ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಕರಕುಶಲ ಉದ್ಯಮವು ಪ್ರಮುಖಪಾತ್ರ ವಹಿಸಿಲಾಗಿದೆ ಎಂದು ಮೈಸೂರಿನ ನೀಲಿ ಕಲಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ನೀಲಿ ಲೋಹಿತ್ ಹೇಳಿದರು.ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸಂಜೀವ ರತ್ನ ಮಹಲ್ ಕಾಲೇಜಿನ ಸಭಾಂಗಣದಲ್ಲಿ ಮಣ್ಣಿನ ಆಭರಣಗಳ ತಯಾರಿಕಾ ಪ್ರಮಾಣ ಪತ್ರ ಕಾರ್ಯಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸ್ವ ಉದ್ಯೋಗಕ್ಕೆ ಹೆಚ್ಚಿನ ಬಂಡವಾಳದ ಅವಶ್ಯಕತೆ ಇರುವುದಿಲ್ಲ ಬದಲಾಗಿ ಸೂಕ್ಷ್ಮತೆ ಮತ್ತು ಕ್ರಿಯಾಶೀಲತೆ ಹೊಂದಿದ್ದರೆ ಮಣ್ಣಿನ ಆಭರಣ ತಯಾರಿಕೆಯನ್ನು ಜೀವನ ನಿರ್ವಹಣೆಗೆ ಬಳಸಿಕೊಳ್ಳಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಉಷಾಮಾಲಿನಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸ್ವ ಉದ್ಯೋಗವನ್ನು ಮೈಗೂಡಿಸಿಕೊಂಡರೆ ಸ್ವಾವಲಂಬಿಗಳಾಗಿ ಬದುಕಬಹುದು ಹಾಗೂ ಆರ್ಥಿಕವಾಗಿ ಸದೃಢರಾಗಬಹುದು ಎಂದು ತಿಳಿಸಿದರು. ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ. ಬೋರೇಗೌಡ ಹಾಗೂ ಆರ್ . ನಂಜುಂಡ ಅವರನ್ನು ಅಭಿನಂದಿಸಿದರು. ಅಧ್ಯಾಪಕರಾದ ಐಕ್ಯೂಎಸಿ ಸಂಚಾಲಕ ರಾದ ಡಾ. ಮುಜಾಹಿದ್ ಖಾನ್ ಎಸ್, ಡಾ. ಪ್ರಭು ಉಪಾಸೇ, ಡಾ. ಜಗದೀಶ್ ನಡೆವಿನ ಮಠ, ಆನಂದ್ ಕೆ ಡಿ, ಶ್ರೀಕಾಂತ್ ಎನ್, ಡಾ. ಶೈಲಜಾ, ವಾಣಿ ವೈ ಡಿ, ವೀಣಾ, ರೀಮಾ, ಡಾ. ಚೆನ್ನಮ್ಮ, ಡಾ. ಅನುರಾಧ, ಡಾ. ಅನುಪಮಾ, ಚಂದ್ರಕಲಾ, ಗೆಜಿಟೆಡ್ ಮ್ಯಾನೇಜರ್ ಧನಂಜಯ, ಲೀಲಾ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))