ಕೊಪ್ಪಳ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶ್ರೀಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿಯನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಮಾಜದ ಬಂಧುಗಳು ಜತೆಯಲ್ಲಿ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.ಜಿಲ್ಲಾ ಚುನಾವಣಾ ಶಾಖೆಯ ತಹಸೀಲ್ದಾರ್ ರವಿಕುಮಾರ ವಸ್ತ್ರದ್ ಮಾತನಾಡಿ, ಕರ್ನಾಟಕದ ಪ್ರಸಿದ್ಧ ಸಂತರಲ್ಲಿ ಶ್ರೀಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ನವರು ಪ್ರಮುಖರು.ಇವರು ಸುಮಾರು 18ನೇ ಶತಮಾನದಲ್ಲಿ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರ ಗ್ರಾಮದಲ್ಲಿ ಜನಿಸಿದರು. ಕೈವಾರ ತಾತಯ್ಯನವರು ಧಾರ್ಮಿಕ ಜಾಗೃತಿ ಮೂಡಿಸಿದ ಮಹಾನ್ ಸಂತರು. ಅವರ ಉಪದೇಶಗಳು ಮಾನವ ಜೀವನಕ್ಕೆ ದಾರಿ ದೀಪವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೆಶಕ ಕರ್ಣಕುಮಾರ, ವಾರ್ತಾ ಇಲಾಖೆಯ ಸಹಾಯಕ ನಿರ್ದೆಶಕ ಡಾ. ಸುರೇಶ ಜಿ., ಬಲಿಜ ಸಮಾಜದ ಮುಖಂಡ ಕೆ.ಶ್ರೀನಿವಾಸ ಕಟ್ಟಿಮನಿ,ನಾಗರಾಜ ಕನಕಗಿರಿ, ಸಹಕಾರ್ಯದರ್ಶಿ ಗೀರಿಶ್ ಕನಕಗಿರಿ, ಅಶೋಕ ಉಣಿಸಿಗಿಡ, ವಿನಯ ಕಟ್ಟಿಮನಿ, ತಿಪ್ಪಯ್ಯ ನಾಯ್ಡು ಎನ್.,ವರಲಕ್ಷ್ಮೀ ಚಿಂತಪಲ್ಲಿ, ಲತಾ,ಸುವರ್ಣ,ನಾಗರತ್ನ, ರೇಖಾ, ಸರೋಜ, ರಕ್ಷಿತ್ ಸೇರಿದಂತೆ ಮತ್ತಿತರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.