ಕಡಲೆಕಾಳು ವಶ: ಇಬ್ಬರು ಆರೋಪಿಗಳ ಬಂಧನ

| Published : Jul 09 2024, 12:56 AM IST

ಸಾರಾಂಶ

culprint arrest in hyriyuru

-2 ಲಕ್ಷ 40 ಸಾವಿರ ಮೌಲ್ಯದ 60 ಚೀಲ ಕಡಲೆಕಾಳು ವಶಪಡಿಸಿಕೊಂಡ ಪೊಲೀಸರು

------

ಕನ್ನಡಪ್ರಭ ಹಿರಿಯೂರು:

ನಗರದ ಗೋಡೌನ್ ಒಂದರಲ್ಲಿ 2 ಲಕ್ಷ 40 ಸಾವಿರ ಮೌಲ್ಯದ ಕಡಲೆ ಕಾಳು ಚೀಲಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ನಗರ ಠಾಣಿಯ ಸಿಪಿಐ ರಾಘವೇಂದ್ರ ಕಾಂಡಿಕೆ ನೇತೃತ್ವದ ತಂಡವು 24 ಗಂಟೆಯಲ್ಲಿ ಪತ್ತೆ ಹಚ್ಚಿ ಕಳವು ಮಾಲು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.

ನಗರದ ಹುಳಿಯಾರು ರಸ್ತೆಯಲ್ಲಿರುವ ತಾಹಾ ಪ್ಯಾಲೇಸ್ ಪಕ್ಕದಲ್ಲಿದ್ದ ಲಕ್ಷ್ಮೀಚಂದ್ ಅವರಿಗೆ ಸೇರಿದ ಗೋಡೌನ್ ನನ್ನು ಸಾಗರ್ ಎನ್ನುವವರು ಬಾಡಿಗೆ ಪಡೆದು ಅದರಲ್ಲಿ 2 ಲಕ್ಷದ 40 ಸಾವಿರ ಮೌಲ್ಯದ ತಲಾ 60 ಕೆಜಿ ತೂಕದ 60 ಕಡಲೆ ಕಾಳು ಚೀಲಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದ ಬಗ್ಗೆ ನಗರ ಠಾಣೆಯಲ್ಲಿ ಜು.5 ರಂದು ದೂರು ನೀಡಿದ್ದರು.

ಆ ಹಿನ್ನೆಲೆಯಲ್ಲಿ ಅಧೀಕ್ಷಕರ ಮಾರ್ಗದರ್ಶನದಲ್ಲಿ ನಗರ ಠಾಣೆ ಸಿಪಿಐ ರಾಘವೇಂದ್ರ ಕಾಂಡಿಕೆ ನೇತೃತ್ವದ ತಂಡವು ತ್ವರಿತಗತಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಯಲ್ಲದಕೆರೆ ಬಸವರಾಜ್ ಹಾಗೂ ವೇದಾವತಿ ನಗರದ ಸಿ.ಮಂಜುನಾಥ್ ಎಂಬುವರ ವಿಚಾರಣೆ ಮಾಡಿದಾಗ ಬಸವರಾಜ್, ಸಾಲದ ಸಮಸ್ಯೆಯಿಂದ ಬಳಲುತ್ತಿದ್ದು, ಸಾಲದ ಕಂತು ಕಟ್ಟುವ ಸಲುವಾಗಿ ಕಡಲೆ ಚೀಲ ಕದ್ದು ನಗರದ ಬೈಪಾಸ್ ರಸ್ತೆಯಲ್ಲಿರುವ ವೀರಭದ್ರಸ್ವಾಮಿ ಟ್ರೇಡರ್ಸ್ ಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿತರಿoದ ಕಳವು ಮಾಲು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ಕಾರು ಹಾಗೂ ಒಂದು ಟ್ರ್ಯಾಕ್ಟರ್‌ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ನಗರ ಠಾಣೆ ಸಿಪಿಐ ರಾಘವೇಂದ್ರ ಕಾಂಡಿಕೆ, ಸಿಬ್ಬಂದಿಯವರಾದ ದೇವೇಂದ್ರಪ್ಪ, ಸಿದ್ದಲಿಂಗೇಶ್ವರ, ಸುದರ್ಶನಗೌಡ, ನಾಗಣ್ಣ, ಸುರೇಶ್ ನಾಯ್ಕ, ಜಾಫರ್, ಸಾದಿಕ್ ಉಲ್ಲಾ ಅವರನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

-----

ಫೋಟೊ:ಚಿತ್ರ 1,2

ಕಡಲೆಕಾಳು ಚೀಲ ಕದ್ದವರನ್ನು ಬಂಧಿಸಿ 2 ಲಕ್ಷ 40 ಸಾವಿರ ಮೌಲ್ಯದ 60 ಚೀಲ ಕಡಲೆಕಾಳನ್ನು ವಶಪಡಿಸಿಕೊಂಡಿರುವ ನಗರಠಾಣೆ ಪೊಲೀಸರು.