ಮಂಗಳೂರಿನ ಸಂಗೀತ ಭಾರತೀ ಪ್ರತಿಷ‍್ಠಾನ ಪ್ರಸ‍್ತುತ ಪಡಿಸುವ ಉತ್ಕೃಷ್ಟ ಮಟ್ಟದ ಕರ್ಣಾಟಕ ಬ‍್ಯಾಂಕ್ ‘ಸ್ವರ ತರಂಗ್’ ಸಂಗೀತ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ‍್ಲಿ 27ರಂದು ಸಂಜೆ 5.30 ರಿಂದ ನಡೆಯಲಿದೆ.
ಮಂಗಳೂರು: ಮಂಗಳೂರಿನ ಸಂಗೀತ ಭಾರತೀ ಪ್ರತಿಷ‍್ಠಾನ ಪ್ರಸ‍್ತುತ ಪಡಿಸುವ ಉತ್ಕೃಷ್ಟ ಮಟ್ಟದ ಕರ್ಣಾಟಕ ಬ‍್ಯಾಂಕ್ ‘ಸ್ವರ ತರಂಗ್’ ಸಂಗೀತ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ‍್ಲಿ 27ರಂದು ಸಂಜೆ 5.30 ರಿಂದ ನಡೆಯಲಿದೆ.
ಪೂರ್ವಾರ್ಧದಲ‍್ಲಿ ಕೋಲ್ಕತ್ತದ ವಿದುಷಿ ರುಚಿರ ಪಾಂಡ ಇವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ. ಇವರಿಗೆ ಉತ್ತರ ಕನ್ನಡದ ಸತೀಶ್ ಭಟ್ ಹೆಗ‍್ಗಾರ್ ಹಾರ್ಮೋನಿಯಂ ಹಾಗೂ ಮಂಬೈನ ಯವ ತಬ‍್ಲಾ ಪಟು ಯಶವಂತ್ ವೈಷ್ಣವ್ ಸಾಥ್ ನೀಡಲಿದ‍್ದಾರೆ. ಉತ್ತರಾರ್ಧದಲ‍್ಲಿ ನವ ದೆಹಲಿಯ ಅಭಯ್ ರುಸ‍್ತುಂ ಇವರಿಂದ ‘ಸಂತೂರ್ ವಾದನ’ ಕಾರ್ಯಕ್ರಮ ನಡೆಯಲಿದೆ. ಇವರಿಗೆ ಮಂಬೈನ ಯವ ತಬ‍್ಲಾ ಪಟು ಯಶವಂತ್ ವೈಷ್ಣವ್ ಸಾಥ್ ನೀಡಲಿದ‍್ದಾರೆ.ಕರ್ಣಾಟಕ ಬ‍್ಯಾಂಕ್ ಮಖ್ಯ ಪ್ರಾಯೋಜಕತ್ವವನ‍್ನು ವಹಿಸಿಕೊಂಡಿರುತ್ತದೆ. ಸಹ ಪ್ರಾಯೋಜಕರಾಗಿ ಬೆಂಗಳೂರಿನ ಪ್ರಖ‍್ಯಾತ ಉದ್ಯಮಿ ಡಾ. ಪಿ. ದಯಾನಂದ ಪೈ, ಕೆನರಾ ಬ‍್ಯಾಂಕ್, ಆಭರಣ, ಬ‍್ಯಾಂಕ್ ಆಫ್ ಮಹಾರಾಷ್ಟ್ರ, ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ‍್ಥೆ ಸಹಕರಿಸಲಿದೆ. ಈ ಕಾರ್ಯಕ್ರಮಕ‍್ಕೆ ಸಂಗೀತಾಸಕ್ತರೆಲ್ಲರಿಗೂ ಮಕ್ತ ಪ್ರವೇಶಾವಕಾಶವಿದ‍್ದು, ಸಂಗೀತ ಶಿಕ್ಷಕರು, ವಿದ‍್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಸಂಗೀತ ಭಾರತಿ ಪ್ರತಿಷ‍್ಠಾನದ ಉಪಾಧ್ಯಕ್ಷ ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.