ಮಾದಕ ವಸ್ತುಗಳ ಮಾರಾಟ: 7 ಆರೋಪಿಗಳ ಬಂಧನ

| Published : Feb 01 2025, 12:00 AM IST

ಸಾರಾಂಶ

ಕಾಲೇಜು ಯುವಕರನ್ನೇ ಟಾರ್ಗೆಟ್ ಮಾಡಿ ಮಾದಕ ವಸ್ತುಗಳ ಮಾತ್ರೆಗಳ ಮಾರಾಟ ಮಾಡುತ್ತಿದ್ದ 7 ಆರೋಪಿಗಳನ್ನು ತುಮಕೂರಿನ ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಕಾಲೇಜು ಯುವಕರನ್ನೇ ಟಾರ್ಗೆಟ್ ಮಾಡಿ ಮಾದಕ ವಸ್ತುಗಳ ಮಾತ್ರೆಗಳ ಮಾರಾಟ ಮಾಡುತ್ತಿದ್ದ 7 ಆರೋಪಿಗಳನ್ನು ತುಮಕೂರಿನ ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಮೂವರು ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಬಂಧಿತರನ್ನು ಭಾನುಪ್ರಕಾಶ್ (32), ರಾಘವೇಂದ್ರ (43) , ಅಭಿಷೇಕ (23), ಮೊಹಮ್ಮದ್ ಸೈಫ್‌ (22), ಸೈಯದ್ ಲುಕ್ಮಾನ್ (23), ಅಫ್ತಾಬ್ (23) ಗುರುರಾಜ್ (28) ಬಂಧಿತ ಆರೋಪಿಗಳು. ಬಂಧಿತರಿಂದ 10,500 ಬೆಲೆಬಾಳುವ 300 ಮಾತ್ರೆಗಳು, ಸೀರಂಜ್ ಗಳು, 7 ಮೊಬೈಲ್ ಹಾಗೂ 2 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ತುಮಕೂರಿನ ಎಸ್ ಐಟಿ ಬಡಾವಣೆ, ಉಪ್ಪಾರಹಳ್ಳಿ, ರೈಲ್ವೆ ಹಳಿಗಳ ಪಕ್ಕ, ಶ್ರೀದೇವಿ ಕಾಲೇಜ್ ಹಾಗೂ ಕೆಲ‌‌ ಮೆಡಿಕಲ್ ಶಾಪ್ ಗಳಿಗೆ ಮಾದಕ ವಸ್ತುಗಳ ಮಾತ್ರೆಗಳನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.

-------------