ಶೃಂಗೇರಿ ಶ್ರೀಗಳಿಂದ ಸನಾತನ ಧರ್ಮ ವಿಜಯಯಾತ್ರೆ

| Published : Mar 19 2025, 12:35 AM IST

ಸಾರಾಂಶ

ಬೀದರ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದ ಈ ಶೋಭಾ ಯಾತ್ರೆಯಲ್ಲಿ ಮಹಿಳೆಯರು ಪೂರ್ಣಕುಂಭ ಸ್ವಾಗತದ ಶೋಭಾ ಯಾತ್ರೆ ಭಕ್ತಿ ಭಾವವನ್ನು ಇಮ್ಮಡಿಗೊಳಿಸಿತ್ತು. ನಂತರ ಭಕ್ತಾದಿಗಳು ಧೂಲ ಪಾದಪೂಜೆ ಹಾಗೂ ಗುರುವಂದನ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ, ಬೀದರ್‌

ಸನಾತನ ಧರ್ಮ ವಿಜಯ ಯಾತ್ರೆ ಆದಿ ಶಂಕರಾಚಾರ್ಯರ ಮೂಲ ಸಿದ್ಧಾಂತ ತತ್ವಗಳು, ಸನಾತನ ಧರ್ಮದ ರಕ್ಷಣೆ, ಪಾಲನೆ ಹಾಗೂ ಮಾರ್ಗದರ್ಶನಕ್ಕೆ ಸಂದೇಶ ನೀಡಲು ವಿಜಯ ಯಾತ್ರೆ ಮುಖಾಂತರ ಆಗಮಿಸಿರುವ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾದ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ, ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ನಗರದಲ್ಲಿ ಪುಷ್ಪಾಲಂಕೃತ ತೆರೆದ ವಾಹನದಲ್ಲಿ ಭಾರಿ ಜಯಘೋಷ ಕರತಾಡವದ ಮೂಲಕ ಭವ್ಯ ಮೆರವಣಿಗೆ ನಡೆಸಿ ಸ್ವಾಗತಿಸಲಾಯಿತು.ನಗರಕ್ಕೆ ಶ್ರೀಗಳ ಆಗಮನದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಇಲ್ಲಿನ ರಾಂಪೂರೆ ಕಾಲೋನಿಯ ಹನುಮಾನ ದೇವಸ್ಥಾನದಿಂದ ಪೂರ್ಣಕುಂಭ ಸ್ವಾಗತ, ವೇದ ಘೋಷ ಹಾಗೂ ಮಂಗಳ ವಾದ್ಯದಿಂದ ಶ್ರೀ ಲಕ್ಷ್ಮೀ ಸತ್ಯನಾರಾಯಣ ದೇವಸ್ಥಾನದ (ಗೋ ಶಾಲೆ) ವರೆಗೆ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿತು.ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದ ಈ ಶೋಭಾ ಯಾತ್ರೆಯಲ್ಲಿ ಮಹಿಳೆಯರು ಪೂರ್ಣಕುಂಭ ಸ್ವಾಗತದ ಶೋಭಾ ಯಾತ್ರೆ ಭಕ್ತಿ ಭಾವವನ್ನು ಇಮ್ಮಡಿಗೊಳಿಸಿತ್ತು. ನಂತರ ಭಕ್ತಾದಿಗಳು ಧೂಲ ಪಾದಪೂಜೆ ಹಾಗೂ ಗುರುವಂದನ ಕಾರ್ಯಕ್ರಮ ನೆರವೇರಿತು. ಶೋಭಾ ಯಾತ್ರೆ ನಂತರ ಶಂಕರ ಭಕ್ತ ಮಂಡಳಿ ಹಾಗೂ ಶೃಂಗೇರಿ ಮಠ ನಿರ್ಮಾಣಕ್ಕೆ ಭೂಮಿದಾನ ಮಾಡಿದ ಪ್ರಭಾಕರ ಮೈಲಾಪೂರ ದಂಪತಿಗಳಿಂದ ಧೂಳಿ ಪಾದಪೂಜೆ ಹಾಗೂ ವಿವಿಧ ಸಮಾಜ ಮುಖಂಡರಿಂದ ಫಲ ತಾಂಬೂಲ ಸಮರ್ಪಣೆ ನಡೆದು ಜಗದ್ಗುರುಗಳಿಂದ ಅನುಗ್ರಹ ವಚನಾಮೃತ ಆಶೀರ್ವಚನ ನಡೆಯಿತು. ರಾತ್ರಿ 9ರ ನಂತರ ನಂತರ ಚಂದ್ರಮೌಳೀಶ್ವರ ಪೂಜೆ ನೆರವೇರಿತು. ಶೋಭಾ ಯಾತ್ರೆ ಹಾಗೂ ಗುರು ದರ್ಶನಕ್ಕೆ ಬಂದಂಥಹ ಎಲ್ಲಾ ಭಕ್ತರಲ್ಲಿ ಪುರುಷರು ಧೋತಿ, ಬಿಳಿ ಲುಂಗಿ ಮತ್ತು ಉಪ್ಪರಣಿ. ಮಹಿಳೆಯರು ಸೀರೆ ಧರಿಸಿ ಭಾರತೀಯ ವೇಶ ಭೂಷಣ ಧಾರಿಯಾಗಿದ್ದು ವಿಶೇಷವಾಗಿತ್ತು.ಕಾರ್ಯಕ್ರಮದಲ್ಲಿ ನರಸಿಂಹ ದೀಕ್ಷಿತ, ಶಾಮಕಾಂತ ಕುಲಕರ್ಣಿ, ವಿನೋದ ಕುಲಕರ್ಣಿ, ರಾಜೇಶ ಕುಲಕರ್ಣಿ ಹಳ್ಳಿಖೇಡ (ಬಿ), ಬಾಬುರಾವ್‌ ಕುಲಕರ್ಣಿ, ದಿಗಂಬರ ದೀಕ್ಷಿತ, ಕಲ್ಪನಾ ದೇಶಪಾಂಡೆ, ವಸಂತ ಕುಲಕರ್ಣಿ, ರಮೇಶ ಕುಲಕರ್ಣಿ, ಸೂರ್ಯಕಾಂತ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ವಿನೋದ ಕುಲಕರ್ಣಿ, ಪ್ರಭಾಕರರಾವ್‌ ಮೈಲಾಪೂರೆ, ರವೀಂದ್ರ ಸ್ವಾಮಿ, ನಾರಾಯಣರಾವ್‌ ಪಾಟೀಲ್‌, ಶಂಕರ ಕೊಟ್ಟರಕಿ, ಹಣಮಯ್ಯ ಅರ್ಥಂ, ರಾಜೇಂದ್ರ ವರ್ಮಾ, ಯಾದವ ಪಾಟೀಲ್‌, ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ತರುಣ ನಾಗಮಾರಪಳ್ಳಿ, ರಾಮಕೃಷ್ಣನ ಸಾಳೆ, ವೆಂಕಟೇಶ ಮೋರ್ಖಂಡಿ, ಬಿಂದಾಚಾರ್‌, ಪ್ರಭಾಕರರಾವ್‌ ಕಾರಾಮುಂಗಿ, ಕಲ್ಯಾಣರಾವ್‌ ಗೋರ್ಟಾ, ದಿನಕರರಾವ್‌, ರಾಜೇಂದ್ರ ಕುಲಕರ್ಣಿ, ಮನೋಹರ ದಂಡೆ, ಮುರಳೀಧರರಾವ್‌, ಮಹೇಶ ಕಣಜಿಕರ್‌, ರಮೇಶ ಪಾಟೀಲ್‌, ಸತ್ಯದೀಪ ಹಾಗೂ ಮಧುಕರರಾವ್‌ ಸೇರಿದಂತೆ ಅನೇಕರು ಇದ್ದರುಶ್ಯಾಮಕಾಂತ್ ಕುಲಕರ್ಣಿ ನಿರೂಪಿಸಿ ಹರಿಕೇಶ ಕುಲಕರ್ಣಿ ಸ್ವಾಗತಿಸಿದರೆ ನರಸಿಂಹ ದೀಕ್ಷಿತ ಮೂಡಿಗೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಖಾ ಸೌದಿ ಸ್ವಾಗತ ಗೀತೆ ಹಾಡಿದರು.ಮಾ.19ರಂದು ಶಂಕರ ಮಠದ ಶಿಲಾನ್ಯಾಸ :

ಮಾ. 19ರಂದು ಶಂಕರ ಮಠದ ಶಿಲಾನ್ಯಾಸ ನೆರವೇರಲಿದ್ದು, ಬೆಳಿಗ್ಗೆ 10ಕ್ಕೆ ಶ್ರೀಗಳ ಅಮೃತ ಹಸ್ತದಿಂದ ಗುರು ದರ್ಶನ, ಗುರು ಪಾದಪೂಜೆ ಹಾಗೂ ಗುರು ಭಿಕ್ಷಾವಂದನೆ, ವಸ್ತ್ರ ಕಾಣಿಕೆ, ಫಲ ಸಮರ್ಪಣೆ, ಶ್ರೀಗಳಿಂದ ಶುಭಾಶೀರ್ವಾದ ಸಹಿತ ಮಂತ್ರಾಕ್ಷತೆ ನಂತರ ಭಕ್ತರಿಗೆ ಮಹಾಪ್ರಸಾದ, ಸಾಯಂಕಾಲ ಶ್ರೀ ಶ್ರೀಗಳವರಿಗೆ ನಗರದ ಎಲ್ಲಾ ಜನ ಸಮೂಹದಿಂದ ಭಕ್ತಿಪೂರ್ವಕ ಬೀಳ್ಕೊಡುಗೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತರು ಸಹ ಕುಟುಂಬದೊಂದಿಗೆ ಭಾಗವಹಸಿ ತನು, ಮನ, ಧನದಿಂದ ಗುರು ಸೇವೆ ಮಾಡಿ ಜಗದ್ಗುರುಗಳ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಸಮಸ್ತ ಶ್ರೀ ಶಂಕರ ಭಕ್ತ ಮಂಡಳಿ ಮನವಿಸಿದೆ.

