ಸಾರಾಂಶ
ಕಡೂರು, ಅಖಿಲ ಭಾರತ ವೀರಶೈವ ಮಹಾಸಭಾದ ಕಡೂರು ತಾಲೂಕು ಘಟಕದ ಅಧ್ಯಕ್ಷರಾಗಿ ಸಾಣೇಹಳ್ಳಿ ಎಸ್.ಪಿ.ರೇಣುಕಾರಾಧ್ಯ ಅವಿರೋಧವಾಗಿ ಆಯ್ಕೆಯಾದರು.
ಸಹಾಯಕ ಚುನಾವಣಾಧಿಕಾರಿ ಪಿ.ನಂಜುಂಡಾರಾಧ್ಯ ಘೋಷಣೆ
ಕನ್ನಡಪ್ರಭ ವಾರ್ತೆ, ಕಡೂರುಅಖಿಲ ಭಾರತ ವೀರಶೈವ ಮಹಾಸಭಾದ ಕಡೂರು ತಾಲೂಕು ಘಟಕದ ಅಧ್ಯಕ್ಷರಾಗಿ ಸಾಣೇಹಳ್ಳಿ ಎಸ್.ಪಿ.ರೇಣುಕಾರಾಧ್ಯ ಅವಿರೋಧವಾಗಿ ಆಯ್ಕೆಯಾದರು.
ಮಹಾಸಭಾದ ರಾಜ್ಯ ಸಮಿತಿ ಆದೇಶದಂತೆ ಪಟ್ಟಣದ ಎಪಿಎಂಸಿಯ ಆರಾಧ್ಯ ಎಂಟರ್ ಪ್ರೈಸಸ್ ನ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ರೇಣುಕಾರಾಧ್ಯರ ಆಯ್ಕೆಯನ್ನು ಸಹಾಯಕ ಚುನಾವಣಾಧಿಕಾರಿ ಪಿ.ನಂಜುಂಡಾರಾಧ್ಯ ಘೋಷಣೆ ಮಾಡಿದರು.ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿಸಮಾಜದ ಹಿರಿಯ ಜಿಲ್ಲಾ ಮುಖಂಡ ಎಚ್.ಎಂ.ಲೋಕೇಶ್ ಮಾತನಾಡಿ, ರೇಣುಕಾರಾಧ್ಯ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಂಡರುವ ಅವರ ಸೇವೆ ಗುರುತಿಸಿ ಅವರನ್ನು ಅವಿರೋಧ ಆಯ್ಕೆ ಮಾಡಿ ಸಮಾಜ ಸೇವೆಗೆ ಅವಕಾಶ ನೀಡಲಾಗಿದೆ ಎಂದರು.ಅಭಿನಂದನೆ ಸ್ವೀಕರಿಸಿದ ನೂತನ ಅಧ್ಯಕ್ಷ ಎಸ್.ಪಿ.ರೇಣುಕಾರಾಧ್ಯ ಮಾತನಾಡಿ, ಸಮಾಜದ ಬಂಧುಗಳು ಹಾಗೂ ಹಿರಿಯರು ಸೇರಿ ನನ್ನನ್ನು ಅ.ಭಾ.ವೀ. ಮಹಾಸಭಾದ ತಾಲೂಕು ಅಧ್ಯಕ್ಷರಾಗಿ ಮಾಡಿರುವುದಕ್ಕೆ ಎಲ್ಲರಿಗೂ ನನ್ನ ಕೃತಜ್ಞತೆಗಳು ಸಮಾಜದ ಸೇವೆ ಮಾಡುವ ಅವಕಾಶ ದೊರಕಿರುವುದಕ್ಕೆ ನನಗೆ ಅತೀವ ಸಂತೋಷ ತಂದಿದೆ. ಸಮಾಜದ ಹಿರಿಯರ ಸಲಹೆ, ಮಾರ್ಗದರ್ಶನ ಪಡೆದು ಪ್ರಾಮಾಣಿಕವಾಗಿ ತನು, ಮನ, ಧನದಿಂದ ಸಮಾಜದ ಶ್ರೇಯಸ್ಸಿಗೆ ದುಡಿಯುತ್ತೇನೆ ಎಂದರು. ನೂತನವಾಗಿ ಆಯ್ಕೆಯಾದ 13 ಜನ ನಿರ್ದೇಶಕರು, 6 ಜನ ಮಹಿಳಾ ನಿರ್ದೇಶಕಿಯರ ಸಭೆ ಕರೆದು ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಹಾಸಭಾದ ಮಾರ್ಗದರ್ಶನದಂತೆ ಅಡಳಿತ ಮಂಡಳಿ ರಚನೆ ಮಾಡಿ ಸಮಾಜದ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇವೆ. ಉತ್ತಮ ಸೇವೆ ಮತ್ತು ಸಂಘಟನೆಗೆ ಒತ್ತು ನೀಡಲಾಗುವುದು ಸಮಾಜದ ಕಟ್ಟ ಕಡೆ ವ್ಯಕ್ತಿಗೂ ನ್ಯಾಯ ಕೊಡಿಸಲು ಶ್ರಮಿಸುತ್ತೇನೆ ಎಂದರು. ನಿಕಟಪೂರ್ವ ಅಧ್ಯಕ್ಷ ತುರುವನಹಳ್ಳಿ ರೇಣುಕಪ್ಪ, ಹಿರಿಯರಾದ ಎಚ್.ವಿ. ಗಿರೀಶ್, ನಿವೃತ್ತ ಎಸಿಎಫ್ ಬಸವರಾಜಪ್ಪ, ನಂಜುಂಡಾರಾಧ್ಯರು, ಆರ್.ಜಿ. ಕೊಪ್ಪಲು ಜಗದೀಶ್, ಕೆ.ಎಂ.ಶಿವಕುಮಾರ್, ಎಂ.ಗಂಗಾಧರಯ್ಯ(ಶಿವಣ),, ಗರ್ಜೆ ರಾಜಶೇಖರ್, ಎಚ್.ಸಿ. ರೇವಣಸಿದ್ದಪ್ಪ, ಮೆಸ್ಕಾಂ ಮಲ್ಲಿಕಾರ್ಜುನ್, ಚೀಲನಹಳ್ಳಿ ಕುಶಕುಮಾರ್ ಮತ್ತಿತರರು ಇದ್ದರು.-- ಬಾಕ್ಸ್ --ಅಖಿಲ ಭಾರತ ವೀರಶೈವ ಲಿಂಗಾಯತ ಘಟಕದ ನೂತನ ನಿರ್ದೇಶಕರು:. ಕೆ.ಎನ್.ಕುಮಾರ್(ಕುಪ್ಪಾಳು),ಸಿ.ಹೆಚ್.ಕುಶಕುಮಾರ್ ಚೀಲನಹಳ್ಳಿ, ಬಿ.ಜಗದೀಶ್ ಜಿ.ಕೊಪ್ಪಲು, ಕುಮಾರ್ ಎಂ.ಎಂ.ಕಡೂರು, ಶ್ರೀಕಂಠಯ್ಯ ಗಿರಿಯಾಪುರ, ಶಿವಶಂಕರಪ್ಪ ಗಿರಿಯಾಪುರ, ಹೇಮಂತಕುಮಾರ್ ಯಳಗೊಂಡನಹಳ್ಳಿ, ಪಿ.ಆರ್.ಪ್ರೇಮಕುಮಾರ್ ದೊಡ್ಡಪಟ್ಟಣಗೆರೆ, ಸತೀಶ್ ಕೆ.ಹೊಸಳ್ಳಿ, ಶಿವಕುಮಾರ್ ಕರಿಯನಹಳ್ಳಿ, ಯೋಗೀಶ್ ಕೆ.ಹೊಸಳ್ಳಿ, ಶೇಖರಪ್ಪ ಚೀಲನಹಳ್ಳಿ, ಮಲ್ಲಿಕಾರ್ಜುನ್ ಜೆ. ಕಡೂರು ಹಾಗೂ ಶುಭಮಂಗಳ ಯಗಟಿ, ಕಲ್ಪನ ಕಡೂರು, ಮಂಗಳ ಎಂ ಆಡಿಗೆರೆ, ಸವಿತ ಜಿ.ಎಂ.ಗಿರಿಯಾಪುರ, ವೀಣಾ ಈಶ್ವರಪ್ಪ ಕೆ.ಹೊಸಹಳ್ಳಿ, ಜಯಂತಿ ಕಡೂರು.
8ಕೆಕೆಡಿಯು1.ಕಡೂರು ತಾಲೂಕು ಅಖಿಲ ಭಾರತ ವೀರಶೈವ ಮಹಾ ಸಭಾದ ನೂತನ ಅಧ್ಯಕ್ಷರಾದ ಸಾಣೇಹಳ್ಳಿ ಎಸ್.ಪಿ.ರೇಣುಕಾರಾಧ್ಯರವರನ್ನು ಅಭಿನಂದಿಸಲಾಯಿತು.