ಮಹಿಳಾ ಸಮಾವೇಶದಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ

| Published : Jan 21 2025, 12:33 AM IST

ಮಹಿಳಾ ಸಮಾವೇಶದಲ್ಲಿ ಗಮನ ಸೆಳೆದ ವಸ್ತು ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

, ಜೇನುಗೂಡು ತಂಡದವರು ಚಕ್ಕುಲಿ, ನಿಪ್ಪಟ್ಟು, ಕಜ್ಜಾ.ಯ, ಹಪ್ಪಳ, ಸಂಡಿಗೆ, ಜಾಮೂನು, ಮಂಡಿ ಮೊಹಲ್ಲಾ ನವಜ್ಯೋತಿ, ನವಚೇತನ, ಸಿರಿ, ಸ್ನೇಹ ಬಳಗದವರು ಬಳೆ, ಓಲೆ, ಅಲಂಕಾರಿಕ ವಸ್ತುಗಳನ್ನು ಪ್ರದರ್ಶಿಸಿದ್ದರು.

ಕನ್ನಡಪ್ರಭ ವಾರ್ತೆ ಮೈಸೂರುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಳಸ್ತವಾಡಿಯ ಸಂಕಲ್ಪ ಸೌಧದಲ್ಲಿ ಸೋಮವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಮಹಿಳಾ ಸಮಾವೇಶದಲ್ಲಿ ವಸ್ತು ಪ್ರದರ್ಶನ ಗಮನ ಸೆಳೆಯಿತು.ಆಲನಹಳ್ಳಿಯ ಪ್ರಕೃತಿ, ಪ್ರಿಯದರ್ಶಿನಿ, ನೇತ್ರಾವತಿ ಅವರು ಜೂಟ್ ಬ್ಯಾಗ್, ಪೆಟ್ಟಿಕೋಟ್, ಕೈಚೀಲಗಳು, ಕಳಸ್ತವಾಡಿಯ ಶ್ರೀ ತುಳಸಿ ನವಚೇತನ ವಿದ್ಯಾಸಿರಿಯವರು ಜೋಳದ ರೊಟ್ಟಿ, ಅಕ್ಕಿ ರೊಟ್ಟಿ, ಎಣ್ ಗಾಯಿ, ಅಗಸೇ ಚೆಟ್ನಿ, ಶೇಂಗಾ ಹೊಳಿಗೆ, ಎಳ್ಳು ಹೋಳಿಗೆ, ಬಾಳೆ ದಿಂಡಿನ ಕೋಸಂಬರಿ, ಪರೋಟ, ಬಂಗಾರಪೇಟೆ ಪಾನಿಪುರಿ, ಮಸಾಲಪುರಿ, ಉದಯಗಿರಿಯ ನಿಸರ್ಗ, ಅರುಣೋದಯದವರು ಹಣ್ಣುಗಳು ಮತ್ತು ಹಣ್ಣುಗಳ ರಸಾಯನ, ವರುಣದ ಪ್ರಶಾಂತ, ಸ್ಪಂದನ, ಜೇನುಗೂಡು ತಂಡದವರು ಚಕ್ಕುಲಿ, ನಿಪ್ಪಟ್ಟು, ಕಜ್ಜಾ.ಯ, ಹಪ್ಪಳ, ಸಂಡಿಗೆ, ಜಾಮೂನು, ಮಂಡಿ ಮೊಹಲ್ಲಾ ನವಜ್ಯೋತಿ, ನವಚೇತನ, ಸಿರಿ, ಸ್ನೇಹ ಬಳಗದವರು ಬಳೆ, ಓಲೆ, ಅಲಂಕಾರಿಕ ವಸ್ತುಗಳನ್ನು ಪ್ರದರ್ಶಿಸಿದ್ದರು.ಸರಸ್ವತಿಪುರಂ ಕಾವೇರಿ, ಧರಣಿಯವರು ಬಿದಿರಿನ ಬುಟ್ಟಿಗಳು, ಕುಕ್ಕೆಗಳು, ಮೊರಗಳು ಹಾಗೂ ಇತರೆ ವಸ್ತುಗಳು, ಸಿದ್ದರಾಮನಹುಂಡಿಯ ಹೊಸಬೆಳಕು, ಸಿಂಧೂರು, ಶ್ರೀಗಂಧ ತಂಡದವರು ಕಡ್ಲೆ ಮಿಠಾಯಿ, ಸುಭಾಷ್ನಗರ ಪುಣ್ಯಕೋಟಿ ಗಮ್ಯ ಮತ್ತು ದ್ರವ್ಯ ತಂಡದವರು ಅಗರಬತ್ತಿ, ಸಾಮ್ರಾಣಿ, ಕಾಮನಕೆರೆ ಹುಂಡಿ ತಂಡದವರು ಸಿಹಿ ತಿನಿಸುಗಳು, ಎಂಟು ನಮೂನೆ ಚಕ್ಕುಲಿಗಳು, ಎಚ್ಆರ್ಟಿಸಿ ತಂಡದವರು ಗೊಂಬೆ, ರೇಷ್ಮೆ ಹಾರ, ಬಟ್ಟೆ ಬ್ಯಾಗ್, ಮಹಿಳಾ ಬಳಕೆಯ ವಸ್ತುಗಳನ್ನು ಪ್ರದರ್ಶಿಸಿ, ಗಮನ ಸೆಳೆದರು.