ಸನಾತನ ಧರ್ಮ ಸರ್ವ ಶ್ರೇಷ್ಠ, ಜೀವನ ಸಾರ್ಥಕತೆಗೆ ಮಾರ್ಗದರ್ಶಿ: ವಿಧುಶೇಖರ ಭಾರತೀ ಶ್ರೀಬೀದರ್‌: ಸನಾತನ ಧರ್ಮ ಕೇವಲ ಜೀವನ ಪದ್ದತಿಯನ್ನಷ್ಟೇ ಅಲ್ಲ ಜೀವನದ ಅರ್ಥ, ಸಾರ್ಥಕ ಜನ್ಮವಾಗಿಸಲು ಮಾರ್ಗ ತೋರಿಸಿ ಮರಣೋತ್ತರದ ನಂತರವೂ ಉತ್ತಮ ಜನ್ಮ ಪಡೆಯಲು ಸಹಕಾರಿಯಾಗಿ ಸರ್ವ ಶ್ರೇಷ್ಟ ಧರ್ಮವಾಗಿದೆ ಎಂದು ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾದ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ, ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ತಿಳಿಸಿದರು.

ಅವರು ಆದಿ ಶಂಕರಾಚಾರ್ಯರ ಮೂಲ ಸಿದ್ಧಾಂತ ತತ್ವಗಳು, ಸನಾತನ ಧರ್ಮದ ರಕ್ಷಣೆ, ಪಾಲನೆ ಹಾಗೂ ಮಾರ್ಗದರ್ಶನಕ್ಕೆ ಸಂದೇಶ ನೀಡಲು ಸನಾತನ ಧರ್ಮ ವಿಜಯ ಯಾತ್ರೆ ಮುಖಾಂತರ ಆಗಮಿಸಿರುವ ಅವರು ಮಂಗಳವಾರ ಸಂಜೆ ಇಲ್ಲಿನ ರಾಂಪೂರೆ ಕಾಲೋನಿಯ ಹನುಮಾನ ದೇವಸ್ಥಾನದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.ಪ್ರತಿಯೊಬ್ಬ ಸನಾತನಿ ಆದ್ಯ ಶ್ರೀ ಶಂಕರ ಭಗವತ್ಪಾದಾಚಾರ್ಯರ ಸ್ಮರಣೆಯಲ್ಲಿ ಸದಾ ತಲ್ಲೀನರಾಗಿರಬೇಕು. ಅವರು ಹಾಕಿಕೊಟ್ಟಿರುವ ವೈದಿಕ ಧರ್ಮದ ಮಾರ್ಗದಲ್ಲಿ ನಾವು ನಡೆಯುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.ಸುಖವು ಹಣ, ಆಸ್ತಿ ಅಂತಸ್ತಿನಿಂದ ಮಾತ್ರ ಸಿಗೋಲ್ಲ. ಅದನ್ನು ಸಂತೋಷದಿಂದ ಬಳಸಲು ಪುಣ್ಯ ಬೇಕು. ಪುಣ್ಯದಿಂದಲೇ ಸುಖ ಪ್ರಾಪ್ತವಾಗುತ್ತದೆ ಎಂಬುವದನ್ನು ಪ್ರತಿಯೊಬ್ಬರೂ ಅರಿಯಬೇಕು. ನಿತ್ಯವೂ ಅತೀ ಸುಖವನ್ನೇ ಅರಿಸುತ್ತ, ದುಃಖವನ್ನು ದೂರವಿಟ್ಟು ಕುಳಿತಿರುವದು ಸರಿಯಲ್ಲ. ಪುಣ್ಯದ ಕಾರ್ಯದ ಮೂಲಕ ಸುಖವನ್ನು ನಮ್ಮ ಜೀವನ ಸಾಗಿಸಬೇಕು ಎಂದು ಶ್ರೀಗಳು ತಿಳಿಸಿದರು.