ಕಡೂರುಮಂದಿರ ಮಸೀದಿಗಳು ಶಾಂತಿ ನೆಮ್ಮದಿ ಕೇಂದ್ರಗಳಾದರೆ, ಶಾಲೆಗಳು ಜ್ಞಾನ ದಾಸೋಹ ನೀಡುವ ಮೂಲಕ ನಮ್ಮ ಬದುಕು ರೂಪಿಸುತ್ತವೆ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು.
- ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಮಂದಿರ ಮಸೀದಿಗಳು ಶಾಂತಿ ನೆಮ್ಮದಿ ಕೇಂದ್ರಗಳಾದರೆ, ಶಾಲೆಗಳು ಜ್ಞಾನ ದಾಸೋಹ ನೀಡುವ ಮೂಲಕ ನಮ್ಮ ಬದುಕು ರೂಪಿಸುತ್ತವೆ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು.
ತಾಲೂಕಿನ ಸಖರಾಯಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ನಮ್ಮ ಸರ್ಕಾರದ ಮೊದಲ ಆದ್ಯತೆ ಶಿಕ್ಷಣ. ಜತೆಗೆ ಆರೋಗ್ಯ ಮತ್ತು ಅಭಿವೃದ್ಧಿಗೂ ಪ್ರಾಧಾನ್ಯತೆ ನೀಡಿದೆ. ಇತ್ತೀಚೆಗೆ ಸರ್ಕಾರಿ ಶಾಲೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳಿಗೆ ಮೂಲ ಸೌಕರ್ಯ ಗಳನ್ನು ಕೊಡಲು ನಮ್ಮ ಸರಕಾರ ಸಿದ್ಧವಿದೆ. ನಮ್ಮ ದೇಶ ಜಾತ್ಯಾತೀತ ವಾಗಿದ್ದು, ನಾವೆಲ್ಲರೂ ಭಾರತೀಯರೆಂಬ ಹೆಮ್ಮೆ ಇರಬೇಕು. ನಮ್ಮ ಮಾತೃ ಭಾಷೆ ನಮ್ಮ ಉಸಿರಾಗಿದ್ದು ಜೀವನಕ್ಕಾಗಿ ಇಂಗ್ಲೀಷ್ ಭಾಷೆ. ಬೇರೆ ಭಾಷೆಗಳಿಗೆ ಗೌರವ ಕೊಡ ಬೇಕು. ನಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ಸಖರಾಯಪಟ್ಟಣ ಮತ್ತು ಲಕ್ಯಾ ರಸ್ತೆ ಡಾಂಬರೀಕರಣಕ್ಕೆ 30 ಕೋಟಿ ಮೀಸಲಿಟ್ಟಿದೆ ಎಂದರು.ಅಲ್ಲದೆ ಚಿಕ್ಕಮಗಳೂರು ನಗರದಲ್ಲಿ ಉರ್ದು ಅಕಾಡೆಮಿ ಸ್ಥಾಪಿಸಲು ಜಾಗ ಗೊತ್ತು ಮಾಡಲಾಗುವುದು ಎಂದರು. ಪ್ರಾಸ್ತಾವಿಕವಾಗಿ ಬಿಇಒ ಬಹರುದ್ಧೀನ್ ಚೋಪ್ದಾರ್ ಮಾತನಾಡಿ, ರಾಜ್ಯ ವಲಯ ಯೋಜನೆಯಲ್ಲಿ ಸುಮಾರು ₹17 ಲಕ್ಷ ದಲ್ಲಿ ಉತ್ತಮ ಕಟ್ಟಡ ನಿರ್ಮಾಣ ಮಾಡಿದೆ. ನಮ್ಮ ಶಾಸಕರು ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಅಡುಗೆ ಮನೆ, ಶೌಚಾಲಯ, ಕುಡಿಯುವ ನೀರು, ಸೇರಿದಂತೆ ಮೂಲ ಸೌಕರ್ಯ ಒದಗಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿ, ಕಟ್ಟಡ ಅತ್ಯುತ್ತಮವಾಗಿ ನಿರ್ಮಾಣವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಮಕ್ಕಳಿಗೆ ಉತ್ತಮ ಬದುಕನ್ನು ರೂಪಿಸಿಕೊಡಬೇಕು ಎಂದರು. ಪಿಎಲ್ ಡಿ. ಬ್ಯಾಂಕ್ ನಿರ್ದೇಶಕ ಆನಂದನಾಯ್ಕ ಮಾತನಾಡಿ, ಕುವೆಂಪು ಹೇಳಿದಂತೆ ಜಾತ್ಯಾತೀತ ರಾಷ್ಟ್ರ ವಾದ್ದರಿಂದ ಎಲ್ಲರಿಗೂ ಸಮಾನತೆಯಿದೆ. ಮಸೀದಿ ಮಂದಿರಗಳನ್ನು ಯಾವ ರೀತಿ ನಿರ್ವಹಣೆ ಮಾಡುತ್ತೇವೆಯೇ ಅದೇ ರೀತಿ ಶಾಲೆಗಳ ನಿರ್ವಹಣೆ ಮಾಡಬೇಕು. ಈ ನಿಟ್ಟಿನಲ್ಲಿ ಶಾಸಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದರು. ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷ ಅಕ್ಮಲ್ , ಗ್ರಾಪಂ ಅಧ್ಯಕ್ಷೆ ರಾಜಮ್ಮ, ಗ್ರಾಪಂ ಉಪಾಧ್ಯಕ್ಷೆ ತಾರಾ, ಸದಸ್ಯರಾದ ದಿನೇಶ್ಗೌಡ, ಫೈರೋಜ್ ಖಾನ್, ಚೇತನ್, ಸುಮನ್, ಗಣೇಶ್ಗೌಡ, ದೊಡ್ಡಮ್ಮ, ಜರೀನಾಬಿ, ಶಕುಂತಲಾ, ಪಿಡಿಒ ಲತಾ, ಶಿಕ್ಷಕರ ಸಂಘದ ಜಗದೀಶ್, ಜಿಲ್ಲಾ ಗ್ಯಾರೆಂಟಿ ಯೋಜನೆ ಉಪಾಧ್ಯಕ್ಷ ಮಂಜುನಾಥ್, ಎಸ್ಡಿಎಂಸಿ ಅಧ್ಯಕ್ಷ ರಫೀಕ್, ಮಸೀದಿ ಅಧ್ಯಕ್ಷ ಫಯಾಜ್, ಶಿಕ್ಷಕರು ಮಕ್ಕಳು ಹಾಜರಿದ್ದರು. 27ಕೆಕೆೆೆಡಿಯು2.
ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯನ್ನು ಶಾಸಕ ತಮ್ಮಯ್ಯ ಉದ್ಘಾಟಿಸಿದರು.