ಸತ್ಯ, ಶುದ್ಧ ಕಾಯಕದಿಂದ ಅಂತರಂಗದಲ್ಲಿ ಪರಮಾತ್ಮ

| Published : May 15 2024, 01:38 AM IST

ಸಾರಾಂಶ

12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಕಲ್ಯಾಣದಲ್ಲಿ ಸರ್ವರಿಗೂ ಭಕ್ತಿಯ ಬೀಜವನ್ನು ಬಿತ್ತಿದರು. ಜ್ಞಾನದ ಮರವಾಗಿ ಬೆಳೆದು ಬಸವಾದಿ ಶಿವಶರಣರು ವಿಶ್ವಕ್ಕೆ ಬೆಳಕಾದರು ಎಂದು ಯಮಕನಮರಡಿ ಬಸವೇಶ್ವರ ಶೂನ್ಯ ಸಂಪಾದನ ಮಠದ ಸಿದ್ದಬಸವ ದೇವರು ನುಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಕಲ್ಯಾಣದಲ್ಲಿ ಸರ್ವರಿಗೂ ಭಕ್ತಿಯ ಬೀಜವನ್ನು ಬಿತ್ತಿದರು. ಜ್ಞಾನದ ಮರವಾಗಿ ಬೆಳೆದು ಬಸವಾದಿ ಶಿವಶರಣರು ವಿಶ್ವಕ್ಕೆ ಬೆಳಕಾದರು ಎಂದು ಯಮಕನಮರಡಿ ಬಸವೇಶ್ವರ ಶೂನ್ಯ ಸಂಪಾದನ ಮಠದ ಸಿದ್ದಬಸವ ದೇವರು ನುಡಿದರು.

ಬೆನಾಡಿ ಬಸವ ಮಂಟಪ ಸೇವಾ ಬಳಗ ಧುಳಗನವಾಡಿ ಶರಣ ಸತ್ಸಂಗ ಕಲಾಸೇವಾ ಮಂಡಳ ಸಹಯೋಗದಲ್ಲಿ ಭಾನುವಾರ ವೀರೇಶ್ವರ ಮಹಾಸ್ವಾಮಿಗಳು ಮಡಿವಾಳೇಶ್ವರ ಮಠ ದೇಗುಣಹಳ್ಳಿ ಅಂಬರಗಟ್ಟಿ ಸಾನ್ನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮೂವತೈದನೇಯ ಶರಣ ಮೇಳದಲ್ಲಿ ಪಂಚಮಹಾ ಪಾತಕವಂಜುವುದು ಕೂಡಲ ಸಂಗನ ನಾಮಕಯ್ಯ ವಿಷಯದ ಮೇಲೆ ಮಾತನಾಡಿದ ಅವರು, ಸತ್ಯ, ಶುದ್ಧ ಕಾಯಕ ಮಾಡಿ ಭಕ್ತಿ ಸೇವೆ ಮಾಡಿದರೇ ಪರಮಾತ್ಮನು ಅಂತರಂಗದಲ್ಲಿ ವಾಸವಾಗುತ್ತಾನೆ ಎಂದು ತಿಳಿಸಿದರು.ಬಾವನಸೌಂದತ್ತಿಯ ಓಂಕಾರ ಆಶ್ರಮದ ಮಾತೋಶ್ರೀ ಬ್ರಹ್ಮರಾಂಬಿಕಾದೇವಿ ಮಾತನಾಡಿ, ಭವ ಬಂಧನ ದೂರಮಾಡಲು ಚಿಂತನೆ ಧ್ಯಾನ ಸ್ಮರಣೆ ಮಾಡಿ ನಮ್ಮ ಮನಸ್ಸು ಎಕಾಗ್ರತೆ ಲಿಂಗದಲ್ಲಿ ತನ್ಮಯವಾಗದೇ ಪರಮಾನಂದ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.ಯಕ್ಸಂಬಾದ ಶಿವಯೋಗಿ ಮಠದ ಮಹಾಲಿಂಗ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡದರು. ಮಾತೋಶ್ರಿ ಸಾವಿತ್ರಿ ವಿಜಯನಗರೆ, ನರಸಿಂಗೇಶ್ವರ ಶರಣರು ಉಪಸ್ಥಿತರಿದ್ದರು. ಸಂಘಟಕರಾದ ಅಶೋಕ ಕ್ಷೀರಸಾಗರ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ರಂಗದರ್ಶನ ಕಲಾತಂಡದವರು ಭಜನಾ ಸೇವೆ ನಡೆಸಿಕೊಟ್ಟರು. ರಮೇಶ ಕ್ಷೀರಸಾಗರ ನಿರೂಪಿಸಿದರು.ಎ.ಜಿ.ಕೊಟಗೆ ಸ್ವಾಗತಿಸಿ, ವಂದಿಸಿದರು.