ಕುಂಕುಮ, ಅರಿಸಿನವಿಟ್ಟು ಮತದಾನ ಜಾಗೃತಿ

| Published : Apr 26 2024, 12:56 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸಂಕೇಶ್ವರ: ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಜಾಗೃತಿಗಾಗಿ ವಿಭಿನ್ನ ಜಾಗೃತಿಯಲ್ಲಿ ತೊಡಗಿರುವ ಆಡಳಿತ ವರ್ಗ ಮತದಾನ ಜಾಗೃತಿಗಾಗಿ ಮಹಿಳೆಯರಿಗೆ ಕುಂಕುಮ ಹಾಗೂ ಅರಿಸಿನ ಇಟ್ಟು ಮತದಾನದಿಂದ ದೂರ ಉಳಿಯದಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಸಂಕೇಶ್ವರಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಜಾಗೃತಿಗಾಗಿ ವಿಭಿನ್ನ ಜಾಗೃತಿಯಲ್ಲಿ ತೊಡಗಿರುವ ಆಡಳಿತ ವರ್ಗ ಮತದಾನ ಜಾಗೃತಿಗಾಗಿ ಮಹಿಳೆಯರಿಗೆ ಕುಂಕುಮ ಹಾಗೂ ಅರಿಸಿನ ಇಟ್ಟು ಮತದಾನದಿಂದ ದೂರ ಉಳಿಯದಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲಾ ಸ್ವಿಪ್ ಸಮಿತಿ, ಹುಕ್ಕೇರಿ ತಾಲೂಕು ಸ್ವಿಪ್ ಸಮಿತಿ ಹಾಗೂ ಗ್ರಾಮ ಪಂಚಾಯತಿ ಹೆಬ್ಬಾಳ ಸಹಯೋಗದಲ್ಲಿ ಹೆಬ್ಬಾಳ ಗ್ರಾಮ ಸೇರಿದಂತೆ 14 ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಿದರು.ಕಾರ್ಯಕ್ರಮಕ್ಕೆ ಹುಕ್ಕೇರಿ ತಾಲೂಕು ಸ್ವಿಪ್ ಸಮಿತಿ ಅಧ್ಯಕ್ಷ ಟಿ.ಆರ್.ಮಲ್ಲಾಡದ ಚಾಲನೆ ನೀಡಿ ಮಾತನಾಡಿ, ಮತದಾನ ಪ್ರತಿಯೊಬ್ಬರ ಹಕ್ಕು ಮೇ.7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮತದಾನ ದಿನದಂದು ಮತದಾನದಿಂದ ದೂರ ಉಳಿಯದಂತೆ ಜನರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ತಾಪಂ ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕವಿತಾ ವಾಘೆ, ಮಹಾಂತೇಶ ಬಾದವನಮಠ ಐ.ಇ.ಸಿ ಸಂಯೋಜಕರು, ಗ್ರಾಪಂ ಸಿಬ್ಬಂದಿ ವರ್ಗ, ಬಿಎಲ್‌ಒ ಗಳು, ಆಶಾ ಕಾರ್ಯಕರ್ತೆಯರು, ನರೇಗಾ ಕಾರ್ಮಿಕರು ಉಪಸ್ಥಿತರಿದ್ದರು.