ಲೋಕ್‌ ಅದಾಲತ್‌ ಬಳಸಿ ಖರ್ಚು , ಸಮಯ ಉಳಿಸಿ

| Published : Jul 06 2025, 01:48 AM IST

ಸಾರಾಂಶ

ಲೋಕ್‌ ಅದಾಲತ್ ಕಾರ್ಯಕ್ರಮಗಳ ಸದುಪಯೋಗ ಪಡೆದು, ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಪರಸ್ಪರ ರಾಜಿನಂಧಾನಗಳ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಇದರಿಂದ ಕಕ್ಷಿದಾರರು ಅನಗತ್ಯವಾಗಿ ನ್ಯಾಯಾಲಯಗಳಿಗೆ ದೀರ್ಘ ಕಾಲ ಅಲೆದಾಡುವುದನ್ನು ಹಾಗೂ ಖರ್ಚು ವೆಚ್ಚಗಳನ್ನು ತಪ್ಪಿಸಬಹುದು. ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುವುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ್ ಹೇಳಿದ್ದಾರೆ.

- ಹೊನ್ನಾಳಿ ಕೋರ್ಟ್‌ನಲ್ಲಿ ಪೂರ್ವಭಾವಿ ಸಭೆಯಲ್ಲಿ ನ್ಯಾ. ಮಹಾವೀರ ಕರೆಣ್ಣವರ್‌

- - -

ಕನ್ನಡ ಪ್ರಭ ವಾರ್ತೆ ಹೊನ್ನಾಳಿ

ಲೋಕ್‌ ಅದಾಲತ್ ಕಾರ್ಯಕ್ರಮಗಳ ಸದುಪಯೋಗ ಪಡೆದು, ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಪರಸ್ಪರ ರಾಜಿನಂಧಾನಗಳ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಇದರಿಂದ ಕಕ್ಷಿದಾರರು ಅನಗತ್ಯವಾಗಿ ನ್ಯಾಯಾಲಯಗಳಿಗೆ ದೀರ್ಘ ಕಾಲ ಅಲೆದಾಡುವುದನ್ನು ಹಾಗೂ ಖರ್ಚು ವೆಚ್ಚಗಳನ್ನು ತಪ್ಪಿಸಬಹುದು. ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುವುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ್ ಹೇಳಿದರು.

ಜು.12ರಂದು ರಾಷ್ಟ್ರೀಯ ಲೋಕ್‌ ಆದಾಲತ್ ಅಂಗವಾಗಿ ಪಟ್ಟಣದ ನ್ಯಾಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಲೋಕ್‌ ಅದಾಲತ್ ಕಾರ್ಯಕ್ರಮಗಳು ಸಂಪೂರ್ಣ ಯಶಸ್ವಿ ಆಗಬೇಕೆಂದರೆ ವಕೀಲರು ಹಾಗೂ ಪೊಲೀಸ್ ಅಧಿಕಾರಿಗಳ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ನ್ಯಾಯಾದಾನವೂ ವಿಳಂಬವಾಗುತ್ತಿದೆ. ಇದರಿಂದ ಸಮಾಜದಲ್ಲಿ ಕೂಡ ಊರು, ಗ್ರಾಮಗಳಲ್ಲಿ ಪ್ರೀತಿ, ವಿಶ್ವಾಸ, ಶಾಂತಿ ನೆಮ್ಮದಿಯ ಜೀವನಕ್ಕೆ ಸಾಕಷ್ಟು ಅಡತೆಡೆಯಾಗುವ ಸಂದರ್ಭಗಳು ಇರುತ್ತವೆ. ಈ ಹಿನ್ನೆಲೆ ವರ್ಷದಲ್ಲಿ 4 ಬಾರಿ ಲೋಕ್‌ ಆದಾಲತ್ ನಡೆಸಲು ಉದ್ದೇಶಿಸಲಾಗಿದೆ ಎಂದರು.

ಜಿಲ್ಲಾ ಕೌಟಂಬಿಕ ನ್ಯಾಯಾಲಯದ ನ್ಯಾಯಧೀಶ ಶಿವಪ್ಪ ಗಂಗಪ್ಪ ಸಲಗರೆ, ವಕೀಲರ ಸಂಘದ ಅಧ್ಯಕ್ಷ ಕೆ.ಪಿ.ಜಯಪ್ಪ ಮಾತನಾಡಿದರು.

ಹೊನ್ನಾಳಿ, ಹರಿಹರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪದ್ಮಶ್ರೀಮುನೋಳಿ, ಹೊನ್ನಾಳಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಚ್.ದೇವದಾಸ್, ಹೆಚ್ಚುವರಿ ನ್ಯಾಯಾಧೀಶ ಪುಣ್ಯಕೋಟಿ, ಸಹಾಯಕ ಸರ್ಕಾರಿ ಅಭಿಯೋಜಕರಾದ ಭರತ್ ಭೀಮಯ್ಯ, ಸ್ವಪ್ನ, ನ್ಯಾಮತಿ ಸಿಪಿಐ ರವಿ, ಹೊನ್ನಾಳಿ ಪಿ.ಎಸ್.ಐ ಕುಮಾರ್ ತಾಪಂ ಇಒ ಪ್ರಕಾಶ್, ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು, ಸಹಕಾರ ಸಂಘ ಸಂಸ್ಥೆಗಳ ಅಧಿಕಾರಿಗಳು, ಕಕ್ಷಿದಾರರು ಇದ್ದರು.

ಪೂರ್ವಭಾವಿ ಸಭೆ ನಂತರ ನ್ಯಾಯಾಧೀಶರು ಕೆಲಕಾಲ ಪೊಲೀಸ್, ಸರ್ಕಾರಿ ಅಧಿಕಾರಿಗಳ ಸಭೆ ನಡೆಸಿದರು.

- - -

-3ಎಚ್.ಎಲ್.ಐ1: