ಸಾರಾಂಶ
ಅನೇಕ ಕಹಿ ಘಟನೆಗಳನ್ನು ಸ್ವೀಕರಿಸಿ ಶಿಕ್ಷಕ ವೃತ್ತಿಯೊಂದಿಗೆ ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ, ಕೇಶ ಮಂಡನೆ ವಿರುದ್ಧ ಹೋರಾಟ ಮಾಡಿದ ಕೀರ್ತಿ
ಹಿರೇಕೆರೂರು: ಸ್ತ್ರೀಯರು ಕೂಡಾ ಪುರುಷರಂತೆ ಶಿಕ್ಷಣ ಪಡೆಯಬೇಕೆಂಬ ಮಹದಾಸೆ ಹೊಂದಿ, ಕಷ್ಟ ಕಾರ್ಪಣ್ಯ ಲೆಕ್ಕಿಸದೇ ಸ್ತ್ರೀ ಕುಲದ ಶೈಕ್ಷಣಿಕ ಉನ್ನತಿಗೆ ದಾರಿ ತೋರಿದ ಮಹಾಮಾತೆ ಸಾವಿತ್ರಿಬಾಯಿ ಪುಲೆ ಎಂದು ಪ್ರಾಚಾರ್ಯ ಡಾ. ಎಸ್.ಬಿ. ಚನ್ನಗೌಡ್ರ ಹೇಳಿದರು.
ಪಟ್ಟಣದ ಬಿ.ಆರ್.ತಂಬಾಕದ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಸಾವಿತ್ರಿಬಾಯಿ ಪುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಕೇವಲ ೮ ವರ್ಷಕ್ಕೆ ಜ್ಯೋತಿ ಬಾ ಪುಲೆಯವರನ್ನು ಮದುವೆಯಾಗಿ ಅವರನ್ನೇ ತಮ್ಮ ಗುರುವಾಗಿ ಸ್ವೀಕರಿಸಿ ಅವರಿಂದ ಶಿಕ್ಷಣ ಪಡೆದು ಶಿಕ್ಷಕಿಯ ತರಬೇತಿ ಪಡೆದು ಶಿಕ್ಷಕಿಯಾಗಿ ಹೊರಹೊಮ್ಮಿದ ಅವರು, ಆ ಕಾಲದಲ್ಲಿ ಸ್ತ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂದು ಅನೇಕ ಕಹಿ ಘಟನೆಗಳನ್ನು ಸ್ವೀಕರಿಸಿ ಶಿಕ್ಷಕ ವೃತ್ತಿಯೊಂದಿಗೆ ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ, ಕೇಶ ಮಂಡನೆ ವಿರುದ್ಧ ಹೋರಾಟ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಉಪನ್ಯಾಸಕರಾದ ಎಸ್.ಎಸ್. ಹುಲ್ಲಿನಕೊಪ್ಪ ಚಂದ್ರಗೌಡ. ಆರ್, ಕವಿತಾ ಅಣಜಿ, ಅಶೋಕ ಬಡಿಗೇರ, ಎಸ್.ಎಸ್. ಸಂಕದಳ, ಸಾವಿತ್ರಮ್ಮ.ಬಿ, ತ್ರಿವೇಣಿ ಕೋರಿ, ಶೃಂಗಾ. ಎನ್.ಕೆ, ಲಿಂಗರಾಜ ಹಲವಾಲ, ಬಿ.ಎಸ್. ನಾಯ್ಕರ, ಮಂಜುನಾಥ ಅಡಗತ್ತಿ, ನವೀನ ಯಲಿಗಾರ ಇದ್ದರು.