ಸಾರಾಂಶ
ಮನುಷ್ಯ ತನ್ನ ಜೀವನದಲ್ಲಿ ತ್ಯಾಗ, ಕರ್ಮಯೋಗ ಎರಡನ್ನೂ ಹೊಂದಿಸಿಕೊಂಡು ಧ್ಯಾನದ ಪಥದಲ್ಲಿ ಶ್ರಮಿಸಿದಾಗ ಮಾತ್ರ ಅಧ್ಯಾತ್ಮಿಕ ಪರಮಾನಂದವನ್ನು ಹೊಂದಲು ಸಾಧ್ಯ. ಸನ್ಯಾಸ, ಕರ್ಮಯೋಗಗಳು ಒಂದಕ್ಕೊಂದು ವಿರುದ್ಧವಾಗಿರದೆ ಪರಸ್ಪರ ಸಹಕಾರಿಯಾಗಿದೆ. ರಾಗ ದ್ವೇಷಾದಿ ತ್ಯಾಗ ಮಾಡುವುದರಿಂದ ಮಾತ್ರ ನಾವು ತೃಪ್ತಿ ಹೊಂದದೆ, ನಿಷ್ಕಾಮ ಕರ್ಮಾಚರಣೆಯಿಂದ ಸಾಧನೆಗೆ ಪರಿಪೂರ್ಣತೆ ತಂದುಕೊಳ್ಳಬೇಕು
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಯಾರು ಕಾಮ, ಕ್ರೋದ ಸೇರಿದಂತೆ ಅರಿಷಡ್ವರ್ಗಗಳನ್ನು ತ್ಯಾಗ ಮಾಡುತ್ತಾರೆ. ಭಗವಂತನ ಧ್ಯಾನ ಮಾಡುತ್ತಾರೋ, ಪರಮಾತ್ಮನ ಪ್ರೇರಣೆ ಹಾಗೂ ಪ್ರೀತಿಯಿಂದ ಕರ್ಮಗಳನ್ನು ಸಮರ್ಪಿಸುವನು. ಜೀವನದಲ್ಲಿ ಶ್ರೇಯಸ್ಸು ಮತ್ತು ಸಂಸಾರ ಬಂಧನದಿಂದ ಬಿಡುಗಡೆಯಾಗಿ ಮೋಕ್ಷದ ದಾರಿಯಲ್ಲಿ ಸಾಗುತ್ತಾನೆ ಅಂಥವನನ್ನು ನಿತ್ಯ ಸನ್ಯಾಸಿ ಎಂದು ಕರೆಯುತ್ತಾರೆ. ಭಗವದ್ಗೀತೆಯ ಪಂಚಮ ಅಧ್ಯಾಯದಲ್ಲಿ ಶ್ರೀ ಕೃಷ್ಣ ನೀಡಿದ ಸಂದೇಶವೇ ಇದು ಎಂದು ಹಿರಿಯ ವಿದ್ವಾಂಸ ಡಾ. ನಾರಾಯಣಚಾರ್ಯ ಧೂಳಖೇಡ ಹೇಳಿದರು.ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಉದಯಗಿರಿಯ ಹನುಮಂತ ಪುರಾಣಿಕ್ ನಿವಾಸದಲ್ಲಿ ಜರುಗಿದ ಭಗವದ್ಗೀತಾ ಅಭಿಯಾನದ ಪಂಚಮೋಧ್ಯಾಯದ ಉಪನ್ಯಾಸದಲ್ಲಿ ಮಾತನಾಡಿದರು.
ಮನುಷ್ಯ ತನ್ನ ಜೀವನದಲ್ಲಿ ತ್ಯಾಗ, ಕರ್ಮಯೋಗ ಎರಡನ್ನೂ ಹೊಂದಿಸಿಕೊಂಡು ಧ್ಯಾನದ ಪಥದಲ್ಲಿ ಶ್ರಮಿಸಿದಾಗ ಮಾತ್ರ ಅಧ್ಯಾತ್ಮಿಕ ಪರಮಾನಂದವನ್ನು ಹೊಂದಲು ಸಾಧ್ಯ. ಸನ್ಯಾಸ, ಕರ್ಮಯೋಗಗಳು ಒಂದಕ್ಕೊಂದು ವಿರುದ್ಧವಾಗಿರದೆ ಪರಸ್ಪರ ಸಹಕಾರಿಯಾಗಿದೆ. ರಾಗ ದ್ವೇಷಾದಿ ತ್ಯಾಗ ಮಾಡುವುದರಿಂದ ಮಾತ್ರ ನಾವು ತೃಪ್ತಿ ಹೊಂದದೆ, ನಿಷ್ಕಾಮ ಕರ್ಮಾಚರಣೆಯಿಂದ ಸಾಧನೆಗೆ ಪರಿಪೂರ್ಣತೆ ತಂದುಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಡಿ.ಕೆ. ಜೋಶಿ, ಪ್ರೊ. ವಾಮನ್ ಭಾದ್ರಿ, ಸಂಜೀವ ಗೊಳಸಂಗಿ, ವಾದಿರಾಜಾಚಾರ, ಎಲ್.ವಿ. ಜೋಶಿ, ಪ್ರಮೋದ ಸಿರಗುಪ್ಪಿ, ರಮೇಶ ಅಣ್ಣಿಗೇರಿ, ಪ್ರಕಾಶ ದೇಸಾಯಿ, ಬದರಿನಾಥ ಬೆಟಗೇರಿ, ಎಂ.ಆರ್. ಕಲಕೋಟಿ, ಕೇಶವ ಕುಲಕಣಿ೯, ವಿಲಾಸ ಸಬ್ನಿಸ್, ಸಂಜೀವ ಜೋಶಿ ಸೇರಿದಂತೆ ಹಲವರಿದ್ದರು.