ಚಿಕಿತ್ಸೆ ಮೂಲಕ ಸ್ಕಿಜೋಫ್ರೀನಿಯಾ ರೋಗ ವಾಸಿ ಮಾಡಲು ಸಾಧ್ಯ

| Published : May 28 2024, 01:06 AM IST

ಚಿಕಿತ್ಸೆ ಮೂಲಕ ಸ್ಕಿಜೋಫ್ರೀನಿಯಾ ರೋಗ ವಾಸಿ ಮಾಡಲು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ರೋಗಿಯನ್ನು ಆಸ್ಪತ್ರೆಗೆ ಸೇರಿಸದೇ ಮನೆಯಲ್ಲಿಯೇ ಪರಿಣಾಮಕಾರಿ ಹಾಗೂ ಸರಳ ಔಷಧಿಗಳ ಆವಿಷ್ಕಾರದಿಂದ ಸ್ಕಿಜೋಫ್ರೀನಿಯಾ ರೋಗ ಗುಣಪಡಿಸಬಹುದಾಗಿದೆ ಎಂದು ಮನೋರೋಗ ತಜ್ಞರಾದ ಡಾ.ರವಿ ಸಿ.ಎ. ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರೋಗಿಯನ್ನು ಆಸ್ಪತ್ರೆಗೆ ಸೇರಿಸದೇ ಮನೆಯಲ್ಲಿಯೇ ಪರಿಣಾಮಕಾರಿ ಹಾಗೂ ಸರಳ ಔಷಧಿಗಳ ಆವಿಷ್ಕಾರದಿಂದ ಸ್ಕಿಜೋಫ್ರೀನಿಯಾ ರೋಗ ಗುಣಪಡಿಸಬಹುದಾಗಿದೆ ಎಂದು ಮನೋರೋಗ ತಜ್ಞರಾದ ಡಾ.ರವಿ ಸಿ.ಎ. ಹೇಳಿದರು.

ನವನಗರದ ಜಿಲ್ಲಾ ಕಾರಗೃಹದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್, ಅಬಕಾರಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಶಿಕ್ಷಣ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ ಕಾರ್ಯಕ್ರಮದ ಉಪನ್ಯಾಸನ ನೀಡಿ ಮಾತನಾಡಿದರು.

ಸ್ಕಿಜೋಫ್ರೀನಿಯಾ ಒಂದು ಮಾನಸಿಕ ಕಾಯಿಲೆ. ಈ ಕಾಯಿಲೆ ಬಂದಿರುವುದೇ ಗೊತ್ತಾಗುವದಿಲ್ಲ. ಈ ಕಾಯಲೆ ಕಣ್ಣಿಗೆ ಕಾಣುವುದಿಲ್ಲ. ಇದು ಟಿಬಿ, ಜ್ವರ, ಮಲೇರಿಯಾ, ಚಿಕೂನ್‌ ಗುನ್ಯಾ, ಡೆಂಘೀ ಸೇರಿದಂತೆ ಇತರೆ ಕಾಯಿಲೆಗಳು ಬಂದಾಗ ಗೊತ್ತಾಗುತ್ತದೆ. ವ್ಯಕ್ತಿಯ ನಡವಳಿಕೆ ಮೇಲೆ ಕಾಯಿಲೆಯನ್ನು ಗುರುತಿಸಬಹುದಾಗಿದೆ. ಮೆದುಳಿಗೆ ಸಂಬಂಧಿಸಿದ ಕಾಯಿಲೆ ಇದಾಗಿದ್ದು, ಮಾನಸಿಕ ಅಸಮತೋಲದದಿಂದ ಇಂತಹ ಕಾಯಿಲೆಗಳು ಬರುತ್ತವೆ ಎಂದು ಮಾಹಿತಿ ನೀಡಿದರು.

ವಿಶ್ವದಲ್ಲಿ 600 ಸಾವಿರ ಕೋಟಿ ಜನಸಂಖ್ಯೆಯಲ್ಲಿ 24 ಕೋಟಿ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ 0.4 ಕೋಟಿಯಷ್ಟು ಸ್ಕಿಜೋಫ್ರೀನಿಯಾ ರೋಗಿಗಳಿದ್ದಾರೆ. ಈ ರೋಗಕ್ಕೆ ತುತ್ತಾದರೆ ವಾಸಿಯಾಗುವುದಿಲ್ಲವೆಂಬ ತಪ್ಪು ತಿಳಿವಳಿಕೆ ಜನರಲ್ಲಿದೆ. ಇದನ್ನು ಹೋಗಲಾಡಿಸುವ ಉದ್ದೇಶದಿಂದ ವಿಶ್ವ ಸ್ಕಿಜೋಫ್ರೀನಿಯಾ ದಿನಆಚರಿಸಲಾಗುತ್ತಿದೆ. ಜನಜಾಗೃತಿ, ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕುಷ್ಟರೋಗ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಎಸ್.ಸಿ. ಪಾಟೀಲ ಮಾತನಾಡಿ, ನಮ್ಮ ಪಂಚ್ರೇಂದ್ರೀಗಳ ಹಾಗೂ ಮೆದುಳಿನ ನಡುವಿನ ವ್ಯತ್ಯಾಸದಿಂದ ಜನರು ಇಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಒಂದು ವಾರ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಮಾನಸಿಕ ಕಾಯಿಲೆ ಬಗ್ಗೆ ಟೆಲಿ ಮನಸ್ಗೆ (14416ಗೆ) ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕ ಶರಣ ಬಸಪ್ಪ ಮಾತನಾಡಿ, ಒತ್ತಡಕ್ಕೆ ಒಳಗಾಗುವರು ಈ ರೋಗಕ್ಕೆ ತುತ್ತಾಗುತ್ತಿದ್ದು, ಇದರಿಂದ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೈದಿಗಳಲ್ಲಿ ಹಚ್ಚಾಗಿ ಇಂತಹ ಸ್ಥಿತಿ ಕಾಣಬಹದು. ಈ ವ್ಯಕ್ತಿಗಳಿಂದ ಇತರ ವ್ಯಕ್ತಿಗಳಿಗೆ ತೊಂದರೆಯಾಗುವ ಸಂಭವವಿದ್ದು, ಅಂತವರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕಿದೆ. ಇಂತಹ ಕಾರ್ಯಕ್ರಮಗಳು ಜೈಲಿನಲ್ಲಿರುವ ಕೈದಿಗಳಿಗೆ ಅನುಕೂಲವಾಗಲಿದೆ. ಇಂತಹ ಕಾರ್ಯಕ್ರಮಗಳನ್ನು ಕಾರಾಗೃಹದಲ್ಲಿ ಹಮ್ಮಿಕೊಳ್ಳಲು ಸಲಹೆ ನೀಡಿದರು.

ಅಬಕಾರಿ ಸೂಪರಿಟೆಂಡೆಂಟ್ ಕಾಂತೇಶ ಕಮತರ, ಶಿಕ್ಷಣ ಅಧಿಕಾರಿ ಆರ್.ಆರ್. ಪಾಟೀಲ, ವೈದ್ಯಾಧಿಕಾರಿ ಡಾ.ಆನಂದ ಕುಚನೂರ, ಜೈಲರ್ ಎಸ್.ಡಿ. ಸುಣಗದ, ಶುಶ್ರೂಷಣಾಧಿಕಾರಿ ಎ.ಎಂ. ಭದ್ರಣ್ಣವರ, ಗೌರಿಗಣೇಶ ಸಂಸ್ಕೃತಿ ಸಂಘದ ಪವಿತ್ರಾ ಜಕ್ಕಣ್ಣವರ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

----------------