ಮಣಿಪಾಲ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ಯುವಕನ ಬಂಧನ

| Published : Jun 07 2024, 12:31 AM IST

ಸಾರಾಂಶ

ಮಣಿಪಾಲದ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಣಿಪಾಲದ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟಮಾಡುತ್ತಿದ್ದ ಎಂದು ತನಿಖೆಯಿಂದ ಬಹಿರಂಗವಾಗಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲದ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೊಬ್ಬನನ್ನು ಮಣಿಪಾಲ ಪೊಲೀಸರು ನಗರದ ಹೊರವಲಯದ ಹೆರ್ಗ ಗ್ರಾಮದ ಅಪಾರ್ಟ್ ಮೆಂಟ್ ನಲ್ಲಿ ಬುಧವಾರ ಸಂಜೆ ಬಂಧಿಸಿದ್ದಾರೆ.

ಬಂಧಿತ ಆರೋಪಿ ಸಿದ್ದಾರ್ಥ್ (22) ಮೂಲತಃ ಕೇರಳದ ತಿರುವಂತಪುರದ ನಿವಾಸಿ. ಇಲ್ಲಿನ ಅಪಾರ್ಟ್‌ಮೆಂಟ್‌ ರೂಮ್‌ ಬಾಡಿಗೆ ಪಡೆದು ಗಾಂಜಾ ದಂದೆಯನ್ನು ನಡೆಸುತ್ತಿದ್ದ.

ದಾಳಿಯ ವೇಳೆ ಆತನಿಂದ 20,000 ರು. ಮೌಲ್ಯದ ಸುಮಾರು 388 ಗ್ರಾಂ ಗಾಂಜಾ ಹಾಗೂ 45,000 ರು. ಮೌಲ್ಯದ ಮೊಬೈಲ್‌ ಫೋನ್‌ನನ್ನು ಜಪ್ತಿ ಮಾಡಲಾಗಿದೆ. ಈತ ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂದು ತನಿಖೆಯಿಂದ ಬಹಿರಂಗವಾಗಿದೆ.

ಮಣಿಪಾಲ ಠಾಣಾ ಪೊಲೀಸ್‌ ನಿರೀಕ್ಷಕರಾದ ದೇವರಾಜ್‌ ಟಿ.ವಿ., ಉಡುಪಿ ತಾಲೂಕು ಅಸಿಸ್ಟೆಂಟ್‌ ಡ್ರಗ್‌ ಕಂಟ್ರೋಲರ್‌ ಶಂಕರ ಮಾನ್ಯ, ಎಸ್ಐ ರಾಘವೇಂದ್ರ ಸಿ, ಎಎಸ್‌ಐ ವಿವೇಕಾನಂದ ಮತ್ತು ಶೈಲೇಶ್‌ ಕುಮಾರ್‌ ಹಾಗೂ ಸಿಬ್ಬಂದಿ ಸುಕುಮಾರ, ಅರುಣ ಕುಮಾರ್‌, ಚನ್ನೇಶ್‌, ಮಂಜುನಾಥ ದಾಳಿಯಲ್ಲಿ ಭಾಗವಹಿಸಿದ್ದರು.