ಸಾವು ಗೆದ್ದ ಸಾತ್ವಿಕ್ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ

| Published : Apr 07 2024, 01:49 AM IST

ಸಾವು ಗೆದ್ದ ಸಾತ್ವಿಕ್ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಏಪ್ರಿಲ್ 3ರಂದು ಕೊಳವೆ ಬಾವಿಯಲ್ಲಿ ಸಿಲುಕಿ, ಸಾವು ಗೆದ್ದಿದ್ದ ಸಾತ್ವಿಕ್ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಸಂಪೂರ್ಣವಾಗಿ ಗುಣಮುಖನಾಗಿ ಶನಿವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಏಪ್ರಿಲ್ 3ರಂದು ಕೊಳವೆ ಬಾವಿಯಲ್ಲಿ ಸಿಲುಕಿ, ಸಾವು ಗೆದ್ದಿದ್ದ ಸಾತ್ವಿಕ್‌ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಸಂಪೂರ್ಣವಾಗಿ ಗುಣಮುಖನಾಗಿ ಶನಿವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ.48 ಗಂಟೆಗಳವರೆಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದ ವೈದ್ಯರ ತಂಡ ಸಾತ್ವಿಕ್ ಹೆಸರಿನಲ್ಲಿ ಕೇಕ್ ತಂದು ಆಸ್ಪತ್ರೆಯಲ್ಲಿ ಮಗುವಿನ ತಂದೆ-ತಾಯಿ ಜೊತೆಗೆ ಕೇಕ್ ಕತ್ತರಿಸಿ ಮಗುವಿಗೆ ತಿನ್ನಿಸಿ ಸಂಭ್ರಮಿಸಿದರು. ಜೊತೆಗೆ ಮಗುವಿಗೆ ವಿಶೇಷ ಉಡುಗೊರೆ ನೀಡಿ ಕಳುಹಿಸಿದರು.

ಮರುಜೀವ ಪಡೆದ ಸಾತ್ವಿಕ್ ಜೊತೆಗೆ ಜಿಲ್ಲಾಸ್ಪತ್ರೆಯಿಂದ ನಗು ನಗುತ್ತಲೇ ತಾಯಿ ಪೂಜಾ ಹಾಗೂ ತಂದೆ ಸತೀಶ ಮುಜಗೊಂಡ ಮನೆಗೆ ಹೋಗಿದ್ದಾರೆ. ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ್ ಹುಬ್ಬಳ್ಳಿ ಮಗುವನ್ನು ಜಿಲ್ಲಾಸ್ಪತ್ರೆಯಿಂದ ಬೀಳ್ಕೊಟ್ಟಿದ್ದಾರೆ.

ಜಿಲ್ಲಾಸ್ಪತ್ರೆ ವೈದ್ಯರು ಶನಿವಾರ ನಡೆಸಿದ್ದ ಬ್ಯಾಕ್ ಬೋನ್ ಸ್ಕ್ರೀನಿಂಗ್ ವರದಿಯು ನಾರ್ಮಲ್ ಎಂದು ವರದಿ ಬಂದ ಹಿನ್ನೆಲೆ, ಡಿಸ್ಚಾರ್ಜ್ ಮಾಡಿ ಕಳುಹಿಸಿಕೊಡಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಸಹಕರಿಸಿದ ಎಲ್ಲರಿಗೂ, ವೈದ್ಯರಿಗೂ ಸಾತ್ವಿಕ್‌ ಪೋಷಕರು ಧನ್ಯವಾದ ಅರ್ಪಿಸಿದರು.