ಉಳ್ಳಾಲ: ಕೇಂದ್ರ ಜುಮಾ ಮಸೀದಿ ಸಜೀಪನಡು ಇದರ ಅಧೀನದಲ್ಲಿರುವ ಜಲಾಲಿಯ್ಯ ಸಮಿತಿ ಸಜೀಪನಡು ವತಿಯಿಂದ ಮರ್ಹೂಂ ಸಜೀಪ್ ಉಸ್ತಾದ್ ಸ್ಮರಣಾರ್ಥ ನೂತನ ಆ್ಯಂಬುಲೆನ್ಸ್ ಲೋಕಾರ್ಪಣೆ ಹಾಗೂ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಭಾನುವಾರ ನಡೆಯಿತು.ನೇತ್ರಾವತಿ ನದಿ ಕಿನಾರೆಯ ಪುರಾತನ ಜುಮಾ ಮಸೀದಿ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಜೀಪನಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮುಹಮ್ಮದ್ ತುಫೈಲ್ ಹಾಗೂ ಕೇಂದ್ರ ಜುಮಾ ಮಸೀದಿ ಖತೀಬ್ ಕೆ.ಎಸ್.ಉಸ್ಮಾನ್ ದಾರಿಮಿ ಆ್ಯಂಬುಲೆನ್ಸ್‌ಗೆ ಚಾಲನೆ ನೀಡಿದರು. ಬಳಿಕ ಗಾಯಕರಾದ ಶುಕೂರ್ ಇರ್ಫಾನಿ ಚೆಂಬರಿಕ್ಕ, ಶಾಹೀನ್ ಬಾಬು, ನಾಸಿಫ್ ಕ್ಯಾಲಿಕಟ್ ಅವರಿಂದ ಬುರ್ದಾ, ಇಶಲ್ ಗಾನ ಕಾರ್ಯಕ್ರಮ ನಡೆಯಿತು. ಊರಿನ ಗಣ್ಯರು, ಜಲಾಲಿಯ್ಯ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಜೀಪನಡು: ಜಲಾಲಿಯ್ಯ ಸಮಿತಿಯಿಂದ ನೂತನ ಆ್ಯಂಬುಲೆನ್ಸ್‌ಗೆ ಚಾಲನೆ
ಬಳಿಕ ಗಾಯಕರಾದ ಶುಕೂರ್ ಇರ್ಫಾನಿ ಚೆಂಬರಿಕ್ಕ, ಶಾಹೀನ್ ಬಾಬು, ನಾಸಿಫ್ ಕ್ಯಾಲಿಕಟ್ ಅವರಿಂದ ಬುರ್ದಾ, ಇಶಲ್ ಗಾನ ಕಾರ್ಯಕ್ರಮ ನಡೆಯಿತು. ಊರಿನ ಗಣ್ಯರು, ಜಲಾಲಿಯ್ಯ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.