ಆರ್ಥಿಕ ಸ್ವಾವಲಂಬಿಯಾಗಲು ಉಳಿತಾಯ ಮಾಡಿ

| Published : Aug 08 2025, 02:00 AM IST

ಸಾರಾಂಶ

ಹೆಣ್ಣು ಮಕ್ಕಳು ಉಳಿಸುವ ಹಣದಿಂದ ಮದುವೆಗೆ, ಮಕ್ಕಳ ಶಿಕ್ಷಣಕ್ಕೆ ಅಥವಾ ಮನೆಯನ್ನು ಮುನ್ನಡೆಸಲು ತುಂಬಾ ಸಹಕಾರಿ ಆಗುತ್ತದೆ. ಉಳಿತಾಯದ ಬಗ್ಗೆ ಅರಿವು ಹೊಂದಿದವರು ಜೀವನದಲ್ಲಿ ಆರ್ಥಿಕವಾಗಿ ಸ್ವಾವಲಂಬಿಯಾಗಬಹುದು ಎಂದು ಚಿತ್ರ ನಟಿ ಶೃತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಹೆಣ್ಣು ಮಕ್ಕಳು ಉಳಿಸುವ ಹಣದಿಂದ ಮದುವೆಗೆ, ಮಕ್ಕಳ ಶಿಕ್ಷಣಕ್ಕೆ ಅಥವಾ ಮನೆಯನ್ನು ಮುನ್ನಡೆಸಲು ತುಂಬಾ ಸಹಕಾರಿ ಆಗುತ್ತದೆ. ಉಳಿತಾಯದ ಬಗ್ಗೆ ಅರಿವು ಹೊಂದಿದವರು ಜೀವನದಲ್ಲಿ ಆರ್ಥಿಕವಾಗಿ ಸ್ವಾವಲಂಬಿಯಾಗಬಹುದು ಎಂದು ಚಿತ್ರ ನಟಿ ಶೃತಿ ಹೇಳಿದರು.

ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ ಹತ್ತಿರ ನೂತನ ಸುಶೀಲವರ್ದಿನಿ ಮಹಿಳಾ ಕೋ- ಆಫ್‌ರೇಟಿವ್ ಸೊಸೈಟಿ ಉದ್ಘಾಟಸಿ ಮಾತನಾಡಿದ ಅವರು, ಇಂದಿನ ಈ ಸೊಸೈಟಿಯು ಮಹಿಳೆಯರ ಸಬಲೀಕರಣ ಮತ್ತು ಅಭ್ಯುದಯಕ್ಕೆ ಕಾರಣವಾಗುತ್ತದೆ. ಈ ಕನಸು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರದಾಗಿತ್ತು. ಎಲ್ಲ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಪ್ರತಿಯೊಬ್ಬ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳನ್ನು ತಗೆದು ಹಣವನ್ನು ಉಳಿಸಬೇಕು. ಹಾಗೆ ಉಳಿಸಿದ ಹಣ ನಿಮ್ಮ ಇಡೀ ಕುಟುಂಬವನ್ನೇ ಸಲಹುತ್ತದೆ ಎಂದು ಹೇಳಿದರು.

ಬ್ಯಾಂಕ್ ಅನ್ನುವುದು ನಂಬಿಕೆಯ ಸಂಕೇತ. ಅಂತಹ ನಂಬಿಕೆ ಬೆಳ್ಳುಬ್ಬಿ ಪರಿವಾರದವ್ರು ಉಳಿಸಿಕೊಂಡು ಮುನ್ನೆಡೆಯುತ್ತಿದ್ದಾರೆ. ನೀವಿನ್ನು ಈ ಬ್ಯಾಂಕಿನ ಸದುಪಯೋಗ ಪಡೆದುಕೊಂಡು ಸಣ್ಣ ಸಣ್ಣ ಕೈಗಾರಿಕೆ ಅಥವಾ ಉದ್ಯಮಗಳ ಮೂಲಕ ಆರ್ಥಿಕವಾಗಿ ಸ್ವಾವಲಂಬನೆ ಪಡೆಯಬೇಕು ಎಂದು ಹೇಳಿದರು.

ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಗೌರವಿಸುವುದು, ಸನ್ಮಾನಿಸುವುದು ಸಮಾಜದ ಕರ್ತವ್ಯ ಎಂದು ತಿಳಿಸಿದರು.

ಜ್ಯೋತಿ ಬೆಳಗಿಸಿ ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿ ಮಾತನಾಡಿ, ಇಂದು ಕೊಲ್ಹಾರದಲ್ಲಿ ಮಹತ್ತರ ಹೆಜ್ಜೆ ಇಡುವತ್ತ ನೀವೆಲ್ಲರೂ ಸೇರಿದ್ದೀರಿ. ಒಬ್ಬ ಮಹಿಳೆ ಆರ್ಥಿಕವಾಗಿ ಸಬಲಳಾದರೇ ಇಡೀ ಜಗ್ಗತ್ತೆ ಅಭಿವೃದ್ಧಿ ಆದಂತೆ. ಈ ಸುಶೀಲವರ್ದಿನಿ ಮಹಿಳಾ ಕೋ- ಆಪರೇಟಿವ್ ಸೊಸೈಟಿ ಕರ್ನಾಟಕದ ತುಂಬ ತನ್ನ ಶಾಖೆಗಳನ್ನು ತೆರೆಯುವಂತಾಗಲಿ ಎಂದು ಹಾರೈಸಿದರು.

ವಯನಾಡು ಓವರಸಿಸ್ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ವಿಜಯಲಕ್ಷ್ಮಿ ವಿಜಯ್ ರೆಡ್ಡಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ ಮಾಡುವ ಉದ್ದೇಶದಿಂದೆ ಈ ಸೊಸೈಟಿ ಉಪಯೋಗ ಪಡೆದು ಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಾನ್ನಿಧ್ಯ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತ ಮಠದ ಕೖಲಾಸನಾಥ ಸ್ವಾಮೀಜಿಗಳು, ಸಿ.ಎಂ ಗಣಕುಮಾರ, ಸಂಗಪ್ಪ ಬಾಟಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಗುರಲಿಂಗಪ್ಪ ಅಂಗಡಿ, ಶಾಂತಗೌಡ ಪಾಟೀಲ್, ಸೊಸೈಟಿ ಅಧ್ಯಕ್ಷರಾದ ಸವಿತಾ ಬೆಳ್ಳುಬ್ಬಿ, ವೈದ್ಯಾಧಿಕಾರಿ ಲಕ್ಷ್ಮೀ ತೆಲ್ಲೂರ, ರಾಜಶೇಖರ ಶೀಲವಂತ, ಉಮಾ ಲಿಂಬಿಕಾಯಿ, ಚಿನ್ನಪ್ಪ ಗಿಡ್ಡಪ್ಪಗೋಳ, ಬಾಬು ಬಜಂತ್ರಿ, ಅಪ್ಪಾಸಿ ಮಟ್ಯಾಳ, ಶ್ರೀಶೈಲ ಅಥಣಿ, ಗುರು ಚಲವಾದಿ, ಕಲ್ಲಪ್ಪ ಸೊನ್ನದ, ಇಸ್ಮಾಯಿಲ್ ತಹಸೀಲ್ದಾರ್, ಪಿ.ಕೆ. ಗಿರಗಾಂವಿ ಹಾಗೂ ಇನ್ನಿತರರು ಇದ್ದರು.

ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ ಹತ್ತಿರ ನೂತನ ಸುಶೀಲವರ್ದಿನಿ ಮಹಿಳಾ ಕೋ- ಆಪರೇಟಿವ್ ಸೊಸೈಟಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಟ್ಟಣಕ್ಕೆ ಹಿಂದೂ ರುದ್ರ ಭೂಮಿ ಹಾಗೂ ಮುಸ್ಲಿಂ ಸ್ಮಶಾನಕ್ಕೆ, ರಾಣಿ ಚನ್ನಮ್ಮ ವಸತಿ ಶಾಲೆಗೆ ಭೂಮಿ ನೀಡಿದ ಮಹನೀಯರು, ನಿವೃತ್ತ ಸೈನಿಕರು, ನಿವೃತ್ತ ಶಿಕ್ಷಕ ಹಾಗೂ ಪ್ರಾಮಾಣಿಕವಾಗಿ ಸೇವೆಗೈದವರನ್ನು ಸನ್ಮಾನಿಸಿದರು. ಕವಿತಾ ಮುದಕವಿ, ರವಿ ಬಾಟಿ ಕಾರ್ಯಕ್ರಮ ನಿರೂಪಿಸಿದರು, ವಂದಿಸಿದರು.