ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾವು ಓದಿದ ಶಾಲೆಗಳ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ರೋಟರಿ ಶಾಲೆ ಸಂಸ್ಥಾಪಕ ಎನ್.ಟಿ.ರಂಗನಾಥ್ ಹೇಳಿದರು.ಪಟ್ಟಣದ ರೋಟರಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ವತಿಯಿಂದ ನಡೆದ ಗುರುವಂದನಾ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವ ಜೊತೆಗೆ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳ ಮಾಡುವುದಕ್ಕೆ ಶ್ರಮಿಸಬೇಕು ಎಂದರು.
ವರ್ಷಗಳು ಕಳೆದಂತೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯ ಕಡಿಮೆಯಾಗುತ್ತಿದ್ದಾರೆ. ಹಾಗಾಗಿ ಶಾಲೆಯಲ್ಲಿ ಓದಿ ಉತ್ತಮ ಭವಿಷ್ಯ ಕಟ್ಟಿಕೊಂಡಿರುವ ವಿದ್ಯಾರ್ಥಿಗಳು ತಾವು ಓದಿದ ಶಾಲೆಗಳ ಉಳಿವಿಗೆ ಶ್ರಮಿಸಿ ಮಕ್ಕಳ ದಾಖಾತಿ ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.ಶಾಲೆಯಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಗುರುವಂದನೆ ಕಾರ್ಯಕ್ರಮದಿಂದ ನನಗೆ ತುಂಬಾ ಸಂತೋಷವಾಗಿದೆ. ಮನೆಬಿಟ್ಟು ಹೊರಗಡೆ ಹೋದ ಮಗ ವಾಪಸ್ಸು ಮನೆಗೆ ಬಂದಾಗ ಮತ್ತು ಮದುವೆಯಾಗಿ ಗಂಡನ ಮನೆಗೆ ಹೋದ ಮಗಳು ತವರು ಮನೆಗೆ ಬಂದಾಗ ಮನೆಯವರಿಗೆ ಆಗುವ ಸಂತೋಷದಂತಾಗಿದೆ. ಶಾಲೆಯಲ್ಲಿ ಓದಿ ಹೊರಗಡೆ ಹೋದ ವಿದ್ಯಾರ್ಥಿಗಳು ತಾವು ಓದಿದ ಶಾಲೆಗಳನ್ನು ನೆನಪಿನಲ್ಲಿಟ್ಟುಕೊಂಡು ಅಭಿವೃದ್ಧಿಗೆ ಮುಂದಾಗಬೇಕು, ಜತೆಗೆ ಗುರುಗಳನ್ನು ಗೌರವಿಸಬೇಕು ಎಂದರು.
ಮುಖ್ಯಶಿಕ್ಷಕ ನಾರಾಯಣಸ್ವಾಮಿ ಮಾತನಾಡಿ, ಉತ್ತಮವಾದ ಫಲಿತಾಂಶ ಶಾಲೆಗೆ ಬರುತ್ತಿದೆ. ಕಳೆದ ಬಾರಿ ಶೇ.90ರಷ್ಟು ಫಲಿತಾಂಶ ಬಂದಿದೆ. ಮುಂದಿನ ದಿನಗಳಲ್ಲಿ ಶೇ.100ರಷ್ಟು ಫಲಿತಾಂಶ ತರಲು ಶ್ರಮಿಸುತ್ತೇವೆ ಎಂದರು.ಸಂಸ್ಥೆಯನ್ನು ಸಾಕಷ್ಟು ಕಷ್ಟಪಟ್ಟು ನಿರ್ವಹಿಸಿಕೊಂಡು ಆಡಳಿತ ಮಂಡಳಿಯವರು ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕಡಿಮೆ ಶುಲ್ಕ ಪಡೆದು ಶಾಲೆ ಉಳಿಸಿದ್ದಾರೆ. ಸಂಸ್ಥೆಯೂ ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದೆ. ಹಿರಿಯ ವಿದ್ಯಾರ್ಥಿಗಳು ಗುರುವಂದನ ಸಮಾರಂಭದ ಮೂಲಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಯಂತ್ರ ಹಾಗೂ ಬ್ಯಾಂಡೆಸೆಟ್ ವಿತರಣೆ ಮಾಡಿದ್ದಾರೆ ಎಂದರು.
ನಿವೃತ್ತ ಶಿಕ್ಷಕಿ ಪಾರ್ವತಮ್ಮ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಗುರುಗಳಿಗೆ ವಂದನೆ ಸಲ್ಲಿಸಬೇಕು ಎಂಬ ಸಂಸ್ಕಾರ ಬಂದಿದೆ ಎಂದರೆ ಅದಕ್ಕೆ ತಮ್ಮ ತಂದೆ-ತಾಯಿಗಳು ಕಲಿಸಿಕೊಟ್ಟ ಸಂಸ್ಕಾರ ಎತ್ತಿತೋರುತ್ತದೆ ಎಂದರು.ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿ ಎನ್.ಆರ್.ರವಿ ಮಾತನಾಡಿದರು. ಇದೇ ವೇಳೆ 2005-06ನೇ ಸಾಲಿನ ವಿದ್ಯಾರ್ಥಿಗಳು ಶಾಲೆಗೆ ಶುದ್ಧ ಕುಡಿಯುವ ನೀರಿನ ಯಂತ್ರ ಹಾಗೂ ಬ್ಯಾಂಡೆಸೆಟ್ ವಿತರಿದರು. ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರಾದ ದಿನೇಶ್, ರಾಣಿ, ಪಾರ್ವತಿ, ಜಮೀನತಾಜ್, ಲೋಕೇಶ್ವರಿ, ಶಾಂತ, ಪ್ರತೀಮಾ, ರಾಜಶ್ರೀ, ನಾಗರತ್ನ, ಸ್ವಪ್ನ, ಗೀತಾ, ಹೇಮಣ್ಣ, ಪ್ರಮೀಳ, ಆನಂದ್, ಕುಮಾರ್ ಅವರನ್ನು ಅಭಿನಂಧಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ತಿಮ್ಮೇಗೌಡ, ಕಾರ್ಯದರ್ಶಿ ಅಶೋಕ್ ಜೈನ್, ನಿರ್ದೇಶಕರಾದ ರಮೇಶ್, ಆರ್.ರವಿ, ಶಿಕ್ಷಕ ಶಿವರಾಜು ಸೇರಿದಂತೆ ಹಲವರು ಹಾಜರಿದ್ದರು.;Resize=(128,128))
;Resize=(128,128))
;Resize=(128,128))