ಸಾರಾಂಶ
ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ, ರಾಜ್ಯದ ವಿವಿಧೆಡೆ ಇರುವ ಜನತಾ ಹೋಟೆಲ್ ಸಮೂಹ ಸಂಸ್ಥೆಯ ಸಂಸ್ಥಾಪಕ, ರಾಜ್ಯ ಹೋಟೆಲ್ ಮಾಲೀಕರ ಸಂಘ ಮಾಜಿ ಅಧ್ಯಕ್ಷ ಕೆ.ವಿ. ಆನಂದ ರಾವ್ ನಗರದಲ್ಲಿ ಮಂಗಳವಾರ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.
- ಬ್ರಾಹ್ಮಣ ಸಮಾಜದ ಹಿರಿಯರು, ಜನತಾ ಹೋಟೆಲ್ ಸಮೂಹ ಸಂಸ್ಥೆ ಸಂಸ್ಥಾಪಕ - ದಾವಣಗೆರೆ, ಉಡುಪಿ, ಬೆಂಗಳೂರು, ಕಲಬುರಗಿ ಸೇರಿದಂತೆ ವಿವಿಧೆಡೆ ಹೋಟೆಲ್, ಲಾಡ್ಜ್, ಬೇಕರಿ ಆರಂಭಿಸಿದ್ದರು - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ, ರಾಜ್ಯದ ವಿವಿಧೆಡೆ ಇರುವ ಜನತಾ ಹೋಟೆಲ್ ಸಮೂಹ ಸಂಸ್ಥೆಯ ಸಂಸ್ಥಾಪಕ, ರಾಜ್ಯ ಹೋಟೆಲ್ ಮಾಲೀಕರ ಸಂಘ ಮಾಜಿ ಅಧ್ಯಕ್ಷ ಕೆ.ವಿ. ಆನಂದ ರಾವ್ ನಗರದಲ್ಲಿ ಮಂಗಳವಾರ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.ಅವರು ಇಬ್ಬರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ, ಕಾರ್ಮಿಕ ಬಂಧುಗಳನ್ನು ಹೊಂದಿದ್ದಾರೆ. ಆನಂದ ರಾವ್ ಮೊಮ್ಮಗ, ಕೆಲ ವರ್ಷದ ಹಿಂದಷ್ಟೇ ಐಎಎಸ್ ಅಧಿಕಾರಿಯಾದ ಅವಿನಾಶ ವಿಠ್ಠಲ ರಾವ್ ಅವರು ಸದ್ಯ ಫ್ರಾನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದ ವೈಕುಂಠ ಧಾಮದಲ್ಲಿ ಮಂಗಳವಾರ ಮೃತ ಆನಂದ ರಾವ್ ಅಂತ್ಯಕ್ರಿಯೆ ನೆರವೇರಿತು.
ಜನಾನುರಾಗಿ ವ್ಯಕ್ತಿತ್ವದ, ಸರಳ ಸಜ್ಜನಿಕೆಯ ಆನಂದ ರಾವ್ ಜನತಾ ಸಮೂಹ ಸಂಸ್ಥೆಗಳನ್ನು ದಾವಣಗೆರೆಯಷ್ಟೇ ಅಲ್ಲ, ಉಡುಪಿ, ಬೆಂಗಳೂರು, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧೆಡೆ ಹೋಟೆಲ್, ಲಾಡ್ಜ್, ಬೇಕರಿ ಹೀಗೆ ಸಮೂಹ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರನ್ನು ತಮ್ಮದೇ ಕುಟುಂಬ ಸದಸ್ಯರಂತೆ, ಕಾರ್ಮಿಕರ ಮಕ್ಕಳ ಓದಿಗೆ ನೆರವು ನೀಡುವ ಮೂಲಕ ಕಾರ್ಮಿಕರ ಮಕ್ಕಳ ಭವಿಷ್ಯ ಕಟ್ಟಿಕೊಡುವ ಕೆಲಸ ನಿರಂತರ ಮಾಡಿಕೊಂಡು ಬಂದಿದ್ದರು.
- - - -26ಕೆಡಿವಿಜಿ7: ಕೆ.ವಿ.ಆನಂದ ರಾವ್