ಹಿರಿಯ ನಾಗರೀಕರ ಆರೋಗ್ಯಕರ ಜೀವನ ಶೈಲಿ ಕುರಿತು ಸಲಹೆ

| Published : Sep 10 2024, 01:37 AM IST

ಹಿರಿಯ ನಾಗರೀಕರ ಆರೋಗ್ಯಕರ ಜೀವನ ಶೈಲಿ ಕುರಿತು ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ವಯಸ್ಸಿನವರು ಯಾವುದೇ ಖಾಯಿಲೆಯಿಂದ ಮುಕ್ತ ಆರೋಗ್ಯ ಕಾಪಾಡಿಕೊಳ್ಳಲು ಅನಗತ್ಯ ಕೊಬ್ಬನ್ನು ನೈಸರ್ಗಿಕವಾಗಿ ಗ್ಲೋಕೋಸಾಗಿ ಪರಿವರ್ತಿಸಲು ದೈಹಿಕ ಚಲನೆ ಮತ್ತು ವ್ಯಾಯಾಮ ತುಂಬ ಅಗತ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಹಿರಿಯ ನಾಗರಿಕರ ಮಂಡಳಿಯು ಆರೋಗ್ಯ ನಿರ್ವಹಣೆ ಕುರಿತ ಉಪನ್ಯಾಸ ಸರಣಿಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೆಡಿವೇವ್‌ ಫರ್ಟಿಲಿಟಿ ಸಂಶೋಧನಾ ಆಸ್ಪತ್ರೆಯ ವೈದ್ಯ ಡಾ.ಸಿ. ಶರತ್‌ಕುಮಾರ್‌ ಅವರು ಆರೋಗ್ಯಕರ ಜೀವನ ಶೈಲಿಯ ಕುರಿತು ಸಲಹೆ ನೀಡಿದರು.

ಈ ವೇಳೆ ಪಿ.ಪಿ ಪ್ರದರ್ಶನ ನೀಡಿದ ಅವರು, ಯಾವುದೇ ವಯಸ್ಸಿನವರು ಯಾವುದೇ ಖಾಯಿಲೆಯಿಂದ ಮುಕ್ತ ಆರೋಗ್ಯ ಕಾಪಾಡಿಕೊಳ್ಳಲು ಅನಗತ್ಯ ಕೊಬ್ಬನ್ನು ನೈಸರ್ಗಿಕವಾಗಿ ಗ್ಲೋಕೋಸಾಗಿ ಪರಿವರ್ತಿಸಲು ದೈಹಿಕ ಚಲನೆ ಮತ್ತು ವ್ಯಾಯಾಮ ತುಂಬ ಅಗತ್ಯ ಎಂದರು.

50 ವರ್ಷ ಮೇಲ್ಪಟ್ಟ ಬಳಿಕ ಜೀವಿತಾವಧಿಯನ್ನು ತುಂಬ ಎಚ್ಚರಿಕೆಯಿಂದ ಗಮನಿಸಬೇಕು. ಪ್ರಮುಖವಾಗಿ ಪುರುಷರಲ್ಲಿನ ಪ್ರೊಸ್ಟ್ರೇಟ್‌ಗ್ರಂಥಿಗಳ ಬೆಳವಣಿಗೆ ನಿಯಂತ್ರಿಸಿ ಮೂತ್ರಕೋಶದ ಸಮಸ್ಯೆ ತಡೆಯಲು ಪ್ರಯತ್ನಿಸಬೇಕು. ರಕ್ತದ ಒತ್ತಡ, ಮಧುಮೇಹ, ದುರ್ಬಲಗೊಂಡ ಜೀರ್ಣಾಂಗ ವ್ಯವಸ್ಥೆಯಿಂದ ನಿದ್ರಾಹೀನತೆ ಸಮಸ್ಯೆ, ಕೀಲುನೋವುಗಲಿಗೆ ಕಾರಣವಾಗುವ ನರಮಂಡಲವು ದುರ್ಬಲವಾಗುತ್ತದೆ ಎಂದರು.

ಹೃದಯ ತೊಂದರೆಗಳು, ಮೂಳೆ ಚಿಕಿತ್ಸೆ, ಸಂಧಿವಾತ ಸಮಸ್ಯೆ ಎದುರಿಸಬೇಕಾಗುತ್ತದೆ. ಮಹಿಳೆಯರು ಮೆನೋಪಾಸ್‌ನಿಂದ ಖಿನ್ನತೆಗೆ ಕಾರಣವಾಗುವ ವಯಸ್ಸಿನ ಋತುಬಂಧದಿಂದ ಬಳಲುತ್ತಿದ್ದಾರೆ ಎಂದರು.

50 ವರ್ಷ ಮೇಲ್ಪಟ್ಟವರು ಹೆಚ್ಚು ನೀರು ಸೇವಿಸಬೇಕು, ಎಳನೀರು ರೂಪದಲ್ಲಿ ನೈಸರ್ಗಿಕ ನೀರು ಸೇವಿಸಿ, ನಿಂಬೆರಸ ಸೇವಿಸುವುದು, ಹೆಚ್ಚು ಹಣ್ಣು, ತರಕಾರಿ ತಿನ್ನುವುದು, ದೈಹಿಕ ಶಕ್ತಿಯನ್ನು ಪುನರ್ಯೂವ್ವನಗೊಳಿವುದು, ಯೋಗ, ಪ್ರಾಣಾಯಾಮ, ನಡಿಗೆ ಮುಂತಾದ ದೈಹಿಕ ವ್ಯಾಯಾಮ ಅಳವಡಿಸಿಕೊಳ್ಳುವುದು, ಗ್ರೀನ್‌ಟೀ, ಪುದಿನ ಟೀ, ನಿಂಬೆರಸ, ತರಕಾರಿ ಸೂಪ್‌, ಬೀರ್‌ಮತ್ತು ಬಿಸಿ ಪಾಈಯವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ದೇಹದ ವಿವಿಧ ಭಾಗಗಳನ್ನು ಸಕ್ರಿಯಗೊಳಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಮಂಡಳಿ ಅಧ್ಯಕ್ಷ ಡಾ.ಎಚ್‌.ಎಂ. ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ ಛೇರ್ಮನ್‌ ಗೌಡಪ್ಪ, ಕಾರ್ಯದರ್ಶಿ ಕೃಷ್ಣ ಇದ್ದರು.