ಗ್ರಾಮ ಪಂಚಾಯಿತಿ ಸಿಬ್ಬಂದಿಯಿಂದ ಸಸಿ ದತ್ತು

| Published : Jun 06 2024, 12:31 AM IST

ಸಾರಾಂಶ

ಅಳ್ನಾವರ ತಾಲೂಕಿನ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ವಿಶ್ವ ಪರಿಸರ ದಿನ ಆಚರಿಸುವ ಜತೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಅಳ್ನಾವರ:

ತಾಲೂಕಿನ ವಿವಿಧ ಇಲಾಖಾ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಬುಧವಾರ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.

ತಾಲೂಕಿನ ಕಡಬಗಟ್ಟಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಪಿಡಿಒ ಆನಂದ ಪಾಟೀಲ ಚಾಲನೆ ನೀಡಿದರು. ಪಂಚಾಯಿತಿ ಆವರಣದಲ್ಲಿ ನೆಟ್ಟ ಪ್ರತಿ ಸಸಿಯನ್ನು ಒಬ್ಬೊಬ್ಬ ಸಿಬ್ಬಂದಿ ದತ್ತು ತೆಗೆದುಕೊಳ್ಳುವ ವಾಗ್ದಾನ ಮಾಡಿದರು.

ಈ ವೇಳೆ ಷಣ್ಮುಖ ಸುಳಗೆಕರ, ಶಿವಶಂಕರ ಗೇನಪ್ಪನವರ, ಎಸ್‌ಡಿಎಂಸಿ ಅಧ್ಯಕ್ಷ ಸಜ್ಜನ ಚಲವಾದಿ, ರಾಜೇಸಾಬ್‌ ಗುಳ್ಲದಕೊಪ್ಪ ಹಾಗೂ ಸಿಬ್ಬಂದಿ ಇದ್ದರು

ಅಳ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಾಲೂಕು ಪಂಚಾಯಿತಿ, ಬೆಣಚಿ, ಅರವಟಗಿ, ಹೊನ್ನಾಪೂರ ಗ್ರಾಪಂ, ಅಳ್ನಾವರದ ಅನ್ನಪೂರ್ಣ ಹಿರೇಮಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಅಳ್ನಾವರದ ಎಪಿಎಂಸಿ ಆವರಣದ ಪಕ್ಕದ ಜಾತ್ರಾ ಪಾದಗಟ್ಟೆ ಮೈದಾನದಲ್ಲಿ ಸೆಂಟ್ ತೇರೆಸಾ ಪ್ರಾಥಮಿಕ ಶಾಲೆ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಪರಿಸರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ವಲಯ ಅರಣ್ಯ ಅಧಿಕಾರಿ ಪ್ರಸನ್ನ ಸುಬೇದಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉಪವಲಯ ಅರಣ್ಯ ಅಧಿಕಾರಿ ಪ್ರಕಾಶ ಕಮ್ಮಾರ, ಸತ್ತಾರ ಬಾತಖಂಡೆ, ಶಾಲಾ ಮುಖ್ಯ ಶಿಕ್ಷಕಿ ಸಿ. ಜೀನಾ ಪಾಯ್ಸ್, ಕಿರಣ ಗಡಕರ, ನಾರಾಯಣ ಪಟೇಲ, ಪುಂಡಲೀಕ ಪಾರ್ದಿ, ಮಂಜುಳಾ ನಾಯ್ಕ, ಮುಕ್ತಾ ಕಾತರಕಿ, ಸತೀಶ ನಾಯ್ಕ ಇದ್ದರು.