ಕನ್ನಡಪ್ರಭ ವಾರ್ತೆ ಧಾರವಾಡ

ಇಲ್ಲಿನ ಎಸ್‌ಡಿಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಾಕ್ ಮತ್ತು ಶ್ರವಣ ವಿಭಾಗವು ಇತ್ತೀಚಿನ ಆಟಿಸಂನ ಮಧ್ಯಸ್ಥಿಕೆ: ಸಮಗ್ರ, ಸಂಯೋಜಿತ ಮತ್ತು ಪುರಾವೆ ಆಧರಿತ ವಿಧಾನ” ಎಂಬ ವಿಷಯದ ಕುರಿತು ಎರಡು ದಿನದ ಕಾರ್ಯಾಗಾರ ಏರ್ಪಡಿಸಿದ್ದು ಶನಿವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮೈಸೂರಿನ ಅಖಿಲ್ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಭಾಷಾ ತಜ್ಞೆ ಮತ್ತು ವಿಶೇಷ ಶಿಕ್ಷಣ ವಿಭಾಗದ ಮುಖ್ಯಸ್ಥೆ ಡಾ. ಜಯಶ್ರೀ ಶಾನಬಾಳ, ಆಟಿಸಂ ಸಮಸ್ಯೆಗಳಿಂದ ನಿವಾರಿಸಲು ಆಧುನಿಕ ತಂತ್ರಜ್ಞಾನ ಸಹಕಾರಿಯಾಗಿದೆ ಎಂದು ಹೇಳಿದರು.

ಈ ವೇಳೆ ಪ್ರಾಂಶುಪಾಲ ಡಾ. ಸಂಜಯ ಪರಮಾರ, ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ್‌, ಉಪ ಕುಲಸಚಿವ ಡಾ. ಅಜಂತಾಜಿ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ ಕೆ. ಕುಲಕರ್ಣಿ ಸೇರಿದಂತೆ ಇತರರು ಇದ್ದರು. ಕಾರ್ಯಾಗಾರದಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಿದ ೧೫೦ಕ್ಕೂ ಅಧಿಕ ವಾಕ್ ಮತ್ತು ಶ್ರವಣ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಾಕ್ ಮತ್ತು ಶ್ರವಣ ವಿಭಾಗದ ಮುಖ್ಯಸ್ಥ ಹಾಗೂ ಸಂಘಟನಾ ಅಧ್ಯಕ್ಷ ಡಾ. ವಸೀಮ್ ಅಹ್ಮದ್‌ ಸ್ವಾಗತಿಸಿದರು. ಡಾ. ರಶ್ಮಿ ಪರಿಚಯಿಸಿದರೆ, ಸಿಂಚನಾ ವಂದಿಸಿದರು.