ಸಾಗರ: ರಾಜೇಂದ್ರಗೆ ಮರೀಗೌಡ ಪ್ರಶಸ್ತಿ

| Published : Oct 29 2023, 01:02 AM IST

ಸಾರಾಂಶ

ತಾಳಗುಪ್ಪ ಹೋಬಳಿಯ ಹಿಂಡೂಮನೆ ಗ್ರಾಮದ ನಿವಾಸಿ
ಸಾಗರ: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು 2023ರ ಕೃಷಿ ಮೇಳದಲ್ಲಿ ನೀಡುವ ಡಾ. ಎಂ.ಎಚ್. ಮರೀಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿಗೆ ತಾಲೂಕಿನ ಎಚ್.ಟಿ. ರಾಜೇಂದ್ರ ಅವರ ಹೆಸರನ್ನು ಪರಿಗಣಿಸಲಾಗಿದೆ. ಹೆಬ್ಬಾಳದ ಜಿಕೆವಿಕೆಯಲ್ಲಿ ನಡೆಯುವ ಕೃಷಿ ಮೇಳದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಬೆಂಗಳೂರು ಕೃಷಿ ವಿವಿ ತಿಳಿಸಿದೆ. ತಾಲೂಕಿನ ತಾಳಗುಪ್ಪ ಹೋಬಳಿಯ ಹಿಂಡೂಮನೆ ಗ್ರಾಮದ ನಿವಾಸಿ ರಾಜೇಂದ್ರ ಅವರು, 40ಕ್ಕೂ ಹೆಚ್ಚು ವರ್ಷಗಳ ಕೃಷಿ ಅನುಭವ ಹೊಂದಿದ್ದಾರೆ. ತಮ್ಮ ತೋಟದಲ್ಲಿ 500ಕ್ಕೂ ಹೆಚ್ಚು ದೇಶಿ-ವಿದೇಶಿ ತಳಿಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಸಮಗ್ರ ಕೃಷಿ ಪದ್ಧತಿಯಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ. ಅವರ ಕೃಷಿ ಸಾಧನೆಗೆ ನಾಡಿನ ಹತ್ತಾರು ಪ್ರಶಸ್ತಿಗಳು ಅರಸಿ ಬಂದಿವೆ. ರಾಜೇಂದ್ರ ಅವರ ತಂದೆ ತಿಮ್ಮಪ್ಪ ಸಹ ಕೃಷಿ ಪಂಡಿತ ಪ್ರಶಸ್ತಿಗೆ ಭಾಜನರಾಗಿದ್ದು ಸ್ಮರಣೀಯ. - - - -28ಕೆ.ಎಸ್.ಎ.ಜಿ.2: ರಾಜೇಂದ್ರ