ಇಶಾ ನಮಾಝ್‌ನ ಬಳಿಕ ಬುರ್ದಾ ಮಜ್ಲಿಸ್‌, ಇಶಾಲ್‌ ಗಾನ ನಡೆಯಲಿದೆ. ಗಾಯಕರಾದ ಶುಕೂರ್‌ ಇರ್ಫಾನಿ ಚೆಂಬರಿಕ್ಕ ಮತ್ತು ಸಂಗಡಿಗರು, ಶಾಹೀನ್‌ ಬಾಬು, ನಾಸಿಫ್‌ ಕ್ಯಾಲಿಕಟ್‌ ಪಾಲ್ಗೊಳ್ಳಲಿದ್ದಾರೆ.

ಸಜೀಪನಡು(ಉಳ್ಳಾಲ): ಕೇಂದ್ರ ಜುಮಾ ಮಸೀದಿ ಸಜೀಪನಡು ಇದರ ಅಧೀನದಲ್ಲಿರುವ ಜಲಾಲಿಯ್ಯ ಸಮಿತಿ ಸಜೀಪನಡು ವತಿಯಿಂದ ಮರ್ಹೂಂ ಸಜೀಪ್‌ ಉಸ್ತಾದ್‌ ಸ್ಮರಣಾರ್ಥ ನೂತನ ಆ್ಯಂಬುಲೆನ್ಸ್‌ ಲೋಕಾರ್ಪಣೆ ಹಾಗೂ ಬೃಹತ್‌ ಬುರ್ದಾ ಮಜ್ಲಿಸ್‌ ಕಾರ್ಯಕ್ರಮ ಭಾನುವಾರ(ಮೇ 24) ನಡೆಯಲಿದೆ. ನೇತ್ರಾವತಿ ನದಿ ಕಿನಾರೆಯ ಪುರಾತನ ಜುಮಾ ಮಸೀದಿ ವಠಾರದಲ್ಲಿ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಸಂಜೆ ಮಗ್ರಿಬ್‌ ನಮಾಝ್‌ನ ಬಳಿಕ ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್‌, ಕರ್ನಾಟಕ ರಾಜ್ಯ ಅಲೈಡ್‌ ಮತ್ತು ಹೆಲ್ತ್‌ ಕೇರ್‌ ಕೌನ್ಸಿಲ್‌ ಅಧ್ಯಕ್ಷ ಯು.ಟಿ.ಇಫ್ತಿಕಾರ್‌, ಸಜೀಪನಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮುಹಮ್ಮದ್‌ ತುಫೈಲ್‌ ಅವರು ಆ್ಯಂಬುಲೆನ್ಸ್‌ ಲೋಕಾರ್ಪಣೆಗೊಳಿಸಲಿದ್ದಾರೆ. ಇಶಾ ನಮಾಝ್‌ನ ಬಳಿಕ ಬುರ್ದಾ ಮಜ್ಲಿಸ್‌, ಇಶಾಲ್‌ ಗಾನ ನಡೆಯಲಿದೆ. ಗಾಯಕರಾದ ಶುಕೂರ್‌ ಇರ್ಫಾನಿ ಚೆಂಬರಿಕ್ಕ ಮತ್ತು ಸಂಗಡಿಗರು, ಶಾಹೀನ್‌ ಬಾಬು, ನಾಸಿಫ್‌ ಕ್ಯಾಲಿಕಟ್‌ ಪಾಲ್ಗೊಳ್ಳಲಿದ್ದಾರೆ.