗೆ ಸಾರ್ವಜನಿಕವಾಗಿ ಮೊದಲು ತಿಳಿಸಲಿ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಯಾವುದಾದರೂ ಒಂದು ಕಾರ್ಪೊರೇಷನ್ ವಾರ್ಡ್, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ನಿಂತು ಗೆದ್ದು ತಮ್ಮ ಶಕ್ತಿ ಏನು ಎನ್ನುವುದು ತೋರಿಸಿದ ಮೇಲೆಯೇ ದಾವಣಗೆರೆ ದಕ್ಷಿಣ ಕ್ಷೇತ್ರದ ಬಗ್ಗೆ ಮಾತನಾಡಲಿ. ಆನಂತರ 4 ಬಾರಿ ಚುನಾವಣೆಯಲ್ಲಿ ನನಗೆ ಏಕೆ ಸೋಲಾಯಿತು ಎನ್ನುವುದನ್ನು ತಿಳಿಸುತ್ತೇನೆ ಎಂದಿದ್ದಾರೆ.

- - - -23ಕೆಡಿವಿಜಿ36ಃ: ಯಶವಂತ ರಾವ್‌ ಜಾಧವ್‌