ಬೆಟ್ಟದಪುರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ

| Published : Jun 06 2024, 12:31 AM IST

ಬೆಟ್ಟದಪುರದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರ ನಮಗೆ ಅತ್ಯ ಅಮೂಲ್ಯವಾದ ಸಂಪತ್ತು ಅದನ್ನು ನಾವು ನಾಶ ಮಾಡದೆ ಪ್ರತಿ ವರ್ಷ ಪ್ರತಿದಿನ ಗಿಡ ಮರಗಳನ್ನು ಸಂರಕ್ಷಿಸಿ ಪರಿಸರದಿಂದ ಆಗುವ ಹಲವಾರು ಉಪಯೋಗಗಳನ್ನು ನಾವು ಪಡೆಯಬೇಕು,

ಫೋಟೋ- 5ಎಂವೈಎಸ್ 58

----------

ಕನ್ನಡಪ್ರಭ ವಾರ್ತೆ ಬೆಟ್ಟದಪುರ

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಗ್ರಾಮದ ಪೊಲೀಸ್ಠಾಣೆಯ ಎಸ್.ಐ ಪ್ರಕಾಶ್ ಎಂ. ಯತ್ತಿನಮನಿ ಮಾತನಾಡಿ, ಪರಿಸರ ನಮಗೆ ಅತ್ಯ ಅಮೂಲ್ಯವಾದ ಸಂಪತ್ತು ಅದನ್ನು ನಾವು ನಾಶ ಮಾಡದೆ ಪ್ರತಿ ವರ್ಷ ಪ್ರತಿದಿನ ಗಿಡ ಮರಗಳನ್ನು ಸಂರಕ್ಷಿಸಿ ಪರಿಸರದಿಂದ ಆಗುವ ಹಲವಾರು ಉಪಯೋಗಗಳನ್ನು ನಾವು ಪಡೆಯಬೇಕು, ಮನುಷ್ಯನಿಗೆ ಉಸಿರಾಡಲು ಬೇಕಾದ ಅತ್ಯ ಅಮೂಲ್ಯವಾದ ಗಾಳಿಯನ್ನು ಗಿಡಮರಗಳು ನೀಡುವುದರಿಂದ ಮನುಷ್ಯ ಆರೋಗ್ಯಕರವಾಗಿ ಇರಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಸಿಆರ್.ಪಿ ಚಂದ್ರಶೇಖರ್ ಮಾತನಾಡಿ, ಮಕ್ಕಳು ಪರಿಸರದ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ಪರಿಸರದ ಜ್ಞಾನವನ್ನು ಹೆಚ್ಚಿಸಿಕೊಂಡು ಮುಂದಿನ ಸಮಾಜಕ್ಕೆ ಅತ್ಯಮೂಲ್ಯವಾದ ಗಾಳಿ ನೆರಳು ಮಳೆಯನ್ನು ನೀಡುವ ಪರಿಸರ ಸ್ವಚ್ಛವಾಗಿಡಲು ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.

ಮುಖ್ಯಶಿಕ್ಷಕ ಸುರೇಶ್, ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು ಪುಸ್ತಕಗಳನ್ನು ವಿತರಿಸಿದರು. ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.