ನಾಳೆಯಿಂದ 4 ದಿನ ಯಲ್ಲಾಪುರದಲ್ಲಿ ಸಂಕಲ್ಪ ಉತ್ಸವ

| Published : Oct 31 2024, 12:51 AM IST

ನಾಳೆಯಿಂದ 4 ದಿನ ಯಲ್ಲಾಪುರದಲ್ಲಿ ಸಂಕಲ್ಪ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ನ. ೧ರಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸುವರು.

ಯಲ್ಲಾಪುರ: ಪಟ್ಟಣದ ಗಾಂಧೀ ಕುಟೀರದಲ್ಲಿ ಪ್ರತಿವರ್ಷದಂತೆ ೩೮ನೇ ಸಂಕಲ್ಪ ಉತ್ಸವವನ್ನು ಕನ್ನಡ ಜೀವನ ಹಬ್ಬ- ಸಂಸ್ಕೃತಿ ಸುಗ್ಗಿ ನ. ೧ರಿಂದ ೪ರ ವರೆಗೆ ೪ ದಿನಗಳ ಕಾಲ ಆಯೋಜಿಸಲಾಗಿದೆ.

ನ. ೧ರಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕರಾದ ಶಿವರಾಮ ಹೆಬ್ಬಾರ, ಶಾಂತಾರಾಮ ಸಿದ್ದಿ, ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ, ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಶಿರಸಿಯ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ರಾಮಕೃಷ್ಣ ಹೆಗಡೆ ಚಿರಂತನ ಸಂಸ್ಥೆಯ ಅಧ್ಯಕ್ಷ ಶಶಿಭೂಷಣ ಹೆಗಡೆ, ಜ್ಯೋತಿಷಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ವೈಟಿಎಸ್ಎಸ್ ಅಧ್ಯಕ್ಷ ರವಿ ಶಾನಭಾಗ, ಸ್ವರ್ಣವಲ್ಲೀ ಮಠದ ಯಲ್ಲಾಪುರ ನಗರಸೀಮಾ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ತಾಲೂಕು ಕಸಾಪ ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಉಮ್ಮಚಗಿಯ ಶ್ರೀಮಾತಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಉಪಸ್ಥಿತರಿರುವರು. ಸಂಜೆ ೪.೩೦ಕ್ಕೆ ಉಪಳೇಶ್ವರದ ಶ್ರೀನಿಧಿ ಮಹಿಳಾ ಯಕ್ಷಕಲಾ ಬಳಗದ ಕಲಾವಿದರಿಂದ ಸುಧನ್ವ ಕಾಳಗ, ಸಂಜೆ ೬ ಗಂಟೆಗೆ ಗಣಪತಿ ಕಟ್ಟೆಯ ಮಹಾಗಣಪತಿ ಭಜನಾ ಮಂಡಳಿಯ ಕಲಾವಿದರಿಂದ ಭಜನೆ ಪ್ರಸ್ತುತಗೊಳ್ಳಲಿದೆ. ಸಭಾ ಕಾರ್ಯಕ್ರಮದಲ್ಲಿ ಯಲ್ಲಾಪುರದ ಎಸಿಎಫ್ ಹಿಮವತಿ ಭಟ್ಟ, ಪತ್ರಕರ್ತ ವಿನಾಯಕ ಭಟ್ಟ ಮೂರೂರು, ಉದ್ಯಮಿ ಡಿ. ಶಂಕರ ಭಟ್ಟ, ಸಾಮಾಜಿಕ ಕಾರ್ಯಕರ್ತ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಅವರಿಗೆ ಸಂಕಲ್ಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಸಂಜೆ ೭ ಗಂಟೆಗೆ ಶಕ್ತಿ ತಂಡದ ಕಲಾವಿದರಿಂದ ದೇಶಭಕ್ತಿಯ ನೃತ್ಯರೂಪಕ ಬಿತ್ತರಗೊಳ್ಳಲಿದೆ. ೭.