ಶೃಂಗೇರಿವಿದ್ಯೆ, ವಿನಯ, ಹಣ,ಅಧಿಕಾರ ಎಲ್ಲವೂ ಸತ್ಸಂಸ್ಕಾರದಿಂದ ಸಾರ್ಥಕವಾಗುತ್ತದೆ.ಸತ್ಸಂಸ್ಕಾರ ವಿದ್ಯಾರ್ಥಿಗಳ ನಿಜವಾದ ಸಂಪತ್ತು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮಿಗಳು ಹೇಳಿದರು.
ಶೃಂಗೇರಿ ಶ್ರೀ ಭಾರತೀ ತೀರ್ಥ ಸಮುತ್ಕರ್ಷ ಕೇಂದ್ರದ ವಾರ್ಷಿಕೋತ್ಸವ
ಕನ್ನಡಪ್ರಭ ವಾರ್ತೆ, ಶೃಂಗೇರಿವಿದ್ಯೆ, ವಿನಯ, ಹಣ,ಅಧಿಕಾರ ಎಲ್ಲವೂ ಸತ್ಸಂಸ್ಕಾರದಿಂದ ಸಾರ್ಥಕವಾಗುತ್ತದೆ.ಸತ್ಸಂಸ್ಕಾರ ವಿದ್ಯಾರ್ಥಿಗಳ ನಿಜವಾದ ಸಂಪತ್ತು ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮಿಗಳು ಹೇಳಿದರು.
ಶೃಂಗೇರಿ ಶ್ರೀ ಭಾರತೀ ತೀರ್ಥ ಸಮುತ್ಕರ್ಷ ಕೇಂದ್ರದ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಸಂಸ್ಕಾರವನ್ನು ಯಾರಿಂದಲೂ ದುರುಪಯೋಗಪಡಿಸಿಕೊಳ್ಳಲು ಸಾದ್ಯವಿಲ್ಲ. ಅದ್ದರಿಂದ ವಿದ್ಯಾರ್ಥಿಗಳು ವಿದ್ಯಾವಂತ ರಾಗುವ ಜೊತೆಗೆ ಸಂಸ್ಕಾರವಂತರೂ ಕೂಡ ಆಗಬೇಕು. ಶಾಸ್ತ್ರಗಳಲ್ಲಿ ವಸ್ತುಸ್ಥಿತಿಗಳನ್ನು ಆಧರಿಸಿ ತತ್ವಗಳನ್ನು ತಿಳಿಸಲಾಗಿದೆ.ಶಾಸ್ತ್ರಗಳಲ್ಲಿ ತಿಳಿಸಿದ ಧರ್ಮ ಬದಲಾಯಿಸಲು ಸಾಧ್ಯವಿಲ್ಲ. ಏಕೆಂದರೆ ಶಾಸ್ತ್ರಗಳು ಕಪೋಲಕಲ್ಪಿತವಲ್ಲ. ಅವುಗಳು ಎಲ್ಲಾ ಕಾಲದಲ್ಲಿಯೂ ಸಲ್ಲುವ ಪರಮಾರ್ಥಿಕ ಸತ್ಯಗಳಾಗಿವೆ. ಶಾಸ್ತ್ರಗಳಲ್ಲಿ ಬೋಧಿಸಿದ ಧರ್ಮವೇ ನಿಜವಾದ ಧರ್ಮ.ಉಳಿದೆಲ್ಲವೂ ಮತಗಳು. ಆದ್ದರಿಂದ ಶಾಸ್ತ್ರವನ್ನು ಎಲ್ಲರೂ ಅಧ್ಯಯನಮಾಡಿ ಸ್ವತಃ ತಿಳಿದುಕೊಳ್ಳಬೇಕು. ಸಮಾಜದಲ್ಲಿ ಅದರ ಬೋಧನೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಭಾರತಿ ವಾರ್ಷಿಕ ಪತ್ರಿಕೆ ಬಿಡುಗಡೆಗೊಳಿಸಿದರು. ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಸಾಧನೆಗೈದ ವಿದ್ಯಾರ್ಥಿಗಳನ್ನು ಪದಕ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಐಐಎಎಮ್ ನ ನಿವೃತ್ತ ಪ್ರಾಧ್ಯಾಪಕ ಪ್ರೊಎಂ.ಬಿ.ಮಹದೇವನ್ ಮಾತನಾಡಿದರು. ಪ್ರೊ ಸುಬ್ರಾಯ್ ಭಟ್ ಸ್ವಾಗತಿಸಿದರು. ನವೀನ್ ಹೊಳ್ಳ ವಂದಿಸಿದರು.26 ಶ್ರೀ ಚಿತ್ರ 1-
ಶೃಂಗೇರಿ ಶ್ರೀ ಭಾರತೀ ತೀರ್ಥ ಸಮುತ್ಕರ್ಷ ಕೇಂದ್ರ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಆಶೀರ್ವಚನ ನೀಡಿದರು.