ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌ ಮುಖ್ಯಅತಿಥಿಯಾಗಿದ್ದರು

ಕನ್ನಡಪ್ರಭ ವಾರ್ತೆ ಮೈಸೂರುನಗರದ ಜಯಲಕ್ಷ್ಮೀಪುರಂ ಆಸ್ಪತ್ರೆ ರಸ್ತೆಯಲ್ಲಿರುವ ಹಿರಿಯ ನಾಗರಿಕರ ವಿಶ್ವಸ್ಥ ಮಂಡಳಿ ಹಾಗೂ ಹಿರಿಯ ನಾಗರಿಕ ಮಂಡಳಿಯ ಸಂಸ್ಥಾಪನಾ ದಿನವು ಶುಕ್ರವಾರ ಜರುಗಿತು.ಕಾವೇರಿ ಆಸ್ಪತ್ರೆ ಸಂಸ್ಥಾಪಕ ಡಾ..ಜಿ.ಆರ್‌. ಚಂದ್ರಶೇಖರ್‌ ಕಾರ್ಯಕ್ರಮ ಉದ್ಘಾಟಿಸಿದರು. ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌ ಮುಖ್ಯಅತಿಥಿಯಾಗಿದ್ದರು. ಹಿರಿಯ. ನಾಗರಿಕರ ವಿಶ್ವಸ್ಥ ಮಂಡಲಿಯ ಚೇರ್ಮನ್‌ ಎಸ್‌.ವಿ. ಗೌಡಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ನಾಗರಿಕರ ಮಂಡಳಿಯ ಅಧ್ಯಕ್ಷ ಡಾ..ಎಚ್‌.ಎಂ. ನಾಗರಾಜು ವೇದಿಕೆಯ್ಲಲಿದ್ದರು.ಇದೇ ಸಂದರ್ಭದಲ್ಲಿ ಡಾ.ಎನ್‌.ಎಸ್. ರಾಮೇಗೌಡ, ಡಾ.ಬಿ.ವಿ. ಶಿವಮೂರ್ತಿ, ಸಿ.ಎಲ್‌. ಶ್ರೀಕಂಠಯ್ಯ, ಹುಚ್ಚೇಗೌಡ ಹಾಗೂ ಮಂಜುಳಾ ಡಿ. ರಾಜಶೇಖರ್‌ ಅವರನ್ನು ಸನ್ಮಾನಿಸಲಾಯಿತು. ಎಂ.ಕೆ. ನಂಜಯ್ಯ, ಕೃಷ್ಣ,. ಎಸ್‌.ವಿ. ವೆಂಕಟೇಶಯ್ಯ, ಕೆ.ವಿ. ರಾಮನಾಥ್‌ ಮೊದಲಾದವರು ಇದ್ದರು.