೩೦ಕ್ಕೆ ನಡೆಯುವ ಮಾಗಧವಧೆ ಯಕ್ಷಗಾನದ ಹಿಮ್ಮೇಳದಲ್ಲಿ ಶಂಕರ ಭಟ್ಟ ಬ್ರಹ್ಮೂರು, ನರಸಿಂಹ ಭಟ್ಟ ಹಂಡ್ರಮನೆ, ಗಣೇಶ ಗಾಂವ್ಕರ ಹಳವಳ್ಳಿ ಪಾಲ್ಗೊಳ್ಳುವರು. ಮುಮ್ಮೇಳದ ಕಲಾವಿದರಾಗಿ ಸುಬ್ರಹ್ಮಣ್ಯ ಚಿಟ್ಟಾಣಿ, ಕಾರ್ತೀಕ ಚಿಟ್ಟಾಣಿ, ಕಾರ್ತೀಕ ಕಣ್ಣಿ, ಸುಧೀರ್ ಉಪ್ಪೂರ, ಶ್ರೀಧರ ಭಟ್ಟ ಕಾಸರಕೋಡು, ನಾಗೇಂದ್ರ ಮೂರೂರು ಮತ್ತು ಅತಿಥಿ ಕಲಾವಿದರು ವಿವಿಧ ಪಾತ್ರಗಳನ್ನು ನಿರ್ವಹಿಸುವರು. ನ. ೨ರಂದು ಸಂಜೆ ೫ ಗಂಟೆಗೆ ಇಡಗುಂದಿಯ ರಾಮಲಿಂಗೇಶ್ವರ ದೇವಸ್ಥಾನದ ಭಜನಾ ಮಂಡಳಿಯ ಕಲಾವಿದರಿಂದ ಭಜನೆ. ಸಂಜೆ ೬ ಗಂಟೆಗೆ ಮುಕ್ತಾ ಶಂಕರ ಮತ್ತು ಡಿ.ಕೆ. ಗಾಂವ್ಕರ ಅವರಿಂದ ಗಮಕವಾಚನ ನಡೆಯಲಿದೆ. ಸಂಜೆ ೬.೪೫ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಡಿಸಿಎಫ್ ಹರ್ಷಭಾನು, ತಹಸೀಲ್ದಾರ್ ಯಲ್ಲಪ್ಪ ಗೋನಣ್ಣನವರ, ಮಾಜಿ ಶಾಸಕ ವಿ.ಎಸ್. ಪಾಟೀಲ, ಸಿಪಿಐ ರಮೇಶ ಹಾನಾಪುರ, ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ ನಾಯ್ಕ, ಸಾಮಾಜಿಕ ಕಾರ್ಯಕರ್ತರಾದ ಅನಂತಮೂರ್ತಿ ಹೆಗಡೆ, ಸುಬ್ಬಣ್ಣ ಬೋಳ್ಮನೆ, ದತ್ತಾತ್ರೇಯ ಭಟ್ಟ, ನಾರಾಯಣ ಭಟ್ಟ, ಮುರಳಿ ಹೆಗಡೆ, ಶೇಷಗಿರಿ ಎನ್. ಭಟ್ಟ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ, ರಂಗಕರ್ಮಿ ಆರ್.ಎನ್.ಭಟ್ಟ ಧುಂಡಿ ಪಾಲ್ಗೊಳ್ಳುವರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಶಂಕರ ಭಟ್ಟ ತಾರೀಮಕ್ಕಿ, ಶಿಕ್ಷಕ ಎಂ. ರಾಜಶೇಖರ, ವಿಶ್ವನಾಥ ಶರ್ಮ ನಾಡಗುಳಿ, ಉತ್ತಮ ಕೃಷಿಕ ಮಹೇಶ ಹೊಸಕೊಪ್ಪ ಅವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಂಜೆ ೭.೩೦ಕ್ಕೆ ನಡೆಯುವ ಜ್ವಾಲಾಪ್ರತಾಪ ಯಕ್ಷಗಾನದ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ರವೀಂದ್ರ ಭಟ್ಟ ಅಚವೆ, ಶಂಕರ ಭಾಗ್ವತ ಯಲ್ಲಾಪುರ ಮತ್ತು ವಿಘ್ನೇಶ್ವರ ಕೆಸರಕೊಪ್ಪ ಕಾರ್ಯನಿರ್ವಹಿಸುವರು. ಮುಮ್ಮೇಳದ ವಿವಿಧ ಪಾತ್ರಗಳನ್ನು ಸುಬ್ರಹ್ಮಣ್ಯ ಚಿಟ್ಟಾಣಿ, ವಿದ್ಯಾಧರ ಜಲವಳ್ಳಿ, ಸುಬ್ರಹ್ಮಣ್ಯ ಯಲಗುಪ್ಪ, ನಾಗರಾಜ ಕುಂಕಿಪಾಲ, ಸನ್ಮಯ ಭಟ್ಟ ಮಲವಳ್ಳಿ ಮತ್ತಿತರರು ನಿರ್ವಹಿಸುವರು.