ಕಥೆಗಳ ಓದಿನಿಂದ ನಿಸ್ವಾರ್ಥ ಭಾವ ಬೆಳೆಯುತ್ತದೆ: ನಟಿ ರಂಜನಿ

| Published : Mar 24 2024, 01:38 AM IST

ಕಥೆಗಳ ಓದಿನಿಂದ ನಿಸ್ವಾರ್ಥ ಭಾವ ಬೆಳೆಯುತ್ತದೆ: ನಟಿ ರಂಜನಿ
Share this Article
  • FB
  • TW
  • Linkdin
  • Email

ಸಾರಾಂಶ

ಕಥೆಗಳ ಓದಿನಿಂದ ಓದುಗರಲ್ಲಿ ನಿಸ್ವಾರ್ಥ ಹಾಗೂ ಸಮಾಜದ ಬಗೆಗಿನ ಸೂಕ್ಷ್ಮ ಸಂವೇದನೆಯ ಭಾವ ಬೆಳೆಯುತ್ತದೆ ಎಂದು ಕಿರುತೆರೆ ನಟಿ, ಕಥೆಗಾರ್ತಿ ರಂಜನಿ ರಾಘವನ್‌ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಥೆಗಳ ಓದಿನಿಂದ ಓದುಗರಲ್ಲಿ ನಿಸ್ವಾರ್ಥ ಹಾಗೂ ಸಮಾಜದ ಬಗೆಗಿನ ಸೂಕ್ಷ್ಮ ಸಂವೇದನೆಯ ಭಾವ ಬೆಳೆಯುತ್ತದೆ ಎಂದು ಕಿರುತೆರೆ ನಟಿ, ಕಥೆಗಾರ್ತಿ ರಂಜನಿ ರಾಘವನ್‌ ಅಭಿಪ್ರಾಯಪಟ್ಟಿದ್ದಾರೆ.

ಗಾಂಧಿನಗರದ ಸಪ್ನ ಬುಕ್‌ಹೌಸ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಸಪ್ನ ಯುಗಾದಿ ಕಥಾ ಸಂಗಮ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಥೆಗಳ ಓದಿನಿಂದ ನಮ್ಮೊಳಗಿನ ವ್ಯಕ್ತಿತ್ವ ಅರಿಯಬಹುದು. ಕಥೆಗಳು ಮನರಂಜನೆ, ಮನಶಾಂತಿಗೆ ಮಾತ್ರ ಓದಬೇಕು ಎಂಬ ಅಭಿಪ್ರಾಯವಿದೆ. ಆದರೆ, ಕಥೆಗಳ ಓದಿನಿಂದ ಸರಿ-ತಪ್ಪು, ವಿವಿಧ ದೃಷ್ಟಿಕೋನಗಳ ಅರಿವಾಗುತ್ತದೆ. ಅದರ ಜತೆಗೆ ನಮ್ಮೊಳಗೆ ನಿಸ್ವಾರ್ಥ ಭಾವನೆ, ಸಮಾಜದ ಬಗ್ಗೆ ಸೂಕ್ಷ್ಮತೆ ಬೆಳೆಯುತ್ತದೆ ಎಂದರು.

ಸಾಹಿತಿ ಗಿರೀಶ್‌ ಹತ್ವಾರ್‌ (ಜೋಗಿ) ಮಾತನಾಡಿ, ಯಾವುದೇ ಕಥೆಗಾರ ತಾನು ಹೇಳಲಾಗದ ಸತ್ಯವನ್ನು ಕಥೆಗಳ ಮೂಲಕ ಹೇಳಲು ಸಾಧ್ಯ. ಯಾವುದೇ ಸತ್ಯವನ್ನು ನೇರವಾಗಿ ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ಕಥೆಯ ಮೂಲಕ ಒಂದು ಪಾತ್ರ ಸೃಷ್ಟಿಸಿ ಹೇಳಲಾಗುತ್ತದೆ. ಆಗ ಯಾವುದೇ ಗಲಾಟೆಗೆ ಕಾರಣವಾಗುವುದಿಲ್ಲ. ಖೆತಘಲ ಬಗ್ಗೆ ನಿಜವಾದ ಅಭಿಪ್ರಾಯ ಹೇಳುವುದು ಬಹಳ ಕಷ್ಟದ ಕೆಲಸ. ಏಕೆಂದರೆ ಬಹಿರಂಗವಾಗಿ ಟೀಕೆ ಸ್ವೀಕರಿಸಲು ಯಾರೂ ಸಿದ್ಧರಿಲ್ಲ. ಅಲ್ಲದೆ, ಓದುಗರೇ ಇಲ್ಲ ಎನ್ನುವ ಸಂದರ್ಭದಲ್ಲಿ ಕಥಾ ಸಂಜೆ ಕಾರ್ಯಕ್ರಮ ಆಯೋಜಿಸಿ ವೇದಿಕೆ ಸೃಷ್ಟಿಸುವುದು ಶ್ಲಾಘನೀಯ ಎಂದು ಹೇಳಿದರು.

ಶಂಕರ್ ಸಿಹಿಮೊಗ್ಗೆ ಅವರು ‘ಬೆವರದ ತೊಗಲು’, ದಾದಾ ಪಿರ್ ಜೈಮ್ನ ‘ಅಪ್ಪನ ಕತ್ತರಿ’, ಎಎಸ್‌ಜಿ ತಮ್ಮದೇ ಕಥೆ ಹಾಗೂ ಅನಂತ ಕುಣಿಗಲ್ ‘ವಸರ್ಜನೆ’ ಕಥೆಗಳನ್ನು ಓದಿದರು. ಕವಿ ಸೂರ್ಯ ಕೀರ್ತಿ, ಸಪ್ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಇದ್ದರು.