ಸುರಪುರದಲ್ಲಿ ಶಾಲಾ ದಾಖಲಾತಿ ಆಂದೋಲನ

| Published : Jun 14 2024, 01:10 AM IST

ಸಾರಾಂಶ

ಸುರಪುರ ನಗರದ ವಿವಿಧ ವಾರ್ಡ್ ಗಳಲ್ಲಿ ಸರಕಾರಿ ಕನ್ಯಾ ಮಾದರಿ ಪ್ರಾಥಮಿಕ ಶಾಲೆಯಿಂದ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಆಂದೋಲನ ನಡೆಯಿತು.

ಕನ್ನಡಪ್ರಭ ವಾರ್ತೆ ಸುರಪುರ

ನಗರದ ಸರಕಾರಿ ಕನ್ಯಾ ಮಾದರಿ ಪ್ರಾಥಮಿಕ ಶಾಲೆ ದರ್ಬಾರ್‌ ವತಿಯಿಂದ ಗುರುವಾರ ಪ್ರಸಕ್ತ ಸಾಲಿನ ದಾಖಲಾತಿ ಆಂದೋಲನ ವಿವಿಧ ವಾರ್ಡ್ ಗಳಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಶಿಕ್ಷಕ ಸೋಮರೆಡ್ಡಿ ಮಂಗಿಹಾಳ, ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಸಕಲ ಸೌಲಭ್ಯಗಳಿವೆ. ಮಕ್ಕಳಿಗೆ ಕಲಿಕಾ ವಾತಾವರಣವನ್ನು ನಿರ್ಮಿಸಲಾಗಿದೆ. ಖಾಸಗಿ ಶಾಲೆಗಳಿಗೆ ಯಾವುದರಲ್ಲೂ ಕಿಂಚಿತ್ತು ಕಡಿಮೆಯಾಗದ ರೀತಿಯಲ್ಲಿ ಬೋಧಿಸಲು ಶಿಕ್ಷಕರು ಸಿದ್ಧರಿದ್ದಾರೆ ಎಂದರು.

ಮಕ್ಕಳ ಕಲಿಕೆಯನ್ನು ಪೋಷಕರು ಬಂದು ಪರಿಶೀಲಿಸಬಹುದು. ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಪುಸ್ತಕ, ಬ್ಯಾಗ್, ಶೂ, ಸಾಕ್ಸ್, ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತದೆ. ಆದ್ದರಿಂದ ಪೋಷಕರು ತಪ್ಪದೇ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಂತೆ ಮನೆಮನೆಗೆ ಭೇಟಿ ಮಾಡಿ ಮಾಡಲಾಗಿದೆ. ಸರಕಾರದ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಶಿಕ್ಷಣ ಪಡೆದು ಉತ್ತಮ ಜೀವನ ಕಂಡುಕೊಳ್ಳಬಹುದು ಎಂದು ಹೇಳಿದರು.

ಶಿಕ್ಷಕರಾದ ಶ್ರೀಶೈಲ ಯಂಕಂಚಿ, ಶರಣಯ್ಯ, ಗೌರಮ್ಮ, ಜೋಗಪ್ಪ, ಸರಸ್ವತಿ ಕಲ್ಲೂರಮಠ ಮೇಘಾ, ಅತಿಥಿ ಶಿಕ್ಷಕರಾದ ವೆಂಕಟೇಶ ನಾಯಕ, ವೆಂಕಟೇಶ ಚಿದಳ್ಳಿ, ಕೃಷ್ಣಕಾಂತ ಸೇರಿದಂತೆ ಇತರರಿದ್ದರು.