ವಾಸ್ತುಶಿಲ್ಪದ ವೈಜ್ಞಾನಿಕ ಅಧ್ಯಯನ ಅಗತ್ಯ: ಮೆನನ್‌

| Published : May 23 2024, 01:56 AM IST

ವಾಸ್ತುಶಿಲ್ಪದ ವೈಜ್ಞಾನಿಕ ಅಧ್ಯಯನ ಅಗತ್ಯ: ಮೆನನ್‌
Share this Article
  • FB
  • TW
  • Linkdin
  • Email

ಸಾರಾಂಶ

"ಮೂಕ ಕಲ್ಲುಗಳು ಹೇಳುವ ಕಥೆಗಳು " ಮಧ್ಯಕಾಲೀನ ಕರ್ನಾಟಕದಲ್ಲಿಯ ಶಿಲ್ಪ ಕೊರೆಯುವ ತಂತ್ರಗಾರಿಕೆ’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಪುರಾತನ ಪ್ರಸಿದ್ಧ ದೇವಸ್ಥಾನಗಳಲ್ಲಿ ಬಳಸಿರುವ ಕಲ್ಲುಗಳು ಮತ್ತು ವಿಶಿಷ್ಠ ವಾಸ್ತುಶಿಲ್ಪದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್ ಸ್ಟಡೀಸ್‌ನ ಮಾನವಿಕ ವಿಜ್ಞಾನಗಳ ಸಹ ಪ್ರಾಧ್ಯಾಪಕ ಪ್ರೊ.ಶ್ರೀಕುಮಾರ್ ಎಂ.ಮೆನನ್ ಅಭಿಪ್ರಾಯಪಟ್ಟರು.

ಮಿಥಿಕ್ ಸೊಸೈಟಿಯಲ್ಲಿ ಆಯೋಜಿಸಿದ್ದ ವಿದ್ಯಾರತ್ನ ಆರ್.ಎಸ್.ಪಂಚಮುಖಿ ದತ್ತಿ ಉಪನ್ಯಾಸದಲ್ಲಿ ‘ಮೂಕ ಕಲ್ಲುಗಳು ಹೇಳುವ ಕಥೆಗಳು: ಮಧ್ಯಕಾಲೀನ ಕರ್ನಾಟಕದಲ್ಲಿಯ ಶಿಲ್ಪ ಕೊರೆಯುವ ತಂತ್ರಗಾರಿಕೆ’ ವಿಷಯ ಕುರಿತು ಅವರು ಮಾತನಾಡಿದರು.

ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ ಮತ್ತಿತರ ಪ್ರದೇಶಗಳ ವಾಸ್ತುಶಿಲ್ಪವನ್ನು ಗಮನಿಸಿದಾಗ ಪ್ರಾಚೀನ ಮತ್ತು ಮಧ್ಯಕಾಲೀನ ಕರ್ನಾಟಕದಲ್ಲಿ ಪ್ರಚಲಿತವಿದ್ದ ವಾಸ್ತುಶಿಲ್ಪದ ಮಹತ್ವದ ಪರಿಚಯವಾಗುತ್ತದೆ. ಆದ್ದರಿಂದ ಈ ಪ್ರದೇಶಗಳಲ್ಲಿ ಲಭ್ಯವಿರುವ ಕಲ್ಲು ಮತ್ತು ಅದರ ಬಳಕೆಯ ತಂತ್ರಗಾರಿಕೆಯ ವೈಜ್ಞಾನಿಕ ಅಧ್ಯಯನ ಅತ್ಯವಶ್ಯಕವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಶ್ರೀನಿವಾಸ ಪಾಡಿಗಾರ್ ಮಾತನಾಡಿ, ಇತಿಹಾಸದ ಅಧ್ಯಯನದಲ್ಲಿ ಇತಿಹಾಸಕಾರರು ಕೇವಲ ದೇವಾಲಯದ ಶೈಲಿಯ ಬಗ್ಗೆ ಗಮನ ನೀಡುತ್ತಿದ್ದಾರೆ. ಇದರ ಜೊತೆಗೆ ವಾಸ್ತುಶಿಲ್ಪದ ತಂತ್ರಗಾರಿಕೆಯ ಬಗ್ಗೆ ಕೂಡ ವೈಜ್ಞಾನಿಕ ಅಧ್ಯಯನ ಇಂದಿನ ಅವಶ್ಯಕತೆಯಾಗಿದೆ ಎಂದು ತಿಳಿಸಿದರು. ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಎಸ್.ರವಿ ಮತ್ತಿತರರು ಹಾಜರಿದ್ದರು.